ಬಂಟ್ವಾಳ: ಕಾರು ಕಂದಕಕ್ಕೆ ಉರುಳಿ ಅರ್ಚಕ ಕಾರ್ತಿಕ್ ಭಟ್ ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಬಂಟ್ವಾಳ , ಫೆಬ್ರವರಿ 3 : ಫಾರ್ಚೂನರ್ ಕಾರೊಂದು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಅರ್ಚಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಬಂಟ್ವಾಳದ ಎಸ್.ವಿ.ಎಸ್. ಕಾಲೇಜು ರಸ್ತೆಯ ವೈದ್ಯನಾಥ ದೇವಸ್ಥಾನ ಬಳಿ ನಡೆದಿದೆ.

ವಿಟ್ಲ ನಿವಾಸಿ ಅನಂತೇಶ್ವರ ದೇವಾಲಯದ ಪ್ರಧಾನ ಅರ್ಚಕ ಹಾಗೂ ಜ್ಯೋತಿಷಿ ಕಾರ್ತಿಕ್ ಭಟ್(38) ಮೃತಪಟ್ಟಿದ್ದಾರೆ. ಕುಟುಂಬ ಸಮೇತ ಕಟೀಲು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಮನೆಗೆ ಹಿಂತಿರುಗುವ ವೇಳೆ ಈ ದುರಂತ ಸಂಭವಿಸಿದೆ.

38-year-old temple priest killed as car plunges off road at Bantwal

ಮೃತ ಅರ್ಚಕ ಕಾರ್ತಿಕ್ ಭಟ್ ಚಲಾಯಿಸುತ್ತಿದ್ದ ಕಾರು, ವೈದ್ಯನಾಥ ದೈವಸ್ಥಾನದ ಬಳಿ ರಸ್ತೆ ಪಕ್ಕದಲ್ಲಿರುವ ಸುಮಾರು 40 ಅಡಿ ಆಳಕ್ಕೆ ಉರುಳಿ ಬಿದ್ದಿದೆ.

ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು ಕಾರ್ತಿಕ್ ಭಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕಾರಿನಲ್ಲಿದ್ದ ಕಾರ್ತಿಕ್ ಭಟ್‌ರ ತಂದೆ ವಿಜಯ ಭಟ್, ತಾಯಿ ದೀಪಾ ಭಟ್, ಮಕ್ಕಳಾದ ಅಥರ್ವ, ಆಧ್ಯ ಇವರಿಗೆಲ್ಲಾ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ ಪಿ ಚಂದ್ರಶೇಖರಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A priest-cum-astrologer died on the spot after the car which he was driving went out of his control and plunged off the road. The accident occurred around midnight on Thursday (Feb 2) near Vaidyanatha temple, SVS college Bantwal.
Please Wait while comments are loading...