ಬೆಳ್ತಂಗಡಿ ತಾಲೂಕು ಕಚೇರಿಯ ಪ್ರ.ದ.ಸ ಮನೆ ಮೇಲೆ ಎಸಿಬಿ ದಾಳಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 22 : ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲೂ ಭ್ರಷ್ಟಾಚಾರ ನಿಗ್ರಹ ದಳದ( ಎಸಿಬಿ) ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗೋವಿಂದ್ ನಾಯ್ಕ್ ಅವರ ಗುರುವಾಯನಕೆರೆಯಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ.

ಗುರುವಾಯನಕೆರೆಯಲ್ಲಿರುವ ಅವರ ನಿವಾಸದಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ 12,80,000 ರು ಬೆಲೆಬಾಳುವ ಚಿನ್ನಾಭರಣಗಳು, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದಲ್ಲಿ 26ಗುಂಟೆ ಕೃಷಿ ಭೂಮಿ ಹಾಗೂ ಒಂದು ಮನೆ, 50,000 ಬೆಲೆಬಾಳುವ ಬೆಳ್ಳಿ ವಸ್ತುಗಳು, 10 ಲಕ್ಷ ರೂ. ಠೇವಣಿ ಇರುವುದು ಪತ್ತೆಯಾಗಿದ್ದು ಶೋಧನಾ ಕಾರ್ಯಚರಣೆ ಜಾರಿಯಲ್ಲಿದೆ.

Acb raid on Belthangady taluk tahsildar first-class office assistant Govind Naik house

ಗೋವಿಂದ್ ನಾಯ್ಕ್ ಪತ್ನಿ ಲಿಲಾವತಿ ಹೆಚ್ ಬಿ ಅವರು ಕೂಡ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಪುಂಜಾಲಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಎಸಿಬಿ ಎಸ್ಪಿ ಚನ್ನಬಸಪ್ಪ ನೇತೃತ್ವದ ತಂಡ ಬೆಳ್ತಂಗಡಿ ತಾಲೂಕು ಕಚೇರಿಗೆ ಹೋಗಿ ಪರಿಶೀಲನೆ ನಡೆಸಿ ತನಿಖೆ ನಡೆಸಿತು. ಈ ತಂಡದಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಹೆಗಡೆ, ವೃತ್ತ ನಿರೀಕ್ಷಕ ಯೋಗೀಶ್ ಕುಮಾರ್ ಕೂಡಾ ಇದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anti Corruption Bureau(ACB) raid on Belthangady taluk tahsildar first-class office assistant Govind Naik' Belthangady taluk Guruvayanakere village house on December 22.
Please Wait while comments are loading...