ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಟ ಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಓಡಾಡಿದ ಪೊಲೀಸಪ್ಪ

|
Google Oneindia Kannada News

Recommended Video

ಮಂಗಳೂರಿನಲ್ಲಿ ಡ್ಯೂಟಿಯಲ್ಲಿದ್ದ ಟ್ರಾಫಿಕ್ ಪೊಲೀಸ್ ಕುಡಿದ ತೂರಾಡುತ್ತಿದ್ದ ವಿಡಿಯೋ ವೈರಲ್ | Oneindia Kannada

ಮಂಗಳೂರು, ಸೆಪ್ಟೆಂಬರ್. 19: ಸಮವಸ್ತ್ರ ಧರಿಸಿ ಡ್ಯೂಟಿಯಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯೊಬ್ಬರು ಮಟಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನಲ್ಲಿ ಇಂದು ಬುಧವಾರ (ಸೆ.19) ನಡೆದಿದೆ.

ಕರ್ತವ್ಯದಲ್ಲಿದ್ದಾಗಲೇ ಪೊಲೀಸಪ್ಪ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಾಗ ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ರಸ್ತೆಯಲ್ಲೆಲ್ಲಾ ತೂರಾಡಿದ ಪೊಲೀಸ್ ಸಿಬ್ಬಂದಿ ಯನ್ನು ಅಶೋಕ್ ಗೌಡ ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ.

ಬೆಂಗಳೂರಲ್ಲಿ ಪಾನಮತ್ತ ಪೊಲೀಸರು ಮೇಲಾಧಿಕಾರಿಯನ್ನೇ ಥಳಿಸಿದರುಬೆಂಗಳೂರಲ್ಲಿ ಪಾನಮತ್ತ ಪೊಲೀಸರು ಮೇಲಾಧಿಕಾರಿಯನ್ನೇ ಥಳಿಸಿದರು

ಮಂಗಳೂರಿನ ಲಾಲ್ ಬಾಗ್ ಹಾಗು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿಯ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

A policeman was drunk when he was on duty

ಕರ್ತವ್ಯದಲ್ಲಿರುವ ಮಧ್ಯೆ ಪೊಲೀಸರು ಕುಡಿಯುವುದು ನಿಷಿದ್ಧ. ಹಾಗಿದ್ದರೂ, ಇವರು ಯೂನಿಫಾರ್ಮ್ ನಲ್ಲಿದ್ದುಕೊಂಡೇ ಕುಡಿದು ತೂರಾಡಿದ್ದಲ್ಲದೆ ರಸ್ತೆ ಮಧ್ಯೆ ವಾಹನಗಳನ್ನು ತಳ್ಳಿಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಇವರೇ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು ಎಂದು ಹೇಳಲಾಗಿದೆ.

 ಕುಡಿದು ವಾಹನ ಚಲಾಯಿಸಿದವರಿಗೆ 2 ದಿನ ಜೈಲೂಟ ಕುಡಿದು ವಾಹನ ಚಲಾಯಿಸಿದವರಿಗೆ 2 ದಿನ ಜೈಲೂಟ

ಒಂದು ಸಂದರ್ಭದಲ್ಲಿ ಫುಲ್ ಟೈಟ್ ಆಗಿದ್ದ ಪೊಲೀಸ್ ಸಿಬ್ಬಂದಿ ಅಶೋಕ್ ಗೌಡ ನನ್ನು ಸಾರ್ಜನಿಕರೇ ಎಳೆದು ತಂದು ರಕ್ಷಿಸಿದ್ದಾರೆ. ಸಮವಸ್ತ್ರದಲ್ಲಿ ಕುಡಿದು ತೂರಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರೆಲ್ಲಾ ಸೇರಿ ಪೊಲೀಸ್ ಪೇದೆಯನ್ನು ಹಿಡಿದು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿ ಕುಡಿಯಲು ನೀರನ್ನೂ ಕೂಡ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕುವ ಟ್ರಾಫಿಕ್ ಪೊಲೀಸರೇ ಮಟಮಟ ಮಧ್ಯಾಹ್ನ ಕುಡಿದು ತೂರಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

English summary
A policeman was drunk when he was on duty. This incident was shot by the public on mobile. Police have been identified as Ashok Gowda. He is working in Mangalore West Traffic Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X