ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಘಾತವಾದ ಬಸ್ ನಲ್ಲಿ ನಿಜವಾಗಲೂ ಸ್ಟೇರಿಂಗ್ ಲಾಕ್ ಆಗಿತ್ತಾ?

|
Google Oneindia Kannada News

ಮಂಡ್ಯ, ನವೆಂಬರ್ 24 : ಕನಗನವಾಡಿಯಲ್ಲಿ ಶನಿವಾರ ನಡೆದ ಭೀಕರ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಹೊಸ ವಿಚಾರಗಳು ಹೊರಬರುತ್ತಿವೆ. 35 ಸೀಟ್ ಗಳ ಈ ಟಾಟಾ ಬಸ್ ಸದ್ಯಕ್ಕೆ ಶ್ರೀನಿವಾಸ್ ಎಂಬುವರ ಸುಪರ್ದಿಯಲ್ಲಿತ್ತು. ಇಂಥ ಹಲವು ಖಾಸಗಿ ಬಸ್ ಗಳು ಮಂಡ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಈ ಬಸ್ ಖರೀದಿಸಿದ್ದು 2001ರಲ್ಲಿ. 17- 18 ವರ್ಷಗಳಾಗಿವೆ.

ಬಸ್ ನಲ್ಲಿದ್ದು, ಪವಾಡಸದೃಶ ರೀತಿಯಲ್ಲಿ ಬದುಕಿ ಬಂದ ಗಿರೀಶ್ ಎಂಬುವವರ ಪ್ರಕಾರ, ಸ್ಟೇರಿಂಗ್ ಲಾಕ್ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಆದರೆ ಈ ಕುರಿತು ಒನ್ ಇಂಡಿಯಾ ಕನ್ನಡದಿಂದ ಕೆಲವು ಬಸ್ ಚಾಲಕರನ್ನೇ ಸಂಪರ್ಕಿಸಿ, ಪ್ರಶ್ನಿಸಿದಾಗ ಅವರು ಹೇಳಿದ್ದಿಷ್ಟು.

ಮಂಡ್ಯ ದುರಂತದ ಬಸ್ ಗೆ ಒಂಬತ್ತನೇ ಮಾಲೀಕರು ಶ್ರೀನಿವಾಸ್ಮಂಡ್ಯ ದುರಂತದ ಬಸ್ ಗೆ ಒಂಬತ್ತನೇ ಮಾಲೀಕರು ಶ್ರೀನಿವಾಸ್

ಸ್ಟೇರಿಂಗ್ ಲಾಕ್ ಎಂಬುವುದು ನಾಲ್ಕು ಚಕ್ರ ಹಾಗೂ ಅದರ ಮೇಲ್ಪಟ್ಟ ಯಾವುದೇ ವಾಹನವನ್ನು ಸವಾರಿ ಮಾಡಬೇಕಾದವರು ಗಮನ ಹರಿಸಲೇಬೇಕಾದ ವಿಚಾರ. ಈ ಥರನಾದ ಲಾಕ್ ಮಾಡಿದರೆ ಇಡೀ ಗಾಡಿಯೇ ಮುಂದಕ್ಕೆ ಹೋಗದ ಪರಿಸ್ಥಿತಿ. ವಾಹನದ ಮುಂದಿನ 2 ಚಕ್ರಗಳು ಚಲನೆ ಮಾಡಲು ಆಗದಂತೆ ಇರುವ ಸ್ಥಿತಿ. ಇದು ಕಂಡುಬರುವುದು ಮುಂದುವರಿದಿರುವ ತಂತ್ರಜ್ಞಾನ ಹೊಂದಿದ ವಾಹನಗಳಲ್ಲಿ ಮಾತ್ರ ಎನ್ನುತ್ತಾರೆ ಅನುಭವಿ ಚಾಲಕ ವಾದಿರಾಜ್.

Mandya Accident

ಅದರಲ್ಲೂ ಬಸ್ ಚಾಲನೆ ಮಾಡುವುದು ಸ್ವಲ್ಪ ಕ್ಲಿಷ್ಟಕರ. ಎರಡು ದಶಕಗಳಷ್ಟು ಹಿಂದಿನ ವಾಹನ ಇದಾಗಿದ್ದು, ಇದರಲ್ಲಿ ಸ್ಟೇರಿಂಗ್ ಲಾಕ್ ಇರುವುದು ಅಸಾಧ್ಯದ ಮಾತು. ಸ್ಟೇರಿಂಗ್ ಲಾಕ್ ನಿಂದ ಈ ಅಪಘಾತ ನಡೆದಿರುವ ಸಾಧ್ಯತೆ 90% ಇಲ್ಲವೇ ಇಲ್ಲ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದರು.

ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

ಇನ್ನು ವಾಹನಕ್ಕೆ ಹೊಸದಾಗಿ ಸ್ಟೇರಿಂಗ್ ಲಾಕ್ ಹಾಕಿಸಬಹುದು. ಆದರೆ ಅದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸಬೇಕು. ಅದರಲ್ಲೂ ಇದು ರೂಟ್ ಬಸ್ ಆಗಿರುವುದರಿಂದ ಈ ಸ್ಟೇರಿಂಗ್ ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಈ ಬಸ್ ನಲ್ಲಿ ಹಳೆ ಥರದ ಸ್ಟೇರಿಂಗ್ ವ್ಯವಸ್ಥೆ ಇರುತ್ತದೆ ಎನ್ನುತ್ತಾರೆ ಅವರು.

ಒಟ್ಟಾರೆ ಈ ಮೇಲಿನ 2 ಹೇಳಿಕೆಗಳನ್ನು ಗಮನಸಿದರೆ ಸ್ಟೇರಿಂಗ್ ಲಾಕ್ ನಿಂದ ಈ ಘಟನೆ ನಡೆದಿಲ್ಲ ಎಂದು ಬಲವಾಗಿ ಅನಿಸುತ್ತದೆ.

English summary
Was steering lock real reason for bus tragedy? This is the main question in Mandya Kanaganavadi accident. Here is an opinion of driver about steering lock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X