ಮಂಗಳೂರು: ಸಮುದ್ರ ಮಧ್ಯೆ ಸುಟ್ಟು ಕರಕಲಾದ ಬೋಟ್

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 7: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ವೊಂದು ಸಮುದ್ರ ಮಧ್ಯೆ ಸುಟ್ಟು ಬೂದಿಯಾದ ಘಟನೆ ಮಂಗಳೂರು ಬಳಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಬಜಾಲ್ ನಿವಾಸಿ ಜೆಸ್ವಿ ಎಂಬುವರಿಗೆ ಸೇರಿದ 'ಮೀನ' ಹೆಸರಿನ ಬೋಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಬೋಟಿನಲ್ಲಿದ್ದ ಹತ್ತು ಜನ ಸಿಬ್ಬಂದಿಯನ್ನು ರೈಸಿಂಗ್ ಲಾರ್ಡ್ ಹೆಸರಿನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.

A fishing boat went up in flames in the Arabian Sea near Mangaluru

ಬಳಿಕ ಸುಟ್ಟು ಹೋದ ಬೋಟನ್ನು ಧಕ್ಕೆಗೆ ಎಳೆದು ತರಲಾಗಿದೆ. ಬೋಟ್‍ ಬೆಂಕಿಗೆ ಆಹುತಿಗೆ ಆಗಿದ್ದರಿಂದ ಸುಮಾರು 50 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A fishing boat went up in flames in the Arabian Sea near Mangaluru. Short circuit is said to be the cause of the fire.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ