ಕೇರಳ,ಕಾಸರಗೋಡಿನಿಂದ ನಾಪತ್ತೆಯಾಗಿದ್ದ 30 ಜನರು ಎಲ್ಲಿದ್ದಾರೆ ಗೊತ್ತೆ?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಜನವರಿ. 16 : ಕೇರಳ ಹಾಗೂ ಕಾಸರಗೋಡಿನಿಂದ ನಾಪತ್ತೆಯಾಗಿದ್ದ 30 ಜನರು ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರುವುದಕ್ಕಾಗಿ ಅಪಘಾನಿಸ್ಥಾನಕ್ಕೆ ತೆರೆಳಿದ್ದಾರೆಂಬ ಆತಂಕಕಾರಿ ಸುದ್ದಿಯೊಂದು ಬಹಿರಂಗವಾಗಿದೆ.

ಕೇರಳ ಹಾಗೂ ಕಾಸರಗೋಡಿನಿಂದ ನಾಪತ್ತೆಯಾದ 30 ಮಂದಿ ಇದೀಗ ಅವರೆಲ್ಲ ಅಪಘಾನಿಸ್ಥಾನದಲ್ಲಿನ ನಾಂಗರ್ ಹಾರ್ ನಲ್ಲಿರುವ ಐಸಿಸ್ ಶಿಬಿರದಲ್ಲಿ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ತಂಡ ಸ್ಪಷ್ಟ ಪಡಿಸಿದೆ.

ಇವರೊಂದಿಗೆ ಕೇರಳ ವಿಭಾಗದ ಮುಖ್ಯಸ್ಥ ಎಜೀರ್ ಮಂಗಲಾಸ್ ಸೆರಿ ಅಬ್ದುಲ್ಲಾ ಎಂಬಾತ ಕಾರ್ಯಾಚರಿಸುತ್ತಿರುವುದಾಗಿ ಮಾಹಿತಿ ಇದೆ.

30 Missing Kasargod and Keralites Have Reached ISIS's Bastion In Afghanistan: NIA Sources

ಭಾರತದಲ್ಲಿ ಅಶಾಂತಿ ಮೂಡಿಸುವ ಸಲುವಾಗಿ ಈಗಾಗಲೇ ಯುವಕರಿಗೆ ಐಸಿಸ್ ಬಲೆ ಬೀಸಿದೆ. ಜಿಹಾದಿ ಅನ್ನೋ ಅಫೀಮು ಕೊಟ್ಟು ಅವರನ್ನು ಸಿರಿಯಾ, ಇರಾಕ್, ಅಫ್ಘಾನಿಸ್ತಾನಕ್ಕೆ ಕರೆಸಿಕೊಳ್ಳಲಾಗುತ್ತಿದೆ.

ಕೇರಳದಿಂದ ನಾಪತ್ತೆಯಾದವರು ಅಪಘಾನಿಸ್ಥಾನದ ಐಸಿಸ್ ಶಿಬಿರದಲ್ಲಿರುವುದಾಗಿ ಹಿಂದೆಯೇ ಮಾಹಿತಿ ಲಭಿಸಿತ್ತಾದರೂ ಇದನ್ನು ಸ್ಪಷ್ಟ ಪಡಿಸಿರಲಿಲ್ಲ. ದಿನಗಳ ಹಿಂದೆ ಕೇರಳದಲ್ಲಿ ಜಿಹಾದ್ ಗೆ ಸಮಯವಾಯಿತು ಎಂದು ಆಹ್ವಾನಿಸಿದ ಫೇಸ್ಬುಕ್ ಪೋಸ್ಟ್ ಹೊರಬಿದ್ದಿತ್ತು.

ಆಕ್ರಮಣಕ್ಕಾಗಿ ಫೇಸ್ಬುಕ್ ಮೂಲಕ ಪೆಟ್ರೋಲ್ ಬಾಂಬ್ ನಿರ್ಮಾಣಕ್ಕೆ ತರಬೇತಿ ನೀಡಲಾಗಿದೆ ಎಂಬ ಸುದ್ದಿ ಬಯಲಾಗಿತ್ತು. ಇದರ ಆಧಾರದಲ್ಲಿ ನಡೆಸಿದ ತಪಾಸಣೆಯಲ್ಲಿ ಪೋಸ್ಟ್ ನ ಮೂಲ ಅಪಘಾನಿಸ್ಥಾನ ಎಂದು ತನಿಖಾ ಏಜೆನ್ಸಿಗಳು ಪತ್ತೆ ಹಚ್ಚಿವೆ.

ಇದಲ್ಲದೆ 2016ರ ಮೇ ಮತ್ತು ಜೂನ್ ತಿಂಗಳಲ್ಲಿ ಕೇರಳದ ವಿವಿಧೆಡೆಗಳಿಂದ ಯುವತಿಯರು ಹಾಗೂ ಯುವಕರನ್ನೊಳಗೊಂಡ ಹಲವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಕ್ಕೆಲ್ಲಾ ಕಾರಣ ಐಸಿಸ್ ಸಂಘಟನೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
30 Kasargod and Keralites, who were reported missing, have reached the bastion of ISIS terror operations in Afghanistan, officials said.
Please Wait while comments are loading...