• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿಗೆ ಕಪಾಳಮೋಕ್ಷ ಪ್ರಕರಣ; ವರದಿ ಕೇಳಿದ ಮಂಡ್ಯ ಎಸ್‌ಪಿ

By ಮಂಡ್ಯ ಪ್ರತಿನಿಧಿ
|

ಮಂಡ್ಯ, ಮಾರ್ಚ್ 10: ವಾಹನಗಳ ದಾಖಲೆ ತಪಾಸಣೆ ವೇಳೆ ಯುವತಿಯೊಬ್ಬಳು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ಕೋಪಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್ ಎಂಬುವರು ಯುವತಿಯ ಕಪಾಳಕ್ಕೆ ಬಾರಿಸಿದ ಘಟನೆಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ಅವರಿಗೆ ಈ ಸಂಬಂಧ ವರದಿ ನೀಡುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಸೂಚಿಸಿದ್ದಾರೆ.

   ಮಂಡ್ಯ ಹುಡುಗಿ ಪೊಲೀಸರ ಜೊತೆ ಕಿತ್ತಾಡಿಕೊಂಡ ವಿಡಿಯೋ ವೈರಲ್ | Oneindia Kannada

   ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಯುವತಿ ಚಲಾಯಿಸುತ್ತಿದ್ದ ಸ್ಕೂಟರ್​ ಅನ್ನು ತಡೆದು ದಾಖಲಾತಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನನ್ ಸ್ಕೂಟರ್ ಅನ್ನು ಯಾಕ್ ಮುಟ್ಟಿದ್ದೀರಾ ಎಂದು ಯುವತಿ ಅವಾಜ್ ಹಾಕಿದ್ದಾರೆ.

   ಇದಕ್ಕೆ ಕೋಪಗೊಂಡ ಮಂಡ್ಯದ ಮಹಿಳಾ ಠಾಣೆ ಪಿಎಸ್ಐ ಸವಿತಾಗೌಡ ಪಾಟೀಲ್, ಯುವತಿಗೆ ಕಪಾಳ ಮೋಕ್ಷ ಮಾಡಿದ್ದರು. ಪೊಲೀಸರೇ ಚಿತ್ರೀಕರಿಸಿದ ಈ ಘಟನೆಯ ವಿಡಿಯೋ ರಾಜ್ಯಾದ್ಯಂತ ಸಾಕಷ್ಟು ವೈರಲ್ ಆಗಿತ್ತು. ಪೊಲೀಸ್ ಅಧಿಕಾರಿಯ ಮೇಲೆ ಟೀಕೆಗಳು ಕೇಳಿಬಂದಿದ್ದವು.

   ಈ ಹಿನ್ನೆಲೆಯಲ್ಲಿ ಎಲ್ಲ ಪೊಲೀಸರಿಗೂ ಸೂಚನೆ ನೀಡಿರುವ ಎಸ್‌ಪಿ ಅವರು, ಮಂಡ್ಯ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೌಜನ್ಯದಿಂದ ವರ್ತಿಸಬೇಕು ಎಂದೂ ಆದೇಶಿಸಿದ್ದಾರೆ. ಕಾನೂನು ಸುವ್ಯವಸ್ಥೆ, ಸಂಚಾರಕ್ಕೆ ಸಂಬಂಧಿಸಿದ ಕರ್ತವ್ಯಕ್ಕೆ ಪೊಲೀಸರ ಜೊತೆ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

   English summary
   Mandya District SP Dr.Ashwini, has instructed to report to the DySP regarding the incident of a young woman being assault in Mandya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X