ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್‌ಎಸ್‌ಕೆಯಲ್ಲಿ ಕಾರ್ಮಿಕರ ಅಮಾನತು; ನಿರಾಣಿ ವಿರುದ್ಧ ಆಕ್ರೋಶ

|
Google Oneindia Kannada News

ಮಂಡ್ಯ, ಏಪ್ರಿಲ್ 06; ಪಾಂಡವಪುರ ಸಹಕಾರ ಸಕ್ಕರೆ ಕಾರ್ಖನೆಯಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಪ್ರಯತ್ನ ನಡೆಸಲಾಗಿದೆ. ಸಚಿವ ಮುರುಗೇಶ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖನೆ (ಪಿಎಸ್‌ಎಸ್‌ಕೆ)ಯನ್ನು ನಿರಾಣಿ ಶುಗರ್ಸ್ 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ಆದರೆ ಭದ್ರತಾ ಠೇವಣಿ ಕಟ್ಟದೆ ಸಕ್ಕರೆ ಕಾರ್ಖಾನೆ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಎರಡನೇ ಬಾರಿ ಮಂತ್ರಿ ಪದವಿ ಪಡೆದುಕೊಂಡ ಯಶಸ್ವಿ ಉದ್ಯಮಿ ಮುರುಗೇಶ್ ನಿರಾಣಿ! ಎರಡನೇ ಬಾರಿ ಮಂತ್ರಿ ಪದವಿ ಪಡೆದುಕೊಂಡ ಯಶಸ್ವಿ ಉದ್ಯಮಿ ಮುರುಗೇಶ್ ನಿರಾಣಿ!

ಡಾ. ಹೆಚ್. ಎನ್. ರವೀಂದ್ರ ಮತ್ತು ಇತರರು ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಪ್ರಯತ್ನ ನಡೆಸಿರುವುದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಚಿವರಾದ ಮುರುಗೇಶ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ಬಾಗಿಲು ತೆರೆಯಲಿದೆ ಮೈಷುಗರ್ ಸಕ್ಕರೆ ಕಾರ್ಖನೆ ಮತ್ತೆ ಬಾಗಿಲು ತೆರೆಯಲಿದೆ ಮೈಷುಗರ್ ಸಕ್ಕರೆ ಕಾರ್ಖನೆ

Workers Suspended In PSSK Upset With Minister Murugesh Nirani

ಕಾರ್ಖನೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್ ಕಾರ್ಖನೆಯ ಶುಚಿತ್ವ, ಯಂತ್ರೋಪಕರಣಗಳ ರಿಪೇರಿ, ಅಳವಡಿಕೆ ಸೇರಿದಂತೆ ಕಾರ್ಖನೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಕಬ್ಬು ಅರೆಯಲಾಗಿತ್ತು.

2 ದಶಕಗಳಿಂದ ಮುಚ್ಚಿರುವ ಸಕ್ಕರೆ ಕಾರ್ಖಾನೆ: ಆರೂಢ ಪ್ರಶ್ನೆಯಲ್ಲಿ ಕಾರಣ ಬಹಿರಂಗ2 ದಶಕಗಳಿಂದ ಮುಚ್ಚಿರುವ ಸಕ್ಕರೆ ಕಾರ್ಖಾನೆ: ಆರೂಢ ಪ್ರಶ್ನೆಯಲ್ಲಿ ಕಾರಣ ಬಹಿರಂಗ

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖನೆ ಬಗ್ಗೆ ಮಾತನಾಡಿದ್ದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ, "ಮುಂದಿನ 5 ವರ್ಷಗಳಲ್ಲಿ ನಿತ್ಯ 10 ಸಾವಿರ ಟನ್ ಕಬ್ಬು ಅರೆಯುವಿಕೆ, 40 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸೇರಿದಂತೆ ಉಪ ಉತ್ಪನ್ನ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ" ಎಂದು ಹೇಳಿದ್ದರು.

Recommended Video

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌.ವಿ.ರಮಣ ನೇಮಕ | Oneindia Kannada

ಸರ್ಕಾರದ ಒಡೆತನದಲ್ಲಿದ್ದ ಪಿಎಸ್‌ಎಸ್‌ಕೆ ಅನ್ನು ನಿರಾಣಿ ಶುಗರ್ಸ್ ಕಾರ್ಖಾನೆಯನ್ನು ವಶಕ್ಕೆ ಪಡೆಯುವಾಗ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಸಹ ಮನವಿ ಸಲ್ಲಿಸಿತ್ತು. ಆದರೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಇದನ್ನು ತಿರಸ್ಕರಿಸಿತ್ತು.

English summary
More than 20 workers suspended from PSSK. Workers upset against Minister Murugesh Nirani. Karnataka government handover the Pandavapura Sahakari Sakkare Karkhane (PSSK) to Nirani Sugars for 40-year lease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X