ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ

By Super Admin
|
Google Oneindia Kannada News

ಮಂಗಳೂರು, ಏ. 14 : ಕರ್ನಾಟಕದಲ್ಲಿ ಮತ್ತೊಂದು ಜೀವಂತ ಹೃದಯ ಮಿಡಿದಿದೆ. ಮಂಗಳೂರಿನಿಂದ ಜೀವಂತ ಹೃದಯವನ್ನು ಬೆಂಗಳೂರಿಗೆ ಸಾಗಣೆ ಮಾಡಿ, ವ್ಯಕ್ತಿಯೊಬ್ಬರಿಗೆ ಮರುಜೀವ ನೀಡಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಕುಟುಂಬದವರು ಹೃದಯ, ಕಿಡ್ನಿ ದಾನ ಮಾಡಿ ಮತ್ತೆರಡು ಜೀವಗಳನ್ನು ಬದುಕಿಸಿದ್ದಾರೆ.

ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ಬಂಟ್ವಾಳದ ಜೀವನ್ ವಿಜಯ್ ಫೆರ್ನಾಂಡಿಸ್ (24) ಎಂಬುವವರ ಹೃದಯ, ಕಿಡ್ನಿ ದಾನ ಮಾಡಲು ಕುಟುಂಬದವರು ಒಪ್ಪಿಗೆ ನೀಡಿದ್ದರು. ಸೋಮವಾರ ರಾತ್ರಿ 7.45ರ ಸುಮಾರಿಗೆ ಜೀವನ್‌ಗೆ ಶಸ್ತ್ರ ಚಿಕಿತ್ಸೆ ಆರಂಭಿಸಲಾಯಿತು. [ಬೆಂಗಳೂರಿನಲ್ಲಿ ಮಿಡಿಯಿತು ಜೀವಂತ ಹೃದಯ]

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಎ.ಜೆ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದು ಹೃದಯ, ಕಿಡ್ನಿಗಳನ್ನು ತೆಗೆದಗೆ ಸಿಗ್ನಲ್ ಫ್ರೀ ವ್ಯವಸ್ಥೆ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಬೆಂಗಳೂರಿಗೆ ರವಾನಿಸಲಾಯಿತು. [ಬೆಂಗಳೂರಿನ ಹೃದಯಕ್ಕೆ ಹೈದರಾಬಾದ್ ನಲ್ಲಿ ಹೊಸ ಜೀವ]

ಜೀವಂತ ಹೃದಯ ಸಾಗಣೆ ಬೆಂಗಳೂರಿಗೆ ಹೊಸತಲ್ಲ. 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು. 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಕಸಿ ಮಾಡಲಾಗಿತ್ತು. 2015 ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್‌ ಜೀವಂತ ಹೃದಯವನ್ನು ಸಾಗಣೆ ಮಾಡಿ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

ಮಂಗಳೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ

ಮಂಗಳೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ

ಕರ್ನಾಟಕದಲ್ಲಿ ಮತ್ತೊಂದು ಜೀವಂತ ಹೃದಯ ಮಿಡಿದಿದೆ. ಮಂಗಳೂರಿನಿಂದ ಮೊದಲ ಬಾರಿ ಜೀವಂತ ಹೃದಯವನ್ನು ಬೆಂಗಳೂರಿಗೆ ಸಾಗಣೆ ಮಾಡಿ, ವ್ಯಕ್ತಿಯೊಬ್ಬರಿಗೆ ಮರುಜೀವ ನೀಡಲಾಗಿದೆ. ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರು ಇಂತಹ ಸಾಹನ ಮಾಡಿದ್ದಾರೆ.

ಹೃದಯ ಕೊಟ್ಟ 24 ವರ್ಷದ ಯುವಕ

ಹೃದಯ ಕೊಟ್ಟ 24 ವರ್ಷದ ಯುವಕ

ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ಬಂಟ್ವಾಳದ ಜೀವನ್ ವಿಜಯ್ ಫೆರ್ನಾಂಡಿಸ್ (24) ಎಂಬುವವರ ಹೃದಯ, ಕಿಡ್ನಿ ದಾನ ಮಾಡಲು ಕುಟುಂಬದವರು ಒಪ್ಪಿಗೆ ನೀಡಿದ್ದರು. ಸೋಮವಾರ ರಾತ್ರಿ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ.

ಎರಡು ಆಸ್ಪತ್ರೆ ವೈದ್ಯರ ಶ್ರಮ

ಎರಡು ಆಸ್ಪತ್ರೆ ವೈದ್ಯರ ಶ್ರಮ

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ವೈದ್ಯರು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮೃತ ಯುವಕನ ಶಸ್ತ್ರ ಚಿಕಿತ್ಸೆ ನಡೆದು ಹೃದಯ, ಕಿಡ್ನಿಗಳನ್ನು ತೆಗೆದು ಸಿಗ್ನಲ್ ಫ್ರೀ ವ್ಯವಸ್ಥೆ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಬೆಂಗಳೂರಿಗೆ ರವಾನಿಸಲಾಯಿತು.

ಬೆಂಗಳೂರು ತಲುಪಿದ ಹೃದಯ

ಬೆಂಗಳೂರು ತಲುಪಿದ ಹೃದಯ

ಮಂಗಳೂರು ವಿಮಾನ ನಿಲ್ದಾಣದಿಂದ ರಾತ್ರಿ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಜೀವಂತ ಹೃದಯ ಮತ್ತು ಅಂಗಾಂಗಗಳು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದವು. 11.15ರ ಸುಮಾರಿಗೆ ಜೀವಂತ ಹೃದಯ ಎಚ್‌ಎಎಲ್ ತಲುಪಿತು. ಅಲ್ಲಿಂದ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಹೃದಯವನ್ನು ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಯಿತು.

ಜೀವ ನೀಡಿದ ಜೀವನ್ ವಿಜಯ್

ಜೀವ ನೀಡಿದ ಜೀವನ್ ವಿಜಯ್

ಏಪ್ರಿಲ್‌ 10 ರಂದು ಸಮಾರಂಭವೊಂದಕ್ಕೆ ಹೋಗಿ ಬರುವಾಗ ಜೀವನ್ ಓಡಿಸುತ್ತಿದ್ದ ಬೈಕ್ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆಯುತ್ತಿತ್ತು. ಅದನ್ನು ತಪ್ಪಿಸುವಾಗ ಬೈಕ್‌ನಿಂದ ಬಿದ್ದು, ಜೀವನ್ ಗಾಯಗೊಂಡಿದ್ದರು. ಎರಡು ದಿನಗಳ ಬಳಿಕ ಅವರ ಮೆದುಳು ನಿಷ್ಕ್ರೀಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಕುಟುಂಬದವರು ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ್ದರು.

ಹೃದಯ ಸಾಗಣೆ ಬೆಂಗಳೂರಿಗೆ ಹೊಸತಲ್ಲ

ಹೃದಯ ಸಾಗಣೆ ಬೆಂಗಳೂರಿಗೆ ಹೊಸತಲ್ಲ

ಜೀವಂತ ಹೃದಯ ಸಾಗಣೆ ಬೆಂಗಳೂರಿನಲ್ಲಿ ಹೊಸದೇನಲ್ಲ.
* 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು.
* 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಕಸಿ ಮಾಡಲಾಗಿತ್ತು.
* 2015 ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್‌ ಜೀವಂತ ಹೃದಯವನ್ನು ಸಾಗಣೆ ಮಾಡಿ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.

English summary
For the first time from Mangaluru live heart and vital organs of a youth who met with an accident were taken to Bengaluru on Monday April 13 night. The vital organs belongs to Jeevan Vijay Fernandez (24).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X