ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ 8ಕೆ ಡಿಜಿಟಲ್ ತಾರಾಲಯ!

ದೇಶದ ಪ್ರಥಮ 3ಡಿ ಡಿಜಿಟಲ್ ಹೈಬ್ರೀಡ್ ಸ್ವಾಮಿ ವಿವೇಕಾನಂದ ತಾರಾಲಯ ಮಂಗಳೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ತೆಲೆ ಎತ್ತಲಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 17 : ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಿರ್ಮಾಣವಾಗುತ್ತಿರುವ 3ಡಿ ಡಿಜಿಟಲ್ ಹೈಬ್ರೀಡ್ ಸ್ವಾಮಿ ವಿವೇಕಾನಂದ ತಾರಾಲಯ ಅಕ್ಟೋಬರ್ ಕೊನೆಯಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ಡಿ 8ಕೆ ಡಿಜಿಟಲ್ ತಾರಾಲಯ ಹೊಂದಲಿರುವ ಭಾರತದ ಪ್ರಥಮ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ಪಾತ್ರವಾಗಲಿದೆ ಎಂದರು.[ಮಂಗಳೂರಿನ ಜೈವಿಕ ಉದ್ಯಾನವನ ಈಗ ಕ್ಯಾಶ್ ಲೆಸ್]

ಮಂಗಳೂರಿನಲ್ಲಿ ಈ ತಾರಾಲಯ ಉದ್ಘಾಟನೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯ ಹೊಂದಿರುವ ದೇಶದ ಪ್ರಥಮ ನಗರವಾಗಿ ಮಂಗಳೂರು ಗುರುತಿಸಿಕೊಳ್ಳಲಿದೆ.

ಒಟ್ಟು 35.69 ಕೋಟಿ ರು. ಗಳಲ್ಲಿ ತಾರಾಲಯ ನಿರ್ಮಾಣ

ಒಟ್ಟು 35.69 ಕೋಟಿ ರು. ಗಳಲ್ಲಿ ತಾರಾಲಯ ನಿರ್ಮಾಣ

3ಡಿ ಡಿಜಿಟಲ್ ಹೈಬ್ರೀಡ್ ವ್ಯವಸ್ಥೆಯ ತಾರಾಲಯ ನಿರ್ಮಾಣಕ್ಕೆ ಶಿಫಾರಸ್ಸು ಮಾಡಿ 24.50 ಕೋಟಿ ರು. ಅಂದಾಜು ವೆಚ್ಚದ ವರದಿಯನ್ನು ಸರಕಾರಕ್ಕೆ ಸಲ್ಲಿಸಿ, ಮಂಜೂರಾತಿ ಪಡೆದು ಕಾಮಗಾರಿ ಆರಂಭಗೊಂಡಿತ್ತು. ಇದೀಗ ಮತ್ತೆ ಸುಮಾರು 10 ಕೋಟಿ ರು.ಗಳ ಹೆಚ್ಚುವರಿ ಅಂತಾರಾಷ್ಟ್ರೀಯ ಟೆಂಡರ್ ನೊಂದಿಗೆ ಒಟ್ಟು 35.69 ಕೋಟಿ ರು. ಗಳಲ್ಲಿ ತಾರಾಲಯ ನಿರ್ಮಾಣವಾಗುತ್ತಿದೆ. ತಾರಾಲಯದಲ್ಲಿ ಇದೀಗ ಸ್ಪೇಸ್ ಗ್ಯಾಲರಿಯನ್ನೂ ಅಳವಡಿಸಲು ಯೋಜಿಸಲಾಗಿದೆ ಎಂದು ಲೋಬೋ ವಿವರ ನೀಡಿದರು.

ಏನಿದು 3ಡಿ 8ಕೆ ಡಿಜಿಟಲ್ ತಾರಾಲಯ

ಏನಿದು 3ಡಿ 8ಕೆ ಡಿಜಿಟಲ್ ತಾರಾಲಯ

ಡಿಜಿಟಲ್ ತಾರಾಲಯವು ಉತ್ಕೃಷ್ಟ ತಂತ್ರಜ್ಞಾನದಿಂದ ಕೂಡಿದೆ. ವಿಶೇಷ ಪಠ್ಯಕ್ರಮ ಆಧಾರಿತ ವಿಷಯ ಒಳಗೊಂಡಿದೆ. ಬ್ರಹ್ಮಾಂಡ್ ರಚನೆಯ ವಿಸ್ಮಯಗಳ ಕುರಿತು ತಿಳಿಸುತ್ತದೆ.

ಕಲಿಕೆಗೆ ಪ್ರೋತ್ಸಾಹ

ಕಲಿಕೆಗೆ ಪ್ರೋತ್ಸಾಹ

ಮಿನುಗುತ್ತಿರುವ ಖಿಲಿಯನ್ ನಕ್ಷತ್ರಗಳು ಮಾನವನನ್ನು ಚಕಿತಗೊಳಿಸುವ ವಿದ್ಯಮಾನಗಳನ್ನು ತೋರಿಸುವುದು. ನಕ್ಷತ್ರಗಳ ಉಗಮ, ಗೆಲಾಕ್ಸಿ, ವಿಶ್ವದ ಉಗಮ ಮುಂತಾದ ವಿಷಯಗಳನ್ನು ಒದಗಿಸುತ್ತದೆ. ಎಲ್ಲ ಪ್ರೌಢ ಶಾಲಾ ಮಕ್ಕಳಿಗೆ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುವುದರೊಂದಿಗೆ ಜಿಲ್ಲೆಯ ಶೈಕ್ಷಣಿಕ ರಂಗದಲ್ಲಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗುತ್ತದೆ.

 ಈ ತೆರನಾದ ತಾರಾಲಯ ಇರುವ ದೇಶಗಳು

ಈ ತೆರನಾದ ತಾರಾಲಯ ಇರುವ ದೇಶಗಳು

ಈ ತೆರನಾದ ತಾರಾಲಯ ಪ್ರಸ್ತುತ ಸಿಂಗಾಪುರ, ಚೀನಾದ ಶಾಂಗೈ, ಯುಎಸ್‌ಎಯ ರಿಚ್‌ಮಂಡ್, ಕೊರಿಯಾದ ಆಯನ್ಸ್ ಯೊಂಗ್, ಕೆನಡಾದ ಕಾಲ್‌ಗೇರಿ, ಯುಕೆಯ ಬ್ರಿಸ್ಪಾಲ್, ಜರ್ಮನಿಯ ಹ್ಯಾಮ್‌ಬರ್ಗ್, ಜಪಾನ್‌ನ ಟೋಕಿಯೋ, ಪೋಲೆಂಡ್‌ನ ಲೋಡ್ಜ್ ನಗರಗಳಲ್ಲಿದೆ. ಇದೀಗ ಮಂಗಳೂರಿನಲ್ಲಿ ಈ ತಾರಾಲಯ ಉದ್ಘಾಟನೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯ ಹೊಂದಿರುವ ದೇಶದ ಪ್ರಥಮ ನಗರವಾಗಿ ಮಂಗಳೂರು ಗುರುತಿಸಿಕೊಳ್ಳಲಿದೆ.

English summary
The government has decided to construct a 3D Planetarium at Pilikula Nisargadhama. despite increasing costs, has almost reached its completion and will be due to open by October this year, informed MLA JR Lobo in a press meet held his office on Monday, April 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X