ಮಂಗಳೂರು: ಮಗಳ ಸಾವಿನಿಂದ ನೊಂದ ತಾಯಿ ಆತ್ಮಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ,06: ಮಗಳ ಸಾವಿನ ನೋವು ತಡೆಯಲಾರದೆ ತಾಯಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಮಂಗಳೂರಿನ ಜೆಪ್ಪಿನಮೊಗರುವಿನಲ್ಲಿ ಬುಧವಾರ ನಡೆದಿದೆ.

ಜೆಪ್ಪಿನಮೊಗರುವಿನಲ್ಲಿ ವಾಸವಾಗಿದ್ದ ತಾಯಿ ಶಾಂಭವಿ (55) ಆತ್ಮಹತ್ಯೆಗೆ ಶರಣಾದವರು. ಈಕೆಯ ಮಗಳು ಉಷಾ ಶೆಟ್ಟಿಯ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದಳು. ಮಗಳ ಸಾವಿನ ನೋವಿನಲ್ಲಿ ಶಾಂಭವಿ ಬಾವಿಗೆ ಹಾರಿ ಪ್ರಾಣಬಿಟ್ಟಿದ್ದಾರೆ ಎಂದು ಶಂಕಿಸಲಾಗಿದೆ.[ಜನವರಿ 12ರಿಂದ ವಿವೇಕ್ ಬ್ಯಾಂಡ್ ಅಭಿಯಾನ]

Mangaluru

ಜೆಪ್ಪಿನಮೊಗರುವಿನ ಮನೆಯಲ್ಲಿ ಶಾಂಭವಿ ಹಾಗೂ ಅವರ ಪತಿ ವಾಸವಾಗಿದ್ದರು. ಇವರು ಎಂದಿನಂತೆ ರಾತ್ರಿ ಊಟ ಮಾಡಿ ಇಬ್ಬರೂ ಮಲಗಿದ್ದಾರೆ. ಆದರೆ ಬುಧವಾರ ಬೆಳಗ್ಗೆ ಶಾಂಭವಿ ಮೃತದೇಹ ಮನೆಯಂಗಳದ ಬಾವಿಯಲ್ಲಿ ಪತ್ತೆಯಾಗಿದೆ.

ಬಜ್ಪೆ ಎಕ್ಕಾರು ಬಳಿಯ ಗುಡ್ಡೆಸ್ಥಾನದ ಚರಂಡಿಯೊಂದರಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತ ಶಾಂಭವಿ ಅವರ ಪುತ್ರಿ ಉಷಾ ಶೆಟ್ಟಿ ಶವ ಡಿಸೆಂಬರ್ 18ರಂದು ಪತ್ತೆಯಾಗಿತ್ತು. ಆ ಬಳಿಕ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನಗಳು ಜನರಲ್ಲಿ ಮೂಡಿವೆ. ಮಗಳನ್ನು ಕಳೆದುಕೊಂಡ ನೋವಿನಲ್ಲಿಯೇ ಶಾಂಭವಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎದು ಹೇಳಲಾಗುತ್ತಿದೆ.[ಚಿತ್ರಗಳು: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವ]

ಮಂಗಳೂರು ಬಜರಂಗದಳ ಕಾರ್ಯಕರ್ತ ನೇಣಿಗೆ ಶರಣು

ಪುತ್ತೂರು, ಜನವರಿ,06: ಬಜರಂಗ ದಳ ಮಂಗಳೂರು ಘಟಕದ ಸಕ್ರಿಯ ಕಾರ್ಯಕರ್ತ ಶರತ್ ಕುಮಾರ್ ನೇಣಿಗೆ ಶರಣಾಗಿದ್ದಾರೆ. ಭಕ್ತ ಕೋಟಿ ನಿವಾಸಿಯಾದ ಶರತ್ ಕುಮಾರ್ ಅವರ ಆತ್ಮಹತ್ಯೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A mother Shambavi (55) commited suicide at Jeppinamogaru, Mangaluru, on Wednesday, January 6th. Few days back like December 18th her daughter Usha shetty expired. A bajarang dal worker Sharth Kumar committed suicide on Wednesday, in Mangaluru.
Please Wait while comments are loading...