ಮಂಗಳೂರು : ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ನಿಗೂಢ ಸಾವು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 10 : ಒಂಬತ್ತು ದಿನಗಳಿಂದ ನಾಪತ್ತೆಯಾಗಿದ್ದ ಬೀರಿ ಕೋಟೆಕಾರಿನ ಅಲೋಶಿಯಸ್ ಕಾಲೇಜಿನ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಮಾಡೂರು ಟ್ಯಾಂಕ್ ಬಳಿಯ ತೋಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಶುಕ್ರವಾರ ಸಂಜೆ ಪತ್ತೆಯಾಗಿದೆ.

ಕೇರಳ ತಿರುವಂತಪುರದ ನಿವಾಸಿ ಸುಭಾಷ್ ಚಂದ್ರನ್ ಹಾಗೂ ಜೆಸ್ಸಿ ದಂಪತಿ ಪುತ್ರ ಸೋನು ಸುಭಾಷ್ ಚಂದ್ರನ್ ( 22) ಮೃತ ವಿದ್ಯಾರ್ಥಿ. ಸೆ. 1 ರಂದು 12ರ ರಾತ್ರಿ ಮಾಡೂರು ಕಾಲೇಜು ಸಮೀಪ ಇರುವ ಬಾಡಿಗೆ ರೂಮಿನಿಂದ ಸೋನು ಸುಭಾಷ್ ಚಂದ್ರನ್ ನಾಪತ್ತೆಯಾಗಿದ್ದ.[ಸುಳ್ಯದಲ್ಲೀಗ ದೀಕ್ಷಿತ್ ಗೌಡ ಇಸ್ಲಾಂ ಧರ್ಮಕ್ಕೆ ಮತಾಂತರದ್ದೇ ಸುದ್ದಿ]

Sonu Subhash Chandran

ಸೋನು ಚಂದ್ರನ್ ನಾಪತ್ತೆಯಾಗಿರುವ ಕುರಿತು ರೂಮಿನಲ್ಲಿ ಆತನ ಜತೆಗಿದ್ದ ಆಲ್ವಿನ್ ಸ್ಟೀಫನ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೇರಳದಿಂದ ಬಂದ ಸಂಬಂಧಿಕರಾದ ಬೈಜು, ವಿನ್ಯೂ ಎಂಬವರು ದೇರಳ ಕಟ್ಟೆ, ಮಂಗಳೂರು, ಮಣಿಪಾಲದಲ್ಲಿ ಹುಡುಕಾಡಿದ್ದರು. ಆದರೂ ಪತ್ತೆಯಾಗಿರಲಿಲ್ಲ.[ಸಂತ ಅಲೋಶಿಯಸ್ ಕಾಲೇಜು ವಿವಾದ, ಕಿಡಿಗೇಡಿಗಳ ಕೃತ್ಯವೇ?]

ಶುಕ್ರವಾರ ಮೃತದೇಹ ಪತ್ತೆ : ಶುಕ್ರವಾರ ಸಂಜೆ ವೇಳೆಗೆ ಆಡು ಮೇಯಿಸುತ್ತಿದ್ದ ಇಸ್ಮಾಯಿಲ್ ಎಂಬವರು ಮಾಡೂರು ಟ್ಯಾಂಕಿನ ಸಮೀಪ ಮಾಡೂರು ಟ್ಯಾಂಕಿನ ತಿರುವು ಸಮೀಪದ ತೋಡಿನಲ್ಲಿ ಮೊದಲು ಬೈಕ್ ನೋಡಿದ್ದರು. ಆ ಬಳಿಕ ಗಿಡಗಂಟೆಗಳನ್ನು ಸರಿಸಿ ನೋಡಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು.

22-year-old missing student Sonu Chandran found dead

ಒಂಟಿಯಾಗಿ ಇರಬೇಕು ಎಂದು ಹೇಳಿದ್ದ : ಸೆಪ್ಟೆಂಬರ್ 1ರ ರಾತ್ರಿ ದೇರಳ ಕಟ್ಟೆ ಸಮೀಪ ಊಟ ಮುಗಿಸಿ ಬಳಿಕ ಮಾಡೂರಿನ ರೂಮಿಗೆ ಬಂದಿದ್ದ ಸೋನು ಚಂದ್ರನ್ ಸ್ವಲ್ಪ ಕಾಲ ಒಂಟಿಯಾಗಿರಬೇಕೆಂದು ಎಂದು ಹೇಳಿದ್ದ. ಆನಂತರ ಬೈಕಿನೊಂದಿಗೆ ಮಡ್ಯಾರ್ ಕಡೆಗೆ ತೆರಳಿ ಅಲ್ಲಿದ್ದ ಕಟ್ಟೆಯೊಂದರಲ್ಲಿ ತುಂಬಾ ಹೊತ್ತು ಕುಳಿತಿದ್ದ.

ಮೊಬೈಲ್ ಅನ್ನು ರೂಮಿನಲ್ಲೇ ಬಿಟ್ಟು ಹೋಗಿದ್ದರಿಂದ ತುಂಬಾ ಹೊತ್ತಾದರೂ ಸೋನು ರೂಮಿಗೆ ಬಾರದೆ ಇದ್ದಾಗ ಆತನನ್ನು ಹುಡುಕುತ್ತಾ ಸ್ನೇಹಿತರು ಮಾಡ್ಯಾರು ಕಡೆಗೆ ತೆರಳಿದ್ದರು. ಅಲ್ಲಿ ಮಡ್ಯಾರು ದೇವಸ್ಥಾನ ಸಮೀಪ ಕಟ್ಟೆಯಲ್ಲಿ ಕುಳಿತಿರುವುದನ್ನು ಕಂಡ ಸ್ನೇಹಿತರು ಮನವೊಲಿಸಿ ವಾಪಸ್ ರೂಮಿಗೆ ಬರುವಂತೆ ಮನವಿ ಮಾಡಿದ್ದರು.

ಅದಕ್ಕೆ ಒಪ್ಪಿದ್ದ ಆತ, ಬೈಕಿನಲ್ಲಿ ಅತೀ ವೇಗದಲ್ಲಿ ಬೀರಿ ಮಾರ್ಗವಾಗಿ ತೆರಳಿದ್ದ. ಆತನನ್ನು ಸ್ನೇಹಿತರು ಹಿಂಬಾಲಿಸಿ, ಬೀರಿ ವರೆಗೂ ತೆರಳಿದರೂ ಸೋನು ಪತ್ತೆಯಾಗಿರಲಿಲ್ಲ. ವೇಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿರಬಹುದು ಅಂದುಕೊಂಡು ಸ್ನೇಹಿತರು ಅಂದು ರಾತ್ರಿ ಹುಡುಕಲು ಮುಂದಾಗಿರಲಿಲ್ಲ. ಮರುದಿನ ಪತ್ತೆಯಾಗದೆ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sonu Subhash Chandran (22) Kerala based student of St Aloysius College of management and information technology, Mangaluru has been found dead. He had been missing from September 1, 2016.
Please Wait while comments are loading...