38 ವರ್ಷಗಳ ಹಿಂದಿನ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 23 : ಪುತ್ತೂರು ನಗರ ಠಾಣಾ ವ್ಯಾಪ್ತಿಯ 38 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ಪೋಲಿಸಿಸರು ಯಶಸ್ವಿಯಾಗಿದ್ದಾರೆ.

ಹುಡುಗನ ಮೇಲೆ ಟ್ಯೂಷನ್ ಟೀಚರ್ ಲೈಂಗಿಕ ದೌರ್ಜನ್ಯ, ಹಣಕ್ಕೆ ಒತ್ತಾಯ

ವಿದೇಶದಿಂದ ಸ್ವದೇಶಕ್ಕೆ ಮರಳಿ ಬಂದು ವಿಳಾಸ ಬದಲಾಯಿಸಿಕೊಂಡು ಇಲ್ಲಿನ ಬಂಡಿಜಾಲು ಎಂಬಲ್ಲಿ ನೆಲೆಸಿದ್ದ ಆರೋಪಿ ಅಬ್ದುಲ್ ಖಾದರ್ ನನ್ನು ಪುತ್ತೂರು ಪೊಲೀಸರು ಬಂಧಿಸಿ ಇಂದು (ಬುಧವಾರ) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Accused arrested after 38 years of crime at puttur

1979ರಲ್ಲಿ ಅಬ್ದುಲ್ ಕುಂಜಿ ಎಂಬವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ 14 ಮಂದಿ ಆರೋಪಿಗಳ ಪೈಕಿ ಎರಡನೇ ಆರೋಪಿಯಾಗಿದ್ದ ಬಂಡಿಜಾಲು ಗ್ರಾಮದ ಅಬ್ದುಲ್ ಖಾದರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಬಹರೈನ್ ಗೆ ತೆರಳಿ ತಲೆಮರೆಸಿಕೊಂಡಿದ್ದರು.

2010ರಲ್ಲಿ ಸ್ವದೇಶಕ್ಕೆ ಮರಳಿದ ಅಬ್ದುಲ್ ಖದರ್ ವಿಳಾಸ ಬದಲಾಯಿಸಿಕೊಂಡು ಬಂಡಿಜಾಲು ಎಂಬಲ್ಲಿ ವಾಸವಿದ್ದ, ಈ ಬಗ್ಗೆ ಮಾಹಿತಿ ಪಡೆದುಕೊಂಡ ಪುತ್ತೂರು ನಗರ ಠಾಣೆಯ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Abdul Khadar who was a prime accused in an assault case at puttur was absconding since 38 years without attending the court is now caught by the Puttur town police here on Aug 23.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X