ಮಂಗಳೂರು ವಿಟ್ಲ ರಸ್ತೆಯಲ್ಲಿ 500, 1000 ರುಪಾಯಿ ಚೆಲ್ಲಾಪಿಲ್ಲಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 21: 500, 1000 ರುಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ, ಆ ನಂತರ ಚೆಕ್ ಮೂಲಕ ಡ್ರಾ ಮಾಡಬಹುದು. ಡೆಬಿಟ್ ಕಾರ್ಡ್ ಇದ್ದರೆ ಅದನ್ನು ಸ್ವೈಪ್ ಮಾಡಿ, ಹಣದ ಬಳಕೆ ಮಾಡಬಹುದು. ಅಂಥದ್ದರಲ್ಲೂ ಅಲ್ಲಿಲ್ಲಿ ನೋಟು ಸುಟ್ಟಿದ್ದು, ತೆಪ್ಪದಲ್ಲಿ ತೇಲಿ ಬಿಟ್ಟಿದ್ದು, ಸುಟ್ಟು ಹಾಕಿದ್ದರ ಸುದ್ದಿ ಕೇಳಿಬರುತ್ತಲೇ ಇದೆ.

ಇದೀಗ ಮಂಗಳೂರಲ್ಲಿ ಭಾನುವಾರ ಮತ್ತೊಂದು ಬಗೆಯ ಸುದ್ದಿಯಾಗಿ, ಜನರಿಗೆ ಲಾಭವಾಗಿದೆ. ಇಷ್ಟೆಲ್ಲ ಕಥೆ ಯಾಕ್ರೀ, ಏನಾಗಿದೆ ಹೇಳಿ ಅಂತೀರಾ. ವಿಟ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ ವೊಂದರಿಂದ 500, 1000 ರುಪಾಯಿ ನೋಟುಗಳನ್ನು ಕಿಟಕಿ ಆಚೆಗೆ ತೂರಿದ್ದಾರೆ. ಹೀಗೆ ಸುಮಾರು ನೂರು ಮೀಟರ್ ದೂರದವರೆಗೆ ನೋಟುಗಳನ್ನು ಬಸ್ಸಿನ ಕಿಟಕಿಯಾಚೆಗೆ ಎಸೆಯುತ್ತಾ ಹೋಗಿದ್ದಾರೆ.[ಬೇನಾಮಿ ವ್ಯವಹಾರ ಕಂಡುಬಂದರೆ 7 ವರ್ಷದವರೆಗೆ ಜೈಲು]

Old notes

ಹೀಗೆ ನೋಟು ರಸ್ತೆ ಮೇಲೆ ಹರಿದಾಡುತ್ತಿದ್ದಂತೆ ಅಲ್ಲಿನ ಜನರು ಮುಗಿಬಿದ್ದು ನೋಟುಗಳನ್ನು ಆಯ್ದುಕೊಂಡಿದ್ದಾರೆ. ಕೆಲವರಿಗೆ ನಾಲ್ಕರಿಂದ ಐದು ಸಾವಿರ ರುಪಾಯಿವರೆಗೆ ಹಣ ದೊರೆತ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ತೆರಳಿದ ವಿಟ್ಲ ಪೊಲೀಸರು ಇದೇನು ಅಂತ ನೋಡಿ, ವಾಪಸಾಗಿದ್ದಾರೆ.[ಕೋಟಿಗಟ್ಟಲೆ ಹಣ ಬ್ಯಾಂಕ್ ಗೆ ಕಟ್ಟಿ, ತೆರಿಗೆ ಪಾವತಿಸಿ ಸಾಕು!]

ಇನ್ನೊಂದು ಮಾತು. ಮಂಗಳೂರು ನಗರದಲ್ಲಿ ಎರಡು ದಿನಗಳಿಂದ 2 ಸಾವಿರ ಮುಖ ಬೆಲೆ ನೋಟುಗಳು ಗ್ರಾಹಕರಿಗೆ ದೊರೆಯುತ್ತಿದೆ. ಕೆಲವರಿಗೆ ಧನ ಸಂಪಾದನೆ ಚಿಂತೆ, ಇನ್ನೂ ಕೆಲವರಿಗೆ ಹಣ ಎಲ್ಲಿಡುವುದು ಎಂಬುದೇ ಚಿಂತೆ. ಹಣ ಡೆಪಾಸಿಟ್ ಮಾಡಲು ಪ್ರತಿದಿನ ಬ್ಯಾಂಕ್ ಗಳಿಗೆ ಅಂಡಲೆಯುವವರು ಅದೆಷ್ಟೋ ಮಂದಿ. ಅಂತಹವರ ಮಧ್ಯೆ ನೋಟುಗಳನ್ನು ಎಸೆಯುವವರು ಇದ್ದಾರಲ್ಲ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
500, 1000 rupee note found Vitla road, Mangaluru on Sunday. Notes thrown out of bus and People picked up these notes. Vitla police visited the place.
Please Wait while comments are loading...