3 ಲಕ್ಷ ಹೊಸ ನೋಟು ಸೇರಿ 13 ಲಕ್ಷ ವಶ: ಇಬ್ಬರ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು: ನಗರದ ನವಭಾರತ್ ವೃತ್ತದ ಬಳಿಯ ಮೌರಿಷ್ಕಾ ಅಪಾರ್ಟ್ ಮೆಂಟ್‌ನ ವಾಹನ ನಿಲುಗಡೆ ಸ್ಥಳದಲ್ಲಿ ರು 13 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಆಲ್ಟೊ ಕಾರಿನಲ್ಲಿ ಅನುಮಾನಾಸ್ಪದವಾಗಿ ಇರಿಸಿಕೊಂಡಿರುವ ಇಬ್ಬರನ್ನೂ ಬಂಧಿಸಿರುವ ನಗರ ಅಪರಾಧ ಪತ್ತೆದಳದ(ಸಿಸಿಬಿ) ಪೊಲೀಸರು, ನಗದು ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.[ತುಮಕೂರಿನಲ್ಲಿ ರು 2000 ಮುಖಬೆಲೆ 3 ಲಕ್ಷ ಹಣ ವಶ]

13 lakh found in car police arrested 2 people in mangaluru

ಪುತ್ತೂರು ನಿವಾಸಿ ಉಮರ್ ಫಾರೂಕ್ (41) ಹಾಗೂ ಬಂಟ್ವಾಳ ಮೂಡ ಗ್ರಾಮದ ಮೊಹಮ್ಮದ್ ಬಶೀರ್ (32) ಬಂಧಿತರು. ಇವರು ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇದ್ದದ್ದನ್ನು ಕಂಡ ಅಪರಾಧ ಪತ್ತೆ ದಳ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ನೀಡಿದರು. ಕೊನೆಗೆ ಕಾರನನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಒಟ್ಟೂ 2.5 ಲಕ್ಷದಷ್ಟು 2000 ಮುಖಬೆಲೆಯ ಹೊಸ ನೋಟುಗಳು ಸೇರಿದಂತೆ 100, 50,10ರ ಮುಖಬೆಲೆಯ ಒಟ್ಟೂ ರು 13 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ನೋಟುಗಳ ಬಗ್ಗೆ ದಾಖಲೆ ಕೇಳಿದಾಗ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದ್ದು, ಇದನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.[ಡಾಮಿನಿಕ್ ಪತ್ನಿ ಪೊಲೀಸರಿಗೆ ಶರಣಾಗತಿ, 79.8 ಲಕ್ಷ ವಶಕ್ಕೆ!]

ಬಳಿಕ ಆರೋಪಿಗಳನ್ನು ಬಂಧಿಸಿ ಅವರ ವಶದಲ್ಲಿದ್ದ 13ಲಕ್ಷ ರೂ. ನಗದು ಮತ್ತು ಆಲ್ಟೊ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.ಸಿಸಿಬಿ ಇನ್ಸ್‌ಪೆಕ್ಟರ್‌ ಸುನಿಲ್ ವೈ. ನಾಯಕ್, ಸಬ್ಇನ್ಸ್‌ಪೆಕ್ಟರ್‌ ಶ್ಯಾಮಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ವಿಚಾರಣೆಯ ಬಳಿಕ ಬಂಧಿತರನ್ನು ಪೂರ್ವ ಠಾಣೆಗೆ ಹಸ್ತಾಂತರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru near navabharath circle mourishka apartment vehicle stand found in car Rs 13 lakh 3 lakh is new note, other is 100,50,10 rupee notes police arrest two people and car.
Please Wait while comments are loading...