ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KRSನಲ್ಲಿ ಏಕಾಏಕಿ ತಗ್ಗಿದ ಒಳಹರಿವು: ಜಲಾಶಯದ ಇಂದಿನ ಮಟ್ಟ ಎಷ್ಟು?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌ 11: ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಬಿರುಸಾಗಿ ಸುರಿಯುತ್ತಿದ್ದ ಮಳೆ ನಿನ್ನೆಯಿಂದ ಕೊಂಚ ಕಡಿಮೆಯಾದಂತಿದೆ. ತಗ್ಗಿದ ಮಳೆಯ ಪ್ರಮಾಣದಿಂದಾಗಿ ಕೆಆರ್ ಎಸ್ ನ ಜಲಾಶಯದ ಒಳಹರಿವಿನ ಮಟ್ಟದಲ್ಲೂ ಇಳಿಕೆಯಾಗಿದೆ.

Recommended Video

KRS Mandya, ಆತಂಕದಲ್ಲಿ ಮಂಡ್ಯದ ಜನತೆ | Oneindia Kannada

ಇಂದು ಕೆ ಆರ್ ಎಸ್ ಜಲಾಶಯದ ಒಳಹರಿವು 50 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ. ಹೀಗಾಗಿ ಕಾವೇರಿ ನದಿ ಪ್ರವಾಹವೂ ತಗ್ಗಿದಂತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವಾರದಿಂದ ಬಿಟ್ಟೂ ಬಿಡದೇ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದು, ಕೆಲವೆಡೆ ಜಮೀನುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಇದೀಗ ಮಳೆ ಕೊಂಚ ಕಡಿಮೆಯಾದಂತಿದೆ.

KRSನಿಂದ ತಮಿಳುನಾಡಿಗೆ ಹರಿದ ಕಾವೇರಿ, ರೈತರ ಆಕ್ರೋಶKRSನಿಂದ ತಮಿಳುನಾಡಿಗೆ ಹರಿದ ಕಾವೇರಿ, ರೈತರ ಆಕ್ರೋಶ

ಕೆಆರ್ ಎಸ್ ನಲ್ಲಿ 75 ಸಾವಿರ ಕ್ಯೂಸೆಕ್ ಹೊರ ಹರಿವಿನ ಪ್ರಮಾಣ 30 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ. ಪ್ರವಾಹದ ಆತಂಕದಲ್ಲಿದ್ದ ಜನರಲ್ಲಿ ಆತಂಕವೂ ಕಡಿಮೆಯಾಗಿದೆ.

Mandya: Water Inflow Decreased To KRS Dam Due To Reduced Rainfall

ಕೆಆರ್ ಎಸ್ ಜಲಾಶಯದ ಇಂದಿನ ಮಟ್ಟ:
ಗರಿಷ್ಠ ನೀರಿನ ಮಟ್ಟ-124.80 ಅಡಿ
ಪ್ರಸ್ತುತ ನೀರಿನ ಮಟ್ಟ -120.00 ಅಡಿ
ಒಳ ಹರಿವು-58,083 ಕ್ಯೂಸೆಕ್
ಹೊರ ಹರಿವು-30657 ಕ್ಯೂಸೆಕ್
ಪ್ರಸ್ತುತ ನೀರಿನ ಸಂಗ್ರಹ-43.043 ಟಿಎಂಸಿ
ಗರಿಷ್ಠ ನೀರಿನ‌ ಸಂಗ್ರಹ ಸಾಮರ್ಥ್ಯ-49 ಟಿಎಂಸಿ

English summary
Due to the reduced rainfall, the KRS reservoir inflow has also declined today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X