ಕಣ್ಣೂರು–ನಡುಪಳ್ಳ ಅಭಿವೃದ್ಧಿಗೆ 1 ಕೋಟಿ ರು ಮಂಜೂರು: ಲೋಬೊ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 18 : ನಗರದ ಕಣ್ಣೂರು-ನಡುಪಳ್ಳಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರು ಮಂಜೂರು ಮಾಡಲಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.

ಬಜಾಲ್ ಕಟ್ಟಪುಣಿ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು, ನಡುಪಳ್ಳಿ ಪ್ರದೇಶ ಅಭಿವೃದ್ಧಿ ಕಾಣಬೇಕಾಗಿದೆ. ಈ ಭಾಗಕ್ಕೆ ಕೊಡುಗೆ ನೀಡಬೇಕೆಂದು ಸಣ್ಣ ನೀರಾವರಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ಅನುದಾನ ಪಡೆದುಕೊಂಡಿರುವುದಾಗಿ ತಿಳಿಸಿದ ಅವರು, ಶಾಸಕರ ನಿಧಿಯಿಂದ ಹತ್ತು ಲಕ್ಷ ಅನುದಾನ ಮಂಜೂರು ಮಾಡುವುದಾಗಿ ಹೇಳಿದರು.

1 crore sanctioning for kannur nadupalli development says mla lobo

ಇಲ್ಲಿ 50 ರು ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ರಸ್ತೆಯೇ ಇಲ್ಲದೆ ಸಾರ್ವಜನಿಕರು ಪರ ದಾಡುತ್ತಿದ್ದರು. ಇಲ್ಲಿಗೆ ರಸ್ತೆ ನಿರ್ಮಾಣ ಮಾಡುವಂತೆ ಶಾಸಕರಿಗೆ ಮನವಿ ಮಾಡಿದ್ದರು.

ಕಾರ್ಪೊರೇಟರ್ ಸುಮಯ್ಯ, ವಾರ್ಡ್ ಅಧ್ಯಕ್ಷ ಭರತೇಶ್ ಅಮೀನ್, ಅಶ್ರಫ್ ಬಜಾಲ್, ಜ್ಯೋತಿ ಅಶೋಕ್, ಗಂಗಮ್ಮ, ಆನಂದ್ ರಾವ್, ದೇವದಾಸ್ ಮೇಲಂಟ, ಮಜೀದ್, ಅಬ್ದುಲ್ ದಾಯಿ ಮುಂತಾದವರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MLA J R Lobo who had recommended sanctioning Rs 1 crore from mknor irrigation department for developing infrastructures at Nadupalli, offered to approve Rs 10 lac from his Local Area Development Fund (LADF).
Please Wait while comments are loading...