ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಸಾನ ಸ್ಥಿತಿಯಲ್ಲಿದ್ದ ಧನಗೂರು ಷಡಕ್ಷರದೇವನ ಮಂಟಪ ಸ್ವಚ್ಛಗೊಳಿಸಿದ ಯುವ ಬ್ರಿಗೇಡ್

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜು.4: ಮಳವಳ್ಳಿ ತಾಲೂಕು ಧನಗೂರು ಗ್ರಾಮದಲ್ಲಿರುವ ಮಹಾಕವಿ ಷಡಕ್ಷರದೇವ ನೆಲೆಸಿದ್ದ ಮಂಟಪ ಮತ್ತು ಮಠವನ್ನು ಯುವ ಬ್ರಿಗೇಡ್ ತಂಡ ಸ್ವಚ್ಚಗೊಳಿಸಿ ಪುರಾತನ ಮತ್ತು ಐತಿಹಾಸಿಕ ತಾಣವನ್ನು ರಕ್ಷಿಸುವ ಕಾರ್ಯ ಕೈಗೊಂಡಿದೆ.

17ನೇ ಶತಮಾನದಲ್ಲಿ ಧನಗೂರಿನ ಷಡಕ್ಷರದೇವರು ಇಲ್ಲಿ ನೆಲೆಸಿದ್ದರು. ಕನ್ನಡ ಮತ್ತು ಸಂಸ್ಕತಿ ಸಾಹಿತ್ಯಕ್ಕೆ ಸುಮಾರು 20 ಮಹಾಕೃತಿಗಳನ್ನು ನೀಡಿದ್ದ ಷಡಕ್ಷರಿ ಅವರು ನೆಲೆಸಿದ್ದ ಮಂಟಪ ಇಂದು ಬಿದ್ದುಹೋಗಿದ್ದು, ಇದನ್ನು ಸಂರಕ್ಷಿಸಿ ಸ್ಮಾರಕವನ್ನಾಗಿಸುವಲ್ಲಿ ಯಾವುದೇ ಸರ್ಕಾರ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಷಡಕ್ಷರಿ ನೆಲೆಸಿದ್ದ ಪಾಳು ಮಂಟಪ ಹಾಗೂ ದೇವಾಲಯವನ್ನು ಪುನಶ್ಚೇತನಗೊಳಿಸಿ ಸ್ಮಾರಕವನ್ನಾಗಿಸಲು 10 ಲಕ್ಷರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಈವರೆವಿಗೂ ಅದರ ಕಾಮಗಾರಿ, ರಕ್ಷಣಾ ಕಾರ್ಯ ಆರಂಭವಾಗಲೇ ಇಲ್ಲ.

ಧನಗೂರು ರಾಮಾಯಣ ಕಾಲದಿಂದಲೂ ಪ್ರಸಿದ್ಧಿ

ಧನಗೂರು ರಾಮಾಯಣ ಕಾಲದಿಂದಲೂ ಪ್ರಸಿದ್ಧಿ

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯಲ್ಲಿ ರನ್ನ ಷಡಕ್ಷರಿ ಜನ್ನ' ಎಂಬುದಾಗಿ ಉಲ್ಲೇಖಿಸಿರುವುದನ್ನು ಕಾಣಬಹುದಾಗಿದೆ. ಪ್ರಾಚೀನವಾದ ಇತಿಹಾಸ, ಸಾಹಿತ್ಯವನ್ನು ಹೊಂದಿರುವ ಧನಗೂರು ಗ್ರಾಮ ರಾಮಾಯಣ ಕಾಲದಿಂದಲೂ ಪ್ರಸಿದ್ಧಿಯಾಗಿದೆ. ಶ್ರೀರಾಮನು ವನವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಧನಸ್ಸನ್ನು ಇಟ್ಟಿದ್ದರಿಂದ ಧನಗೂರು ಎಂದಾಯಿತು, ಅದೇ ರೀತಿ ಬಾಣವನ್ನು ಹೂಡಿದ್ದರಿಂದ ಬಾಣಸಮುದ್ರವಾಗಿದೆ. ಜೊತೆಗೆ ಸೀತಾಮಾತೆ ತನ್ನ ಕೈಯ್ಯಲ್ಲಿದ್ದ ಮುತ್ತಿನ ಉಂಗುರವನ್ನು ಕಳೆದುಕೊಂಡಿದ್ದ ಸ್ಥಳ ಮುತ್ತತ್ತಿಯಾಗಿದೆ ಎಂಬುದು ಈ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಸ್ವಚ್ಛಗೊಳಿಸಿ ಸ್ಮಾರಕವಾಗಿಸಲು ಮುಂದಾಗಿರುವುದು. ಈ ಗ್ರಾಮದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಗೌರೀಶ್ವರ ದೇವಾಲಯ ಇದೆ. ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯವೂ ಅವಸಾನಗೊಂಡಿದೆ. ಈ ದೇವಾಲಯದಲ್ಲಿ ಬೇಡರ ಕಣ್ಣಪ್ಪ, ಶಿಲಾಬಾಲಕಿಯರು, ಸಪ್ತಮಾತೃಕೆಯರು, ಕಾಲಭೈರವ, ಶಿವನ ಪೀಠವಿದ್ದು, ಇವೆಲ್ಲವೂ ಅವಸಾನದ ಅಡಿಯಲ್ಲಿ ಸಿಲುಕಿವೆ.

ಇಂದಿಗೂ ಯಳಂದೂರಿನಲ್ಲಿ ಸಮಾದಿ

ಇಂದಿಗೂ ಯಳಂದೂರಿನಲ್ಲಿ ಸಮಾದಿ

17ನೇ ಶತಮಾನದಲ್ಲಿ ಧನಗೂರು ಗ್ರಾಮದಲ್ಲಿ ಜನಿಸಿದ್ದ ಷಡಕ್ಷರಿ, ಕನ್ನಡದಲ್ಲಿ ರಾಜಶೇಖರ ವಿಲಾಸ, ಶಬರಶಂಕರ ವಿಲಾಸ ಹಾಗೂ ಸಂಸ್ಕೃತದಲ್ಲಿ ಕವಿಕರ್ಣ ರಸಾಯನ ಸೇರಿದಂತೆ 20ಕ್ಕೂ ಹೆಚ್ಚು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಗ್ರಾಮದಲ್ಲಿರುವ ಅವಸಾನಗೊಂಡಿರುವ ಈ ಮಂಟಪದಲ್ಲಿ ಮತ್ತು ಸಮೀಪದಲ್ಲಿರುವ ಶಿವನ ದೇವಾಲಯದಲ್ಲೇ ವಾಸವಾಗಿದ್ದ ಷಡಕ್ಷರಿ ವಿದ್ಯಾಭ್ಯಾಸ ಮುಂದುವರಿಸಿ ಮುಮ್ಮಡಿ ಕಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮುದ್ದುಗೋಪಾಲದೊರೆ ಅವರ ಸಾಮಂತ್ರ ಆಡಳಿತದಲ್ಲಿ 5ನೇ ಮಠಾಧಿಪತಿಯಾಗಿ ಯಳಂದೂರಿಗೆ ಹೋಗುತ್ತಾರೆ. ಅಲ್ಲೇ ಅವರು ಶಿವೈಕ್ಯರಾಗುತ್ತಾರೆ. ಅವರ ಸಮಾದಿ ಇಂದಿಗೂ ಯಳಂದೂರಿನಲ್ಲಿ ಕಾಣಬಹುದಾಗಿದೆ. ಆದರೆ ಅವರು ಹುಟ್ಟಿ ಬೆಳೆದ ಧನಗೂರು ಗ್ರಾಮದಲ್ಲಿರುವ ಮಂಟಪ, ಮತ್ತು ದೇವಾಲಯಗಳು ಪಾಳು ಬಿದ್ದಿವೆ. ಇಂತಹ ಮಹಾ ಕವಿ ವಾಸವಿದ್ದ ಜಾಗವನ್ನು ಸಂರಕ್ಷಿಸದೆ ಆಳುವ ಸರ್ಕಾಗಳು ನಿರ್ಲಕ್ಷ್ಯ ವಹಿಸಿವೆ ಎಂಬುದು ಇಲ್ಲಿನ ಶ್ರೀಗಳ ಆರೋಪವೂ ಆಗಿದೆ.

ಇಂದಿಗೂ ಕಾಮಗಾರಿ, ರಕ್ಷಣಾ ಕಾರ್ಯ ಆರಂಭವಾಗಲೇ ಇಲ್ಲ

ಇಂದಿಗೂ ಕಾಮಗಾರಿ, ರಕ್ಷಣಾ ಕಾರ್ಯ ಆರಂಭವಾಗಲೇ ಇಲ್ಲ

ಧನಗೂರಿನಲ್ಲಿ ಷಡಕ್ಷರಿ ನೆಲೆಸಿದ್ದ ಮಂಟಪಕ್ಕೆ ಪಾಳೇಗಾರರು ಮೂರು ಬಾರಿ ಪಿರಂಗಿಯಿಂದ ಗುಂಡು ಹೊಡೆದು ನಾಶ ಮಾಡಿದ್ದರು. ನಂತರದ ದಿನಗಳಲ್ಲಿ ಪಾಳು ಮಂಟಪವಾಗಿ ಹೋಗಿತ್ತು. ಅಲ್ಲಿದ್ದ ಕಲ್ಲುಗಳನ್ನು ಸತ್ತೇಗಾಲ ಹಳೇ ಸೇತುವೆ ನಿರ್ಮಾಣಕ್ಕೆ ಕೊಂಡೊಯ್ದು ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಂದಿನಿಂದ ಇಂದಿನವರೆಗೂ ಷಡಕ್ಷರಿ ನೆಲೆಸಿದ್ದ ಮಂಟಪ ಹಾಗೂ ದೇವಾಲಯ ಎರಡೂ ಪಾಳು ಬಿದ್ದಿವೆ. ಇದನ್ನು ಸಂರಕ್ಷಣೆ ಮಾಡಿ ಸ್ಮಾರಕವನ್ನಾಗಿಸಲು ಮುಂದೆ ಬರಲಿಲ್ಲ.

ಸ್ವಚ್ಛಗೊಳಿಸಿ ಸ್ಮಾರಕವಾಗಿಸಲು ಮುಂದಾಗಿದೆ

ಸ್ವಚ್ಛಗೊಳಿಸಿ ಸ್ಮಾರಕವಾಗಿಸಲು ಮುಂದಾಗಿದೆ

ಇತಿಹಾಸದ ಸ್ಮಾರಕಗಳನ್ನು ರಕ್ಷಣೆ ಮಾಡುವ ಗುರುತರ ಜವಾಬ್ದಾರಿ ಹೊಂದಿರುವ ಯುವ ಬ್ರಿಗೇಡ್ ಕಾರ್ಯಕರ್ತರು ಇದರ ರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ. ಶ್ರೀರಂಗಪಟ್ಟಣ ಮತ್ತಿತರ ಕಡೆಗಳಲ್ಲಿ ನಡೆಸಿರುವ ಕಾರ್ಯವನ್ನು ಪ್ರಧಾನಿ ಕಾರ್ಯಲಯವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಯುವ ಬ್ರಿಗೇಡ್ ನ ಜಿಲ್ಲಾ ಸಹ ಸಂಚಾಲಕ ಮಹೇಶ್ ಕಿಟ್ಟಿ, ತಾಲೂಕು ಸಂಚಾಲಕ ಶಿವಪ್ರಸನ್ನ, ಗಂಗಾಧರ, ಮಲ್ಲಿಕಾರ್ಜುನ, ಭರತ್, ಮಧು, ರಂಜಿತ್ ಇತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇನ್ನಾದರೂ ಮಹಾಕವಿ ಷಡಕ್ಷರಿ ಮಂಟಪ ಮತ್ತು ದೇವಾಲಯ ಸ್ಮಾರಕವಾಗುವುದೇ ಕಾದು ನೋಡಬೇಕಾಗಿದೆ.

"ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದಲ್ಲಿರುವ ಮಹಾಕವಿ ಷಡಕ್ಷರಿ ವಾಸವಾಗಿದ್ದ ಮಂಟಪ ಮತ್ತು ದೇವಾಲಯ ಅವಸಾನದಲ್ಲಿತ್ತು. ಇದನ್ನು ಸಂರಕ್ಷಿಸಿ ಸ್ಮಾರಕ ಮಾಡುವ ನಿಟ್ಟಿಲ್ಲಿ ಮುಂದಾಗದಿರುವುದ ವಿಷಾದನೀಯ. ಆದರೆ ಯುವ ಬ್ರಿಗೇಡ್ ನವರು ಈ ಸ್ಥಳವನ್ನು ಸ್ವಚ್ಛಗೊಳಿಸಿ ಸ್ಮಾರಕವಾಗಿಸಲು ಮುಂದಾಗಿರುವುದು ಶ್ಲಾಘನೀಯ," ಎಂದು ಧನಗೂರು ಮಠಾಧೀಶರಾದ ವೀರಸಿಂಹಾಸ ತಿಳಿಸಿದರು.

English summary
Yuva Brigade social works done at Mandya district, Malavalli taluku dhanaguru village Mahakavi Shadakshari deva mantapa historical site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X