ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತಚಲಾಯಿಸೋಲ್ಲ, ಯಾಕೆ ಗೊತ್ತಾ?

|
Google Oneindia Kannada News

Recommended Video

Lok Sabha Elections 2019: ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಮತ ಚಲಾಯಿಸೋಲ್ಲ | Oneindia Kannada

ಮಂಡ್ಯ, ಏಪ್ರಿಲ್ 18: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮತವನ್ನು ತಾವೇ ಚಲಾಯಿಸುವುದಕ್ಕೆ ಸಾಧ್ಯವಿಲ್ಲ. ಯಾಕೆ ಗೊತ್ತಾ?

ಲೋಕಸಭೆ ಚುನಾವಣೆ LIVE:ಜಯನಗರದಲ್ಲಿ ಮತ ಚಲಾಯಿಸಿದ ನಿರ್ಮಲಾ ಸೀತಾರಾಮನ್ಲೋಕಸಭೆ ಚುನಾವಣೆ LIVE:ಜಯನಗರದಲ್ಲಿ ಮತ ಚಲಾಯಿಸಿದ ನಿರ್ಮಲಾ ಸೀತಾರಾಮನ್

ನಿಖಿಲ್ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಪಡೆದಿದ್ದು, ಅವರು ರಾಮನಗರದ ಕೇತಗಾನಹಳ್ಳಿಯಲ್ಲಿಈಗಾಗಲೇ ಮತಚಲಾಯಿಸಿದ್ದಾರೆ.

Why Nikhil Kumaraswamy will not cast his vote in Mandya?

ಅಂತೆಯೇ ಅವರ ತಂದೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ತಾಯಿ ಅನಿತಾ ಕುಮಾರಸ್ವಾಮಿ ಅವರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೇ ಮತದಾನದ ಹಕ್ಕು ಪಡೆದಿದ್ದು, ಅವರೂ ಮಗನಿಗೆ ಮತ ಹಾಕುವುದಕ್ಕೆ ಸಾಧ್ಯವಿಲ್ಲ.

ಇಡೀ ರಾಷ್ಟ್ರದ ಗಮನ ಸೆಳೆದ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಏಪ್ರಿಲ್ 18 ರಂದು ಬೆಳಿಗ್ಗೆ ಏಳರಿಂದ ಆರಂಭವಾಗಿದ್ದು, ಸಂಜೆ ಆರರವರೆಗೆ ನಡೆಯಲಿದೆ.

ಈ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸ್ವತಂತ್ರ ಸಭ್ಯರ್ಥಿಯಾಗಿ ನಟಿ ಸುಮಲತಾ ಅಂಬರೀಶ್ ಕಣದಲ್ಲಿದ್ದಾರೆ.

ಏಪ್ರಿಲ್ 11 ರಂದೇ ದೇಶದಲ್ಲಿ ಚುನಾವಣೆ ಆರಂಭವಾಗಿದ್ದು ಮೇ 19 ರ ವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Congress-JDS Mandya candidate Nikhil Kumaraswamy will not be able to cast his vote in Mandya. Because he has his voter right in Bangalore rural constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X