ಮಂಗಳೂರು: ವಾರಸುದಾರರಿಲ್ಲದ ಬಿಹಾರದ 13 ಬಾಲಕರು ಪತ್ತೆ

Posted By:
Subscribe to Oneindia Kannada

ಮಂಗಳೂರು, ಜುಲೈ 22: ವಾರಸುದಾರರಿಲ್ಲದ 14 ಮಕ್ಕಳು ಇಂದು ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದಿದ್ದು, ಸುಮಾರು 7 ರಿಂದ 14 ವರ್ಷ ಪ್ರಾಯದ ಈ ಮಕ್ಕಳನ್ನು ಗುರುತಿಸಿದ ರೈಲ್ವೇ ಪೋಲೀಸು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.

ಬಿಹಾರದಿಂದ ಮಂಗಳೂರಿಗೆ ಇಂದು ಬಂದಿಳಿದಿದ್ದ ಈ ಮಕ್ಕಳು ಕೇರಳದ ಉದ್ಯಾವರದಲ್ಲಿರುವ ಮಸೀದಿಯಲ್ಲಿ ಶಿಕ್ಷಣಕ್ಕಾಗಿ ಬಂದಿರುವುದಾಗಿ ತಿಳಿದುಬಂದಿದೆ.

14 boys from Bihar without documents stopped by railway police, sent to child home

ಎಳೆಯ ಪ್ರಾಯದ ಮಕ್ಕಳನ್ನು ಪಾಲಕರು ಅಥವಾ ವಾರೀಸುದಾರರಿಲ್ಲದೆ ದೂರದ ಮಂಗಳೂರಿಗೆ ಕಳುಹಿಸಿರುವುದರ ಹಿನ್ನಲೆಯಲ್ಲಿ ಇದೊಂದು ಮಕ್ಕಳ ಕಳ್ಳಸಾಗಾಟದ ಜಾಲವಾಗಿರಬಹುದೇ ಎನ್ನುವ ಸಂಶಯವೂ ಹುಟ್ಟಿಕೊಂಡಿದೆ.

ಇದೀಗ 14 ಮಕ್ಕಳೂ ಮಂಗಳೂರಿನ ಬೊಂದೆಲ್ ನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರದಲ್ಲಿಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Police here on Saturday July 22, checked the documents with 47 boys who were travelling from Bihar to Mangaluru cirty and identified that only 34 of them had valid documents. The Boys have been sent to Child Home Center in Mangaluru.
Please Wait while comments are loading...