ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬಿ ಹುಟ್ಟೂರಿನ ಮಂದಿ ಸುಮಲತಾ ಬಗ್ಗೆ ಹೇಳುವುದೇನು?

|
Google Oneindia Kannada News

Recommended Video

Lok Sabha Elections 2019 : ಅಂಬಿ ತವರೂರಿನ ಜನ ಸುಮಲತಾ ಬಗ್ಗೆ ಏನೇನ್ ಹೇಳ್ತಾರೆ ಗೊತ್ತಾ? | Oneindia Kannada

ಮಂಡ್ಯ, ಮಾರ್ಚ್ 30: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ-ಸುಮಲತಾ ಅಂಬರೀಶ್ ನಡುವಿನ ಚುನಾವಣಾ ಖಾವು ತಾರಕಕ್ಕೆ ಏರಿದೆ. ಸ್ಪಷ್ಟವಾಗಿ ಇವರೇ ಗೆಲ್ಲುತ್ತಾರೆಂದು ಹೇಳುವುದು ಚುನಾವಣಾ ವಿದ್ವಾಂಸರಿಗೂ ಕಷ್ಟವಾಗಿಬಿಟ್ಟಿರುವ ಪರಿಸ್ಥಿತಿ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸರ್ಕಾರದ ಚುಕ್ಕಾಣಿ ಹಿಡಿದರುವವರನ್ನೇ ಎದುರಿಸಿ ಚುನಾವಣೆಗೆ ನಿಂತಿರುವ ಸುಮಲತಾ ಅವರ ಮೇಲಂತೂ ಭಾರಿ ಒತ್ತಡ ಇದೆ. ಜೊತೆಗೆ ಹಲವು ಟೀಕೆಗಳನ್ನೂ ಅವರು ಎದುರಿಸಬೇಕಾಗಿ ಬಂದಿದೆ. ಅದರಲ್ಲಿ ಒಂದು, ಸುಮಲತಾ ಅವರು ಮಂಡ್ಯದವರಲ್ಲ ಅವರು ಅಲ್ಲೆಲ್ಲೋ ಇರುವ ಆಂಧ್ರಪ್ರದೇಶದಿಂದ ಬಂದವರು ಎಂಬುದು.

ರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಕಾಂಗ್ರೆಸ್ ಕಾರ್ಯಕರ್ತರು:ಸುಮಲತಾ ಸಂದರ್ಶನರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಕಾಂಗ್ರೆಸ್ ಕಾರ್ಯಕರ್ತರು:ಸುಮಲತಾ ಸಂದರ್ಶನ

ಆದರೆ ಜೆಡಿಎಸ್‌ನ ಕಾರ್ಯಕರ್ತರು, ಮುಖಂಡರು ಮಾಡುತ್ತಿರುವ ಆರೋಪ ನಿಜವೇ, ನಿಜವಾಗಿಯೂ ಮಂಡ್ಯದ ಜನ ಅದರಲ್ಲಿಯೂ ಅಂಬರೀಶ್ ಅವರ ಹುಟ್ಟೂರಿನ ಜನ ಸುಮಲತಾ ಅವರ ಬಗ್ಗೆ ಹೀಗೆ ಯೋಚಿಸುತ್ತಿದ್ದಾರೆಯೇ ತಿಳಿಯಲು 'ಒನ್ ಇಂಡಿಯಾ ಕನ್ನಡ' ಅಂಬರೀಶ್ ಅವರ ಹುಟ್ಟೂರು ದೊಡ್ಡರಸಿನಕೆರೆಗೆ ಭೇಟಿ ನೀಡಿ ಜನಗಳ ಅಭಿಪ್ರಾಯ ಸಂಗ್ರಹಣೆ ಮಾಡಿತು.

ಅಂಬಿಯನ್ನು ಕ್ಷಣಿಕವೂ ಮರೆತಿಲ್ಲ ಜನ

ಅಂಬಿಯನ್ನು ಕ್ಷಣಿಕವೂ ಮರೆತಿಲ್ಲ ಜನ

ಮಂಡ್ಯದಲ್ಲಿ ಹುಟ್ಟಿ ಇಂಡಿಯಾ ಎತ್ತರಕ್ಕೆ ಬೆಳೆದ ತಮ್ಮ ಊರಿನ ಮಗ ಅಂಬಿಯನ್ನು ದೊಡ್ಡರಸಿನಕೆರೆಯ ಜನ ಅಲ್ಪವೂ ಮರೆತಿಲ್ಲ. ಅಂಬಿ ಹೋದ ನಂತರ ಅಂಬಿ ಮೇಲಿನ ಪ್ರೀತಿ ಸುಮಲತಾ ಅವರ ಕಡೆಗೆ ವಾಲಿರುವುದು ಗ್ರಾಮದ ಜನರ ಜೊತೆ ಮಾತನಾಡಿದಾಗ ಗೊತ್ತಾಗುತ್ತದೆ.

ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

ದೊಡ್ಡರಸಿನಕೆರೆಯಲ್ಲಿ ಒನ್‌ಇಂಡಿಯಾ ಕನ್ನಡ

ದೊಡ್ಡರಸಿನಕೆರೆಯಲ್ಲಿ ಒನ್‌ಇಂಡಿಯಾ ಕನ್ನಡ

'ಒನ್ ಇಂಡಿಯಾ ಕನ್ನಡ' ಮಾತನಾಡಿಸಿದ ಯಾವ ವ್ಯಕ್ತಿಯೂ ಸಹ ಸುಮಲತಾ ಹೊರಗಿನವರು ಎನ್ನಲಿಲ್ಲ, ಆಕೆ ನಮ್ಮ ಊರಿನ ಹೆಣ್ಣು ಮಗಳು, ನಮ್ಮ ಮನೆ ಸೊಸೆ ಎಂದೇ ಹೆಮ್ಮೆಯಿಂದ ಹೇಳಿದರು. ಅಷ್ಟೆ ಅಲ್ಲ ಆಕೆಗೇ ಈ ಬಾರಿ ತಮ್ಮ ಮತ ಎಂದು ಗಂಟಾ-ಘೋಷವಾಗಿ ಹೇಳಿದರು.

ಎಚ್ಡಿಕೆ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ: ಸುಮಲತಾ ಎಚ್ಡಿಕೆ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ: ಸುಮಲತಾ

'ಕುಮಾರಸ್ವಾಮಿ, ಸುಮಲತಾರ ಟೀಕಿಸುವುದು ಬಿಡಬೇಕು'

'ಕುಮಾರಸ್ವಾಮಿ, ಸುಮಲತಾರ ಟೀಕಿಸುವುದು ಬಿಡಬೇಕು'

ಕುಮಾರಸ್ವಾಮಿ ಅವರು ನಮ್ಮ ಮನೆ ಹೆಣ್ಣು ಮಗಳ ಬಗ್ಗೆ ಟೀಕೆ ಮಾಡುವುದು ನಮಗೆ ಸ್ವಲ್ಪವೂ ಹಿಡಿಸಿಲ್ಲವೆಂದು ಹಿರಿಯರೊಬ್ಬರು ನೊಂದು ಹೇಳಿದ್ದು, ಸುಮಲತಾ ಅವರ ಬಗ್ಗೆ ದೊಡ್ಡರಸಿನಕೆರೆ ಊರಿನ ಜನರಿಗೆ ಇರುವ ಪ್ರೀತಿಗೆ ಸಾಕ್ಷ್ಯವಾಗಿ ನಿಂತಿತು.

'ಅವರ ಮನೆ ಅನ್ನ ತಿಂದಿದ್ದೇವೆ, ಮತ ಅವರಿಗೇ'

'ಅವರ ಮನೆ ಅನ್ನ ತಿಂದಿದ್ದೇವೆ, ಮತ ಅವರಿಗೇ'

ದೊಡ್ಡರಸಿನಕೆರೆಯಲ್ಲಿ 3500 ಮತಗಳಿವೆ, ಅವುಗಳಲ್ಲಿ ಬಹುತೇಕ ಮತಗಳು ಸುಮಲತಾಗೆ ಮೀಸಲಾಗಿವೆ. ಕೆಲವು ಜೆಡಿಎಸ್‌ ಮತಗಳೂ ಇವೆ ಆದರೆ ಅವು ಅತ್ಯಲ್ಪ ಎಂದು ಒಬ್ಬ ಯುವಕರು ಲೆಕ್ಕ ನೀಡಿದರು. ಮತ್ತೊಬ್ಬರಂತೂ ಅವರ ಮನೆ ಅನ್ನ ತಿಂದವರು ನಾವು ಅವರಿಗೆ ಮತ ನೀಡಿಯೇ ಸಿದ್ಧ ಎಂದರು. ಇಡೀಯ ಮಂಡ್ಯದಲ್ಲಿ ಫಲಿತಾಂಶ ಏನಾಗುತ್ತದೋ ಏನೋ ಆದರೆ ಸುಮಲತಾ ಅವರು ತಮ್ಮ ಗಂಡನ ಊರಿನ ಜನಗಳ ಮನಸ್ಸಿನಲ್ಲಂತೂ ಇದ್ದಾರೆ ಎಂಬುದು ಖಾಯಂ.

English summary
One India Kannada team visited Ambareesh's home village Doddarasinakere. Talked with people they most of the people saying they will vote for Sumalatha Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X