ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನಿನ ತಲೆ ಮಾಂಸ ತಿಂದ 14 ಮಂದಿ ಅಸ್ವಸ್ಥ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 06 : ಮೀನಿನ ತಲೆ ಮಾಂಸ ತಿಂದ 14 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಸ್ಥಳೀಯ ಭಾಷೆಯಲ್ಲಿ 'ಅಮುರು' ಎಂದು ಕರೆಯಲ್ಪಡುವ ಹಾಮೋರ್ ಜಾತಿಗೆ ಸೇರಿದ ಮೀನಿನ ತಲೆ ಮಾಂಸ ತಿಂದವರು ಅಸ್ವಸ್ಥರಾಗಿದ್ದಾರೆ.

ವಿದೇಶದಲ್ಲಿ ಈ ಮೀನಿನ ಮಾಂಸಕ್ಕೆ ಭಾರೀ ಬೇಡಿಕೆಯಿದ್ದು, ದೊಡ್ಡ ಗಾತ್ರದ ಮೀನಿನ ದೇಹ ಭಾಗದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಅದರ ತಲೆ ಮಾಂಸ ಕೂಡಾ ಸ್ವಾದಿಷ್ಟ ರುಚಿಯನ್ನು ಹೊಂದಿದೆ. ಹಾಗಾಗಿ ಇದಕ್ಕೂ ಭಾರೀ ಬೇಡಿಕೆಯಿದೆ. ಹೆಚ್ಚಿನವರು ಇದನ್ನು ಕೇಳಿ ಪಡೆಯುತ್ತಾರೆ. [ವ್ಯಾಪಾರಿಗಳ ಜಗಳದಲ್ಲಿ ಜನರಿಗೆ ಮೀನಿನ ಲಾಭ]

hamour fish

ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಈ ಮೀನಿನ ತಲೆಯನ್ನು ತಂದು ಮಾರಾಟ ಮಾಡಲಾಗುತ್ತದೆ. ಭಾನುವಾರ ಕೋಟೆಲು ಬಳಿಯ ಎರಡು ಮನೆಯವರು ಇದನ್ನು ಖರೀದಿ ಮಾಡಿದ್ದರು. ಅದನ್ನು ತಿಂದ ಕೆಲವೇ ಹೊತ್ತಿನಲ್ಲಿ ಎರಡು ಮನೆಗಳ ನಾಲ್ವರು ಮಕ್ಕಳ ಸಹಿತ 10 ಮಂದಿಗೆ ವಾಂತಿ, ಭೇದಿ ಶುರುವಾಗಿದೆ. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]

ಮೈ ಚರ್ಮ ಸ್ವಲ್ಪ ನೇರಳೆ ಬಣ್ಣಕ್ಕೆ ತಿರುಗಿದ್ದು, ಕೆಲವು ಹೊತ್ತಿನಲ್ಲಿಯೇ ಉಸಿರಾಟ ತೊಂದರೆ ಆರಂಭವಾಗಿದೆ. ಬಾಯಿ ಹಿಡಿದಂತಾಗಿ ಮಾತನಾಡಲು ಕಷ್ಟವಾಗುವ ಪರಿಸ್ಥಿತಿ ಹಾಗೂ ಮೈ ತುರಿಕೆ, ಅಂಗೈ ಮತ್ತು ಕಾಲಿನಡಿ ತುರಿಕೆ ಕಂಡುಬಂದಿದೆ. [ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು]

ತಕ್ಷಣ ಎಲ್ಲರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಪಡೆದ ಬಳಿಕ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು. ಸೋಮವಾರ ಕೊಪ್ಪಳದ ನಿವಾಸಿಯೊಬ್ಬರು ಇದೇ ಮೀನಿನ ತಲೆ ಮಾಂಸ ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಮೀನುಗಳನ್ನು ವಿಷದ ಇಂಜೆಕ್ಷನ್ ನೀಡಿ ಹಿಡಿಯಲಾಗುತ್ತದೆ. ಆದ್ದರಿಂದ, ದೇಹದ ಒಳಗೆ ಹೋದ ಅದರ ವಿಷದ ಅಂಶ ತಲೆಯಲ್ಲಿ ಶೇಖರಗೊಂಡಿರುವುದರಿಂದ ಈ ರೀತಿಯಾಗಿರಬಹುದು ಅಥವಾ ಸಮುದ್ರಕ್ಕೆ ವಿಷ ಪದಾರ್ಥಗಳು ಸೇರಿ ಈ ರೀತಿ ಸಮಸ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.

English summary
14 persons were hospitalized in Uppinangady, Mangaluru after consuming head curry made of Hamour fish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X