ಆಳ್ವಾಸ್‌ನಲ್ಲಿ ಸ್ವಾತಂತ್ರೋತ್ಸವಕ್ಕೆ ಸಾಕ್ಷಿಯಾದ 30 ಸಾವಿರ ಜನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮೂಡುಬಿದಿರೆ, ಆಗಸ್ಟ್ 15 : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸೋಮವಾರ ನಡೆದ 70ನೇ ಸ್ವಾತಂತ್ರೋತ್ಸವಕ್ಕೆ 30 ಸಾವಿರ ಜನರು ಸಾಕ್ಷಿಯಾದರು.

ಸೋಮವಾರ ಬೆಳಗ್ಗೆ ಮಂಗಳೂರು ಕ್ಯಾತೋಲಿಕ್ ಧರ್ಮಾಧ್ಯಕ್ಷರಾದ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರು ಧ್ವಜಾರೋಹಣ ನೆರವೇರಿಸಿದರು. 'ಎಲ್ಲರೂ ಏಕತೆಯಿಂದ ಬದುಕುವುದನ್ನು ಕಲಿಸುವುದೇ ಶಿಕ್ಷಣ ಸಂಸ್ಥೆಗಳು. ದೇವಾಲಯಗಳಿಗಿಂತ ಶಿಕ್ಷಣಾಲಯಗಳು ಶ್ರೇಷ್ಠವಾದುದು' ಎಂದರು.[70ನೇ ಸ್ವಾತಂತ್ರ್ಯೋತ್ಸವ : ಮೋದಿ ಭಾಷಣದ ಮುಖ್ಯಾಂಶಗಳು]

30 thousand people witness for Independence Day at Always College

ವಂದೇ ಮಾತರಂ...ಕೋಟಿ ಕಂಠೋಸೆ... ಜನಗಣಮನವನ್ನು ಆಳ್ವಾಸ್ ಸಂಸ್ಥೆಯ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಹಾಡಿದರು. ವೇದಿಕೆಯ ಮುಂಭಾಗದಲ್ಲಿದ್ದ 24 ಸಾವಿರ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಬೀಸಿ ಸಂಭ್ರಮಿಸಿದರು.[ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು]

30 thousand people witness for Independence Day at Always College

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ತ್ರಿವರ್ಣ ಧಿರಿಸುಗಳನ್ನು ಧರಿಸಿದ ವಿದ್ಯಾರ್ಥಿಗಳು ಮಲ್ಲಕಂಬ, ಹುಲಿವೇಷ ಮಾದರಿಯಲ್ಲಿ ಆಕರ್ಷಕ ಪಿರಾಮಿಡ್ ಪ್ರದರ್ಶನ ನೀಡಿದರು.[ಅಭಿವೃದ್ಧಿಪಥದತ್ತ ಭಾರತ, ಸ್ವತಂತ್ರ ದಿನ ಸಂಭ್ರಮ ಜೋರಿತ್ತಾ?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
30 thousand people witnessed for the Independence Day celebrations at Alva's College Moodbidri on August 15, 2016.
Please Wait while comments are loading...