ಮಂಗಳೂರು: ಇಬ್ಬರು ಪೊಲೀಸರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 24 : ಮಂಗಳೂರಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಬಾರಿ ರಾಷ್ಟ್ರಪತಿ ಪದಕದ ಗೌರವ ಸಿಕ್ಕಿದೆ. ಮಂಗಳೂರು ಎ.ಸಿ.ಪಿ. ಉದಯ ನಾಯಕ್ ಹಾಗು ಮಂಗಳೂರು ಸಹಾಯಕ ಕಮಿಷನರ್ ಸಿ. ಸಿ. ರ್. ಬಿ ವ್ಯಾಲೆಂಟೈನ್ಸ್ ಡಿಸೋಜ ಅವರಿಗೆ ಪದಕ ಲಭಿಸಿದೆ.

ಅಪರಾಧಿಗಳನ್ನು ಹೆಡೆ ಮುರಿಕಟ್ಟಿ ಕಾನೂನು ಸುವ್ಯವಸ್ಥೆ ದಿಕ್ಕುತಪ್ಪದಂತೆ ನೋಡಿಕೊಳ್ಳುತ್ತ, ನಾಡಿನ ಪ್ರಜೆಗಳನ್ನು ಕಾಪಾಡುವ ಹೊಣೆಹೊತ್ತ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಗುರುತಿಸಲು ಪ್ರತಿವರ್ಷ ರಾಷ್ಟ್ರಪತಿ ಪದಕ ಗೌರವ ನೀಡಲಾಗುತ್ತದೆ. ಪ್ರತಿವರ್ಷ ಗಣರಾಜ್ಯೋತ್ಸವದಂದು ಅವರಿಗೆ ರಾಷ್ಟ್ರಪತಿ ಪದಕವನ್ನು ಪ್ರದಾನ ಮಾಡಲಾಗುತ್ತದೆ. [ರಾಜ್ಯದ 19 ಪೊಲೀಸ್​ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ]

2 officers selected for police medal for their meritorious service from Mangaluru

68ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಅನೇಕ ಪೊಲೀಸ್ ಪೇದೆಗಳು ಮತ್ತು ಅಧಿಕಾರಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದು, ಮಂಗಳೂರಿನಿಂದ ಇಬ್ಬರು ಪದಕ ಪಡೆದಿದ್ದಾರೆ. [ಮಂಗಳೂರಿನ ಜೈವಿಕ ಉದ್ಯಾನವನ ಈಗ ಕ್ಯಾಶ್ ಲೆಸ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two police officers Valentine D'Souza and Uday Nayak from Mangaluru have been chosen for the prestigious police medal meritorious service to be awarded on Republic Day in Bengaluru.
Please Wait while comments are loading...