ಮಂಗಳೂರಿನಲ್ಲಿ ಗ್ರಾಪಂ ಉಪಾಧ್ಯಕ್ಷನ ಬರ್ಬರ ಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 20: ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿ ಬೆಳ್ಳಂಬೆಳಗ್ಗೆ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರನ್ನು ನಾಲ್ವರು ಮುಸುಕುಧಾರಿಗಳು ಮಚ್ಚಿನಿಂದ ಥಳಿಸಿ ಹತ್ಯೆಗೈದ ಘಟನೆ ಮಂಗಳೂರಿನ, ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಇಂದು (ಏಪ್ರಿಲ್ 20) ನಡೆದಿದೆ.

ಜಲೀಲ್ ಕರೋಪಾಡಿ, ಬಂಟ್ವಾಳ ತಾ.ಪಂ. ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯವರ ಪುತ್ರನಾಗಿದ್ದು, ಈ ಹಲ್ಲೆಗೆ ಸ್ಪಷ್ಟ ಕಾರಣಗಳಿನ್ನೂ ತಿಳಿದುಬಂದಿಲ್ಲ.

A Gram Panchayat official kills in Mangaluru

ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ಅವರನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಇವರನ್ನು ಹತ್ಯೆಗೈದ ಮುಸುಕುಧಾರಿಗಳು ಕೇರಳ ಗಡಿ ಭಾಗದ ದುಷ್ಕರ್ಮಿಗಳು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four strange men killed a Gram Panchayat official in Karopadi village, Bantwal taluk, Mangaluru district. The reason for the murder is yet to be known
Please Wait while comments are loading...