ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಭಂಗಕ್ಕೆ ಯತ್ನ, ಇಬ್ಬರ ಬಂಧನ

|
Google Oneindia Kannada News

ಮಂಗಳೂರು, ಮೇ 21: ರಾಜ್ಯದಲ್ಲಿ ಬಿಜೆಪಿ ಸರಕಾರ ಬಹುಮತ ದೊರೆಯದೇ ಉರುಳಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದವು. ಈ ನಡುವೆ ಸಮಾಜದಲ್ಲಿ ಶಾಂತಿ ಕದಡುವಂಥ ಕೆಲವು ಸುಳ್ಳು ಸುದ್ದಿಗಳೂ ಹರಿದಾಡಲು ಆರಂಭಿಸಿದ್ದವು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚರ ವಹಿಸಿದ್ದ ಹಿನ್ನೆಲೆಯಲ್ಲಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಕದಡಲು ಯತ್ನಿಸಿದ ಇಬ್ಬರನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನುಬಂಟ್ವಾಳ ತಾಲೂಕಿನ ಕೆರಾಳೆ ನಿವಾಸಿ ನಿತಿನ್ (29), ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ದಿನೇಶ್ (31) ಎಂದು ಗುರುತಿಸಲಾಗಿದೆ.

2 arrests for sending communal message through social media in Mangaluru

ಬಿಜೆಪಿ ಸರಕಾರ ಬಿದ್ದು ಹೋದ ವೇಳೆ ಸಂಭ್ರಮಾಚರಣೆ ನೆಪದಲ್ಲಿ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಈ ಅರೋಪಿಗಳಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಪರಿಸ್ಥಿತಿ ಬಿಗಡಾಯಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

English summary
2 persons arrested in connection with spreading false news to create communal hatred through social media. Accused identified as Nitin from Kerale village, Bantwal and Dinesh from Pambettadi Village of Sullia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X