ಮಂಗಳೂರು : ಕಾರು ಅಪಘಾತ, ಇಬ್ಬರು ವಿದ್ಯಾರ್ಥಿಗಳು ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 02 : ವಿದ್ಯುತ್ ಕಂಬಕ್ಕೆ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ. ಅಪಘಾತದಲ್ಲಿ 5 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುವಾರ ಮುಂಜಾನೆ 1.10ರ ಸುಮಾರಿಗೆ ಕುಂಜತ್ತೂರು ಮಾಸ್ಕೋ ಹಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

road accident

ಮೃತಪಟ್ಟ ವಿದ್ಯಾರ್ಥಿಯನ್ನು ಉಪ್ಪಳ ಹೀರೋಗಲ್ಲಿ ನಿವಾಸಿ ಹಾಗೂ ಮಂಗಳೂರು ಖಾಸಗಿ ಕಾಲೇಜೊಂದರ ಅಂತಿಮ ಪದವಿ ವಿದ್ಯಾರ್ಥಿ ಮುನ್ಸಾರ್ ಎಂದು ಗುರುತಿಸಲಾಗಿದೆ. ಕುಂಜತ್ತೂರು ನಿವಾಸಿಗಳಾದ ಕಬೀರ್, ಫರಾನ್, ಇಂಝಾಮ್ ಸೇರಿದಂತೆ 5 ಜನರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

road accident

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two students were killed and 5 other injured in car accident in Mangaluru, on Thursday, June 2, 2016 early morning.
Please Wait while comments are loading...