ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡುಬಿದಿರೆಯಲ್ಲಿ ಕುಡಿಯುವ ನೀರಿಗೆ ವಿಷವಿಕ್ಕಿ ಮೀನು ಬೇಟೆ

ಎಂದ್ರಟ್ಟೆ ಕೆರೆಯ ನೀರನ್ನು ವಾಲ್ಪಾಡಿ, ಶಿರ್ತಾಡಿ ಹಾಗೂ ದರೆಗುಡ್ಡೆ ಗ್ರಾಮದ ಜನ ಬಳಸುತ್ತಿದ್ದಾರೆ. ಹತ್ತಿರದ ಸುಮಾರು 25 ಕೃಷಿ ಕುಟುಂಬಗಳು ಎಂದ್ರೆಟ್ಟೆ ಕೆರೆ ನೀರೇ ಆಧಾರ. ಇದೀಗ ಇದಕ್ಕೇ ವಿಷವಿಕ್ಕಿ ಕುಡಿಯಲು ನೀರಿಲ್ಲದಂತಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 18: ಮೂಡುಬಿದಿರೆ ವಾಲ್ಪಾಡಿ ಗ್ರಾಮದ ಎಂದ್ರಟ್ಟೆಯಲ್ಲಿ ಕಿಡಿಗೇಡಿಗಳು ಕುಡಿಯುವ ನೀರಿಗೆ ವಿಷವಿಕ್ಕಿ ಮೀನು ಬೇಟೆಯಾಡಿದ್ದಾರೆ. ಗೃಹ ಬಳಕೆಗೆ ಉಪಯೋಗಿಸುತ್ತಿದ್ದ ನೀರಿಗೆ ವಿಷವಿಕ್ಕಿದ್ದು ಗ್ರಾಮಸ್ಥರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಎಂದ್ರಟ್ಟೆ ಕೆರೆಯ ನೀರನ್ನು ವಾಲ್ಪಾಡಿ, ಶಿರ್ತಾಡಿ ಹಾಗೂ ದರೆಗುಡ್ಡೆ ಗ್ರಾಮದ ಜನರು ಬಳಸುತ್ತಿದ್ದಾರೆ. ಹತ್ತಿರದ ಸುಮಾರು 25 ಕೃಷಿ ಕುಟುಂಬಗಳು ಪ್ರಕೃತಿದತ್ತ ಎಂದ್ರೆಟ್ಟೆ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ. ವರ್ಷಪೂರ್ತಿ ಈ ನೀರನ್ನು ಇಲ್ಲಿಯ ಜನ ಕುಡಿಯಲು, ಗೃಹ ಬಳಕೆಗೆ, ಜಾನುವಾರುಗಳಿಗೆ ಬಳಕೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

A group of miscreants put poison to lake to catch fishes at Moodbidre

ಜತೆಗೆ ಹೇಕಲ್ ರಕ್ಷಿತಾರಣ್ಯದ ತಪ್ಪಲಿನಲ್ಲಿ ಎಂದ್ರಟ್ಟೆ ಕೆರೆಯಿದ್ದು, ಕಾಡುಪ್ರಾಣಿಗಳು ಕೂಡ ನೀರು ಕುಡಿಯಲು ಈ ಕೆರೆಗೆ ಬಂದು ಹೋಗುತ್ತಿವೆ.

ಇದೇ ಎಂದ್ರಟ್ಟೆ ಕೆರೆಗೆ ಇಲ್ಲಿನ ಪಕ್ಕದ ದರೆಗುಡ್ಡೆಯ ಕೆಲವು ಮಾಂಸಪ್ರಿಯರು ಈಚೆಗೆ ಮೀನು ಬೇಟೆಗೆಂದು ಬಂದಿದ್ದರು. ಇದು ಊರಿನವರಿಗೆ ಗೊತ್ತಾಗಿ ತಡೆಯೊಡ್ಡಿದ್ದರು. ಮೂರು ಬಾರಿ ಮೀನು ಬೇಟೆಗೆ ಬಂದು ವಿಫಲರಾದ ಜನ ನಾಲ್ಕನೇ ಬಾರಿ ಅಂದರೆ ರವಿವಾರ ಮಧ್ಯಾಹ್ನ ಯಾರು ಇಲ್ಲದ ಸಮಯ ನೋಡಿ ಬಂದಿದ್ದಾರೆ.

ಹೀಗೆ ಎಂದ್ರಟ್ಟೆ ಕೆರರೆಗೆ ದರೆಗುಡ್ಡೆ ಗ್ರಾಮದ ನೂರಾರು ಜನ ಬಂದು ಕೀಟನಾಶಕ ಹಾಕಿ ಮೀನು ಬೇಟೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಮೀನು ಬೇಟೆಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೇಟೆಗಾರರನ್ನು ಅಲ್ಲಿಂದ ಓಡಿಸಿದ್ದಾರೆ.

ಕಲುಷಿತಗೊಂಡ ಕೆರೆ ನೀರು:
ಮೀನಿನ ಆಸೆಗೆ ಕೆರೆಗೆ ಕೀಟನಾಶಕ ಹಾಕಿದ್ದರಿಂದ ಕೆರೆ ನೀರು ಕಲುಷಿತಗೊಂಡಿದೆ. ಈ ನೀರನ್ನು ಊರವರೂ ಉಪಯೋಗಿಸಿದಂತಾಗಿದೆ. ಇದೀಗ ಕುಡಿಯಲು ಸೇರಿದಂತೆ ದೈನಂದಿನ ಚಟುವಟಿಕೆಕೆರೆ ನೀರನ್ನು ಜನ ಉಪಯೋಗಿಸದಂತಾಗಿದೆ.

ಬಿರು ಬೇಸಿಗೆಯಲ್ಲಿ ಮಾಂಸಪ್ರಿಯರ ದುರಾಸೆಯಿಂದಾಗಿ ಎಂದ್ರಟ್ಟೆ ಪರಿಸರದ ಜನತೆಗೆ ಕುಡಿಯಲು ನೀರಿಲ್ಲದಂತಾಗಿದೆ.

English summary
A group of miscreants mix poison in the drinking water to catch fishes at Malladi village in Moodbidre, Mangaluru. This incident has put the villagers angry for such a cruel play.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X