ಮಂಗಳೂರು : ಸಿಟಿ ಬಸ್- ಕಂಟೈನರ್ ಟ್ರಕ್ ನಡುವೆ ಅಪಘಾತ ಮಹಿಳೆ ಸಾವು, 17 ಮಂದಿಗೆ ಗಾಯ

Posted By: ಕಿರಣ್ ಸಿರ್ಸಿಕರ್
Subscribe to Oneindia Kannada
   ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್- ಕಂಟೈನರ್ ಟ್ರಕ್ ಮುಖಾಮುಖಿ ಡಿಕ್ಕಿ | Oneindia Kannada

   ಮಂಗಳೂರು, ಡಿಸೆಂಬರ್ 07 : ಖಾಸಗಿ ಸಿಟಿ ಬಸ್- ಕಂಟೈನರ್ ಟ್ರಕ್ ನಡುವೆ ಡಿಸೆಂಬರ್ 07ರ ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು , 17 ಮಂದಿ ಗಾಯಗೊಂಡಿದ್ದಾರೆ.

   ಮಂಗಳೂರಿನ ನಂತೂರು ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಮೃತಪಟ್ಟವರನ್ನು ಗುರುಪುರ ಕೈಕಂಬದ ಕವಿತಾ (50) ಎಂದು ಗುರುತಿಸಲಾಗಿದೆ.

   Accident in Mangalore one woman died, 17 injured

   ವೆನ್ ಲಾಕ್ ಸರಕಾರಿ ಆಸ್ಪತ್ರೆ ಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ , ಬಸ್ ನ ಮುಂಭಾಗ ಕುಳಿತಿದ್ದರು ಡಿಕ್ಕಿ ಉಂಟಾದ ತೀರ್ವವಾಗಿ ಗಾಯಗೊಂಡಿದ್ದರು.

   ಗಂಭೀರ ಗಾಯಗೊಂಡ ಕವಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

   Accident in Mangalore one woman died, 17 injured

   ಘಟನೆಯಲ್ಲಿ 17 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಬಸ್ ನಗರದ ಬಿಕರ್ನಕಟ್ಟೆಯಿಂದ ಸ್ಟೇಟ್ ಬ್ಯಾಂಕ್ ನತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

   ಡಿಕ್ಕಿ ಉಂಟಾಗಿರುವ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ಜಖಂ ಆಗಿವೆ. ಘಟನೆಗೆ ಸಂಬಂಧಿಸಿದಂತೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Accident between private bus container truck in Mangalore's Santhur junction. a woman killed on the spot and 17 passengers injured.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ