ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಳ್ಳಾಲ: ಮೋರಿಗೆ ಬಿದ್ದ ಕಾರು,ಯುವಕನಿಗೆ ಗಂಭೀರ ಗಾಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಜನವರಿ,16: ಕುಡಿತದ ಮತ್ತಿನಲ್ಲಿ ಕಾರು ಓಡಿಸಿಕೊಂಡು ಬಂದ ಯುವಕರು ನಿಯಂತ್ರಣ ತಪ್ಪಿ ಕಾರನ್ನು ಮೋರಿಗಿಳಿಸಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಘಟನೆ ಶುಕ್ರವಾರ ರಾತ್ರಿ ಉಳ್ಳಾಲ ಸಮೀಪ ನಡೆದಿದೆ.

ಘಟನೆಯಲ್ಲಿ ಕೇರಳ ಮೂಲದ ಹೆಲ್ಫಿನ್ (34) ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಎಲ್ಲೆಂದ್ರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್]

Mangaluru

ಯುವಕರ ಡಸ್ಟರ್ ಕಾರು ಉಳ್ಳಾಲದಿಂದ ಕೇರಳದ ಕಡೆಗೆ ಚಲಿಸುತ್ತಿತ್ತು. ಉಳ್ಳಾಲ ಮುಖ್ಯ ರಸ್ತೆಯ ಕಾಂಕ್ರಿಟೀಕರಣ ನಡೆಯುತ್ತಿದ್ದು, ರಸ್ತೆ ವಿಭಜಕ ಹಾಕಲಾಗಿತ್ತು. ಆದರೆ ರಸ್ತೆ ವಿಭಜಕವನ್ನು ಗಮನಿಸದೆ ಯುವಕರು ಕಾಂಕ್ರಿಟೀಕರಣವಾಗುತ್ತಿದ್ದ ಮೋರಿಯೊಳಗೆ ಬಿದ್ದಿದ್ದಾರೆ. ಕಾಮಗಾರಿ ವೇಳೆ ಇಂತಹ ಸಾಕಷ್ಟು ಅವಘಡಗಳು ಸಂಭವಿಸದಂತೆ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಪೋಲಾಗುತ್ತಿರುವ ನೀರು, ಪಾಲಿಕೆ ಸದಸ್ಯರ ಬೇಜವಾಬ್ದಾರಿ

ಮಂಗಳೂರು, ಜನವರಿ, 16: ಲೈನ್ ಮ್ಯಾನ್ ಒಡೆದು ಹೋದ ಪೈಪ್ ಲೈನ್ ಬಂದ್ ಮಾಡದೇ ನಿರ್ಲಕ್ಷ್ಯವಹಿಸಿರುವುದರಿಂದ ನೀರು ಪೋಲಾಗುತ್ತಿದ್ದು, ಸಾರ್ವಜನಿಕರು ನಗರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.[ಟಾಟಾ ಸಂಸ್ಥೆಯಿಂದ 4 ಸಾವಿರ ಹಳ್ಳಿಗರಿಗೆ ನೆರವಾಗುವ ನೀರಿನ ಘಟಕ]

ಬಿಜೈ ಕಾಪಿಕಾಡ್ ೮ನೇ ಅಡ್ಡ ರಸ್ತೆಯಲ್ಲಿರುವ ರಾಜು ಎಂಬುವರ ಮನೆಗೆ ಸಂಪರ್ಕ ನೀಡಿದ ಪೈಪ್ ಒಡೆದು ಸುಮಾರು ಎರಡೂ ತಿಂಗಳಿನಿಂದ ನೀರು ಪೋಲಾಗುತ್ತಿದೆ. ಈ ರೀತಿ ನೀರು ಪೋಲಾಗುತ್ತಿರುವುದರಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ಸ್ಥಳೀಯ ಮನಪಾ ಸದಸ್ಯ ರಜನೀಶ್ ಅವರ ಗಮನಕ್ಕೆ ತಂದರೂ ದುರಸ್ಥಿಯ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Ullal: A car accident in Ullal, Mangaluru on Friday January 15th. The Kerala origin Hanif is injured and his friends are safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X