ಕೆವಿಪಿವೈ: ಮಂಗಳೂರು ಕಾಲೇಜಿನ 12 ವಿದ್ಯಾರ್ಥಿಗಳು ತೇರ್ಗಡೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 22 : ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಲ್ಲಿ ನೀಡುವ 'ಕಿಶೋರ್ ವೈಜ್ಞಾನಿಕ್' ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಫೆಲೋಶಿಪ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೊಡಿಯಾಲ್ ಬೈಲ್ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಆಕಾಂಕ್ಷ ಭಟ್ ತಿರುವನಂತಪುರಂ, ಅನ್ನಪೂರ್ಣ ಪಿ. ಕೊಡಿಯಾಲ್ ಬೈಲ್, ಮೇಘನಾ ಸೋಮರಾಜ್ ದುಬೈ, ಪ್ರತೀಕ್ ಎಸ್ ನಾಯಕ್ ನೀರುಮಾರ್ಗ.

ವಳಚ್ಚಿಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಶಾಂಕ್ ಗೌಡ ಎ.ಎಸ್ ಹಾಸನ, ಜೀವನ್ ಬಿ.ಆರ್. ಆಲೂರು, ಮಯೂರ್ ಎಂ. ಚಿತ್ರದುರ್ಗ, ಸುಜಿತ್ ಎಸ್. ಕೊಳ್ಳೆಗಾಲ, ಕೆ.ಪೃಥ್ವಿರಾಜ್ ಬೆಂಗಳೂರು, ರಜತ್ ಜೈನ್ ಗಂಗಾವತಿ, ಅಂಜನಾ ಆರ್. ತುಮಕೂರು, ರಚನಾ ಆರ್. ಶಿವಮೊಗ್ಗ ಕೆವಿಪಿವೈ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.

12 students of mangaluru expert PU College qualified KVPY exam

ಆಯ್ಕೆಯಾದ ವಿದ್ಯಾರ್ಥಿಗಳು ಮೂಲ ವಿಜ್ಞಾನದಲ್ಲಿ ಶಿಕ್ಷಣ ಮುಂದುವರಿಸಿದರೆ ಅವರಿಗೆ ವಾರ್ಷಿಕ 80,000 ದಿಂದ 1,12,000 ದವರೆಗೆ ಪ್ರೋತ್ಸಾಹಧನ ಸಿಗುತ್ತದೆ.

ಹಾಗೂ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಸೈನ್ಸ್ ಬೆಂಗಳೂರು, ಇಂಡಿಯನ್ ರಿಸರ್ಚ್ ಇನ್ಸ್ ಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಸೇರಿದಂತೆ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ. ಕೆವಿಪಿವೈ ಆಯ್ಕೆ ಪರೀಕ್ಷೆ ಲಿಖಿತ-ಮೌಖಿಕ ಸೇರಿದಂತೆ ಹಲವು ರೀತಿಯ ಹಂತಗಳನ್ನು ಹೊಂದಿರುತ್ತದೆ.

ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್.ನಾಯಕ್, ಉಪಾಧ್ಯಕ್ಷೆ ಉಷಾಪ್ರಭಾ.ಎನ್ ನಾಯಕ್, ಕೊಡಿಯಾಲ್ ಬೈಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್, ವಳಚ್ಚಿಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ ವಿಜಯನ್ ಅಭಿನಂದಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
12 students of the Mangaluru Expert Pre-University College have qualified Kishore Vaigyanik Protsahan Yojana (KVPY) exam.
Please Wait while comments are loading...