ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರಕ್ಕೆ ಒಳಗಾದ ಯುವತಿ ಚಿಕಿತ್ಸೆ ನಿರಾಕರಿಸಿದ್ಯಾಕೆ?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಜನವರಿ,07: ಹಾರಾಡಿ ರೈಲ್ವೆ ಬ್ರಿಡ್ಜ್ ಬಳಿ ಹರಿಯಾಣದ ಯುವತಿಯೋರ್ವಳು ರೈಲಿನಿಂದ ಬಿದ್ದು ಗಾಯಗೊಂಡ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಈ ಮಧ್ಯೆ ಯುವತಿ 'ತನ್ನನ್ನು ಅಪ್ಪ, ಅಮ್ಮ ಪಯ್ಯನೂರು ಆಶ್ರಮಕ್ಕೆ ಸೇರಿಸಿದ್ದು, ಅಲ್ಲಿಂದ ತಪ್ಪಿಸಿಕೊಂಡು ರೈಲಿನಲ್ಲಿ ಬರುತ್ತಿದ್ದಾಗ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ಆರೋಪಿಸಿದ್ದಾಳೆ.

ಹರಿಯಾಣ ಸೂಣಿಪಥ್ ಕಾಲಿಪುರ ನಿವಾಸಿ 18 ವರ್ಷದ ಯುವತಿ ಗಾಯಗೊಂಡಿರುವ ಯುವತಿ. ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಯುವತಿಯನ್ನು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಗ ಆಕೆ ಚಿಕಿತ್ಸೆಗೆ ಒಳಗಾಗಲು ತಿರಸ್ಕರಿಸಿದ್ದಾಳೆ. ಬಳಿಕ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಮಂಗಳೂರಿನ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಒಪ್ಪದ ಯುವತಿ ಅಲ್ಲಿಂದ ನಾಪತ್ತೆಯಾಗಿದ್ದಾಳೆ.[ಮಣಿಪಾಲ್ ಗ್ಯಾಂಗ್ ರೇಪ್ ಕೇಸ್ : ಮೂವರಿಗೆ ಜೀವಾವಧಿ ಶಿಕ್ಷೆ]

Mangaluru

ಯುವತಿಯ ಮೇಲೆ ನಾಲ್ವರು ದುಷ್ಕರ್ಮಿಗಳಿಂದ ಪುತ್ತೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬುಧವಾರ ತಡರಾತ್ರಿ ಪುತ್ತೂರಿನ ಹಾರಾಡಿ ರೈಲ್ವೆ ಸೇತುವೆ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾಳೆ. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿಯು ಚಿಕಿತ್ಸೆ ಪಡೆಯದೆ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಯುವತಿ ಪರಾರಿಯಾಗಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹರ್ಯಾಣ ಮೂಲದವಳಾದ ಯುವತಿ ಮೇಲೆ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ ನಡೆಯಿತೋ ಅಥವಾ ಅನಾಥಾಶ್ರಮದಲ್ಲಿ ನಡೆಯಿತೋ ಎಂಬುದಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Mangaluru: Four boys raped a girl in Mangaluru on Wednesday, January 06th. She is basically from Haryana. When Mangaluru doctors going to give treatment to a girl, that time girl neglect the treatment and escaped from there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X