ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3ನೇ ಭಾಷೆಯಾಗಿ ತುಳು: ವಿದ್ಯಾರ್ಥಿಗಳ ಮೊದಲ ಪ್ರಯತ್ನ

|
Google Oneindia Kannada News

ಮಂಗಳೂರು, ಅ 22: ಎಸ್ಎಸ್ಎಲ್ಸಿ ಪರೀಕ್ಷೆಯನ್ನು ತುಳುವಿನಲ್ಲಿ ಬರೆಯಲು ಅವಕಾಶ ನೀಡುತ್ತಿರುವ ರಾಜ್ಯದ ಮೊದಲ ಶಾಲೆ ಎನ್ನುವ ಗೌರವಕ್ಕೆ ನಗರದ ಉರ್ವದಲ್ಲಿರುವ ಪೊಂಪೈ ಪ್ರೌಢಶಾಲೆ ಪಾತ್ರವಾಗಿದೆ.

ಮೂರನೇ ಭಾಷೆಯನ್ನಾಗಿ ಬಹಳಷ್ಟು ವಿದ್ಯಾರ್ಥಿಗಳು ಕನ್ನಡ, ಸಂಸ್ಕೃತ, ಹಿಂದಿಯನ್ನಾಗಿ ಆಯ್ಕೆ ಮಾಡುತ್ತಿರ ಬೇಕಾದರೆ ಈ ಶಾಲೆಯ ಹದಿನೆಂಟು ವಿದ್ಯಾರ್ಥಿಗಳು ಬರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ತುಳುವಿನಲ್ಲಿ ಬರೆಯಲಿದ್ದಾರೆ.

ನಮ್ಮ ಶಾಲೆಯ ವಿದ್ಯಾರ್ಥಿಗಳು ತುಳುವನ್ನು ಮೂರನೇ ಭಾಷೆಯನ್ನಾಗಿ ಸ್ವೀಕರಿಸಿದ್ದಕ್ಕೆ ನನಗೆ ಬಹಳ ಹೆಮ್ಮೆಯಿದೆ, ಇದೊಂದು ಉತ್ತಮ ಪ್ರಯತ್ನ ಎಂದು ಶಾಲೆಯ ಮುಖ್ಯೋಪಾಧ್ಯಾಯ ಫ್ರಾಂಕ್ ಹಿಲೆರಿ ಡಿಸೋಜ 'ಒನ್ ಇಂಡಿಯಾ' ವರದಿಗಾರರಿಗೆ ತಿಳಿಸಿದ್ದಾರೆ.

ಶಿಕ್ಷಕ ದಿನೇಶ್ ಶೆಟ್ಟಿಗಾರ್ ಈ ಶಾಲೆಯ ವಿದ್ಯಾರ್ಥಿಗಳಿಗೆ ತುಳು ಪಾಠ ಮಾಡುತ್ತಿದ್ದಾರೆ. ಮೂಲತಃ ಇವರು ಡ್ರಾಯಿಂಗ್ ಶಿಕ್ಷಕರು, ಆದರೆ ತುಳು ಭಾಷೆಯ ಮೇಲಿನ ಪ್ರೀತಿಯಿಂದಾಗಿ ಹೆಚ್ಚುವರಿಯಾಗಿ ಈ ಕೆಲಸವನ್ನು ಒಪ್ಪಿಕೊಂಡಿದ್ದಾರೆಂದು ಡಿಸೋಜ, ನಮ್ಮ ವರದಿಗಾರರ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.

ವ್ಯಾಕರಣ ಸಂಬಂಧ ಕೆಲವೊಂದು ತೊಂದರೆಗಳನ್ನು ನಾನು ಅನುಭವಿಸುತ್ತಿದ್ದರೂ, ಅದನ್ನು ಕಲಿತು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದೇನೆಂದು ತುಳು ಶಿಕ್ಷಕ ದಿನೇಶ್ ಹೆಮ್ಮೆಯಿಂದ ಹೇಳಿದ್ದಾರೆ.

18 students of Mangalore School attempting to write Tulu as third language in SSLC examination

ತುಳು ಅಕಾಡೆಮಿಯ ಅವಿರತ ಪ್ರಯತ್ನದಿಂದ 2009ರಲ್ಲಿ ತುಳುವನ್ನು ಮೂರನೇ ಭಾಷೆಯನ್ನಾಗಿ ಆಯ್ಕೆ ಮಾಡಲು ರಾಜ್ಯ ಸರಕಾರ ಅನುಮೋದನೆ ನೀಡಿತ್ತು.

ತುಳು ಅಕಾಡೆಮಿಯ ಈ ಪ್ರಯತ್ನಕ್ಕೆ ಮೊದಲು ನಾನು ಅಕಾಡೆಮಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಸ್ಎಸ್ಎಲ್ಸಿ ತರಗತಿಯ ತುಳು ಪಠ್ಯಪುಸ್ತಕಕ್ಕೆ 'TULU ESAll- 5' ಎಂದು ಹೆಸರಿಡಲಾಗಿದೆ.

ಬೆಂಗಳೂರಿನ ಕರ್ನಾಟಕ ಪಠ್ಯ ಪುಸ್ತಕ ಸಂಘ ಈ ಪುಸ್ತಕವನ್ನು ಹೊರತಂದಿದೆ. ಈ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತುಳು ಶಿಕ್ಷಕ ದಿನೇಶ್ ಶೆಟ್ಟಿಗಾರ್ ಅವರನ್ನು ತುಳು ಚಾವಡಿ ಆಗಸ್ಟ್ 15, 2014ರಂದು ಸನ್ಮಾನಿಸಿತ್ತು.

ತುಳುವನ್ನು ಮೂರನೇ ಭಾಷೆಯನ್ನಾಗಿ ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ಮತ್ತು ಪೊಂಪೈ ಹಿರಿಯ ಪ್ರಾಥಮಿಕ ಶಾಲೆ, ದಿನೇಶ್ ಶೆಟ್ಟಿಗಾರ್, ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದನೆಗಳು. (ವರದಿ: ಐಸಾಕ್ ರಿಚರ್ಡ್, ಮಂಗಳೂರು ರಿಪೋರ್ಟರ್)

English summary
18 students of Pompei High School in Urva, Mangalore attempting to write Tulu as third language in Karnataka SSLC examination 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X