ಮಂಗಳೂರು: ಮದುವೆಗೆಂದು ಹೋದವರು ಆಸ್ಪತ್ರೆ ಸೇರಿದ್ರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಫೆಬ್ರವರಿ, 11: ಬಸ್ ಹಾಗೂ ಲಾರಿ ನಡುವೆ ಗುಂಡ್ಯದ ಸಮೀಪದರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 10ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಚಾಲಕ ಶಿವಮೂರ್ತಿ ಸೇರಿದಂತೆ, ಕ್ಲೀನರ್ ರಂಗಸ್ವಾಮಿ, ನಾಗಭೂಷಣ್(75), ಶಶಿಭೂಷಣ್, ಜಯೇಂದ್ರ ಕುಮಾರ್(63),ಪ್ರೇಮದಾಸ್(48), ಚಂದ್ರಾವತಿ, ರಿಷಿತ(18) ಎಂಬುವವರು ಗಾಯಗೊಂಡಿದ್ದಾರೆ. [ಅಪಘಾತ: ಶಾಸಕ ಮೊಯಿದ್ದೀನ್ ಬಾವಾಗೆ ಗಾಯ]

Mangaluru

ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದ ಬಸ್ ನಲ್ಲಿ ಸುಮಾರು 40 ಮಂದಿ ಇದ್ದರು. ಆಗ ಸಿಮೆಂಟ್ ಹೇರಿಕೊಂಡು ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯೊಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ನಡೆದ ಬಳಿಕ ಲಾರಿ ಚಾಲಕ ಸ್ಥಳದಿಂದ ಕಾಲು ಕಿತ್ತಿದ್ದು, ಇನ್ನುಳಿದಂತೆ ಬಸ್ಸಿನಲ್ಲಿದ್ದ ಕೃಷ್ಣದಾಸ್, ಅರವಿಂದ,ವಿನೋದ್, ಮಂಜುನಾಥ್, ಕಿರಣ್, ನೀಲಾ, ಪಾರ್ವತಿ, ರಮ್ಯಾ, ಪ್ರಸಾದ್ ಮುಂತಾದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರೆಲ್ಲರೂ ಬೆಂಗಳೂರಿನ ಜೆ.ಪಿ ನಗರದ 2ನೇ ಸ್ಟೇಜ್ ನಿವಾಸಿಗಳಾಗಿವೆ.

ಹನುಮಂತಪ್ಪ ಅವರಿಗಾಗಿ ಪ್ರಾರ್ಥನೆ ಸಲ್ಲಿಸಿದ ವಿಶ್ವೇಶ ತೀರ್ಥ ಶ್ರೀ ಪಾದರು

ಉಡುಪಿ.ಫೆ.11: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ಬದುಕುಳಿದ ಸಾಹಸಿ ಯೋಧ ಕರ್ನಾಟಕದ ಹನುಮಂತಪ್ಪ ಕೊಪ್ಪದ ಗುಣಮುಖವಾಗಿ ಮತ್ತಷ್ಟು ದೇಶ ಸೇವೆ ಮಾಡಲಿ ಎಂದು ಉಡುಪಿಯಲ್ಲಿ ಪರ್ಯಾಯ ಮಠಾಧೀಶ ವಿಶ್ವೇಶ ತೀರ್ಥ ಶ್ರೀ ಪಾದರು ಶ್ರೀ ಕೃಷ್ಣ ಹಾಗೂ ಅನಂತೇಶ್ವರನಲ್ಲಿ ಬುಧವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.[ಯೋಧ ಹನುಮಂತಪ್ಪರ ಉಳಿವಿಗೆ ನಾಡಿನಾದ್ಯಂತ ಪೂಜೆ, ಹೋಮ]

ಇದೇ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ ತೀರ್ಥ ಶ್ರೀ ಪಾದರು, 'ವೀರ ಸೈನಿಕ ಇಂದು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಹನುಮಂತಪ್ಪನಿಗಾಗಿ ಇಡೀ ದೇಶದ ಜನ ಪ್ರಾರ್ಥಿಸುತ್ತಿದ್ದಾರೆ. ದೇಶ ಸೇವಕನ ರಕ್ಷಣೆಯಾಗಬೇಕು. ಪ್ರಾರ್ಥನೆ ಮಾಡುವುದು ಮಠಾಧೀಶರ ಕರ್ತವ್ಯ. ನಾನು ಶ್ರೀ ಕೃಷ್ಣ ಹಾಗೂ ಅನಂತೇಶ್ವರನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Above 10 members injured in road accident near Mangaluru on Wednesday, February 10th
Please Wait while comments are loading...