ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುದ್ಧ ಗೆದ್ದಾಗಿದೆ ಇನ್ನು ಶಾಂತಿ ಸ್ಥಾಪನೆ ಮಾಡೋಣ: ಯಶ್

|
Google Oneindia Kannada News

Recommended Video

ಮಂಡ್ಯ ಚುನಾವಣೆ ಯುದ್ಧ ಗೆದ್ದೆವು ಎಂದ ಯಶ್ | Oneindia kannada

ಮಂಡ್ಯ, ಮೇ 29: ಯುದ್ಧ ಗೆದ್ದಾಗಿದೆ, ಇನ್ನು ಶಾಂತಿಯ ಸಮಯ, ಇಷ್ಟು ದಿನ ನಮ್ಮ ಮೇಲೆ ವಾಗ್ದಾಳಿ ನಡೆಸಿದ್ದೀರಿ ಇನ್ನು ನಿಲ್ಲಿಸಿಬಿಡಿ ಜನಕ್ಕಾಗಿ ಒಟ್ಟಿಗೆ ದುಡಿಯೋಣ ಎಂದು ನಟ ಯಶ್ ಹೇಳಿದರು.

ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಮಾತನಾಡಿದ ಯಶ್, ಚುನಾವಣೆ ಸಮಯದಲ್ಲಿ ಎದುರಾಳಿಗಳು ಸಾಕಷ್ಟು ಮಾತನಾಡಿದ್ದಾರೆ, ಅದಕ್ಕೆ ತಕ್ಕ ಉತ್ತರವನ್ನು ಜನ ನೀಡಿದ್ದಾರೆ ಆದರೆ ಇನ್ನು ಮುಂದೆ ಬೇಡ ಎಂದು ಅವರು ಹೇಳಿದರು.

ಮಂಡ್ಯ ಮತದಾರರ ಪಾದಕ್ಕೆ ನಮಿನಿಸಿದ ದರ್ಶನ್ಮಂಡ್ಯ ಮತದಾರರ ಪಾದಕ್ಕೆ ನಮಿನಿಸಿದ ದರ್ಶನ್

ಮಂಡ್ಯದ ಜನರಲ್ಲಿ ಮನವಿಯನ್ನು ಮಾಡಿದ ಯಶ್, ಸಂಸದೆಯನ್ನಾಗಿ ಆಯ್ಕೆ ಮಾಡಿದ್ದೀರಿ, ಅವರಿಗೆ ಅವರ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಹುಟ್ಟುಹಬ್ಬಕ್ಕೆ ಬರಲಿಲ್ಲ, ಮದುವೆಗೆ ಬರಲಿಲ್ಲವೆಂದು ಮುನಿಸಿಕೊಳ್ಳುವುದು ಬೇಡ. ಬಹುತೇಕ ಜನಪ್ರತಿನಿಧಿಗಳಿಗೆ ಇದು ಸಮಸ್ಯೆಯಾಗಿರುವುದನ್ನು ನಾನು ನೊಡಿದ್ದೇನೆ ಎಂದು ಯಶ್ ಹೇಳಿದರು.

We won the war its time to peace: Yash

ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?

ಹೊಸ ರೀತಿಯ ರಾಜಕೀಯಕ್ಕೆ ಮಂಡ್ಯದ ಜನ ಶಕ್ತಿ ತುಂಬಿದ್ದೀರಿ. ಮಂಡ್ಯ ಜನರ ಪ್ರಬುದ್ಧತೆಯನ್ನು ಇಡೀಯ ಇಂಡಿಯಾಕ್ಕೆ ತೋರಿಸಿದ್ದೀರಿ. ನಿಮ್ಮ ನಂಬಿಕೆಯನ್ನು ಸುಮಕ್ಕ ಉಳಿಸಿಕೊಳ್ಳುತ್ತಾರೆ ಎಂದು ಯಶ್ ಭರವಸೆ ನೀಡಿದರು.

ಮಂಡ್ಯ ಜನರ ಜೊತೆಗಿರ್ತೇನೆ ಅಂಬರೀಶ್ ಮೇಲಾಣೆ: ಸುಮಲತಾಮಂಡ್ಯ ಜನರ ಜೊತೆಗಿರ್ತೇನೆ ಅಂಬರೀಶ್ ಮೇಲಾಣೆ: ಸುಮಲತಾ

ಅಂಬರೀಶ್ ಅವರು ನಮಗೆ ಬೆನ್ನೆಲುಬಾಗಿ ನಿಂತಿದ್ದರು, ನಮ್ಮ ಬೆಳವಣಿಗೆಯಲ್ಲಿ ಅವರ ಪಾಲಿದೆ, ಅಂಬರೀಶ್ ಅವರ ಋಣ ತೀರಿಸಲು ಸಿಕ್ಕ ಈ ಸಣ್ಣ ಅವಕಾಶವನ್ನು ನಾವು ಬಳಸಿಕೊಂಡೆವು, ನಾವು ದುಡಿದಿದ್ದಕ್ಕಿಂತಲೂ ಹೆಚ್ಚಿನದನ್ನು ನೀವು ದುಡಿದಿದ್ದೀರಾ ಎಂದು ಯಶ್ ಹೇಳಿದರು.

English summary
Actor Yash said we won Mandya election war but it is time to make peace with our political enemies. He talked in Mandya 'Swabhimana Vijayothsava'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X