ಓಖಿ: ಲಕ್ಷದ್ವೀಪ ಸಮೀಪ ಮಂಗಳೂರಿನ ಎರಡು ಬೋಟ್ ಮುಳುಗಡೆ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 1: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಿದ್ದ ಸರಕು ಸಾಗಣಿಕೆಯ ನೌಕೆಗಳು ಓಖಿ ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. ಈ ಪೈಕಿ ಲಕ್ಷದ್ವೀಪ ಸಮೀಪ ಎರಡು ನೌಕೆಗಳು ಮುಳುಗಡೆಯಾಗಿದ್ದು 1 ನೌಕೆ ಹಾನಿಗೊಂಡಿದೆ.

ಮಂಗಳೂರು ಹಳೆ ಬಂದರಿನಿಂದ ನಿನ್ನೆ ಸಿಮೆಂಟ್ ಹಾಗು ಜಲ್ಲಿಕಲ್ಲುಗಳನ್ನು ಹೊತ್ತು ಲಕ್ಷದ್ವೀಪಕ್ಕೆ ಮಂಜಿ ನೌಕೆಗಳು ತೆರಳಿದ್ದವು. ಮುಳುಗಡೆಗೊಂಡ ಎರಡು ಮಂಜಿ ನೌಕೆಯಲ್ಲಿ ಒಟ್ಟು14 ಸಿಬ್ಬಂದಿಗಳಿದ್ದರು. ಅಪಾಯದಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ಸ್ಥಳೀಯ ಮೀನುಗಾರರು ಹಾಗೂ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

2 freight boats of Mangaluru sinks at Lakshadweep

ಈ ನಡುವೆ ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಕರಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.

2 freight boats of Mangaluru sinks at Lakshadweep

ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಗಾಳಿ ಬೀಸಲಿದ್ದು, ಜೊತೆಗೆ ಮಳೆಯೂ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮುದ್ರದ ಅಬ್ಬರವೂ ಹೆಚ್ಚಾಗಲಿದ್ದು, ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A freight boat carrying goods from Mangaluru to Lakshadweep has been hit by the Ochie storm. Two vessels sink near Lakshadweep and 1 vessel is damaged.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ