ಮಂಗಳೂರು: ಮೂರು ವರ್ಷದ ಹಿಂದಿನ ಘಟನೆ ಆರೋಪಿ ಬಂಧನ

Posted By:
Subscribe to Oneindia Kannada

ಮಂಗಳೂರು, ಜುಲೈ 22: ಮೂರು ವರ್ಷದ ಹಿಂದೆ ನಡೆದಿದ್ದ ಹಲ್ಲೆ ಘಟನೆಯೊಂದರ ಆರೋಪಿಯನ್ನು ಪೊಲೀಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಬಂಧಿಸಿದ್ದಾರೆ.

ಮಂಗಳೂರು: ವಾರಸುದಾರರಿಲ್ಲದ ಬಿಹಾರದ 13 ಬಾಲಕರು ಪತ್ತೆ

ನವಾಝ್ ಬಂಧಿತ ಆರೋಪಿಯಾಗಿದ್ದು, ಇತನ ಮೇಲೆ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಲಾಗಿತ್ತು. 2014 ಸೆ.೧೪ ರಂದು ಕೋಡಿಂಬಾಡಿ ಮಸೀದಿಯಲ್ಲಿ ಲೆಕ್ಕ ಪರಿಶೋಧನೆಯನ್ನು ಮಾಡುತ್ತಿದ್ದ ಜಿ.ಎಸ್.ಹನೀಫ್ (42) ಎಂಬುವರ 8 ಜನರೊಂದಿಗೆ ಸೇರಿ ನವಾಝ್ ಹಲ್ಲೆ ನಡೆಸಿದ್ದ. ಈ ಸಂಬಂಧ ನವಾಝ್ ಮೇಲೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

/news/mangalore/14-boys-from-bihar-without-documents-stopped-railway-police-sent-to-child-home-122141.html

ಆದರೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನವಾಝ್ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ, ಆಗ ಪುತ್ತೂರು ನಗರ ಠಾಣೆಯಲ್ಲಿ ಆತನ ಮೇಲೆ ಲುಕ್ ಔಟ್ ಸರ್ಕ್ಯುಲರ್ (LOC) ಅನ್ನು ತೆರೆಯಲಾಗಿತ್ತು.

ನವಾಝ್ ಮೂರು ವರ್ಷದ ನಂತರ ವಿದೇಶದಿಂದ ಮನೆಗೆ ಬರುವ ವಿಷಯ ತಿಳಿದ ಪೊಲೀಸರು, ನವಾಝ್ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Person who was absconding since three years in abroad is now caught at Mangaluru International Airport. The arrested is identified as Navaz. Cops had issued a Look out circular on Navaz and as per confirmed information the police officers have succeeded in Nabbing Navaz at MIA here on July 22.
Please Wait while comments are loading...