ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಲು ಸೇತುವೆಗೆ ಒತ್ತಾಯಿಸಿ ಕುರಿ-ಮೇಕೆಗಳೊಂದಿಗೆ ಹೆದ್ದಾರಿ ತಡೆದು ಪ್ರತಿಭಟನೆ ವಾಟಾಳ್‌

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 20: ಮದ್ದೂರು ತಾಲೂಕಿನ ಸೋಮನಹಳ್ಳಿಯ ಎಸ್.ಸಿ. ಮಲ್ಲಯ್ಯ ವಿದ್ಯಾಸಂಸ್ಥೆ ಬಳಿ ಮೇಲು ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಂಗಳವಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಕುರಿ-ಮೇಕೆಗಳ ಜೊತೆಗೆ ಕಾರ್ಯಕರ್ತರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೆದ್ದಾರಿಯಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಅ.15 ರಂದು ಹಿಂದಿ ಹೇರಿಕೆ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ವಾಟಾಳ್ ನಾಗರಾಜ್ಅ.15 ರಂದು ಹಿಂದಿ ಹೇರಿಕೆ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ವಾಟಾಳ್ ನಾಗರಾಜ್

ವಿದ್ಯಾಸಂಸ್ಥೆಗೆ ಅಕ್ಕಪಕ್ಕದ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಿದ್ದಾರೆ. ಹೆದ್ದಾರಿ ದಾಟಿ ಶಾಲೆಗೆ ಹೋಗಬೇಕಾಗಿದೆ. ಇದರಿಂದ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿವೆ. ಹೀಗಾಗಿ ಜನ ಸಾಮಾನ್ಯರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೇಲು ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರು.

Vatal Nagaraj Protest for Demanding Flyover Bridge near School in Maddur

ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜು, ಸೋಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲುಸೇತುವೆ ಕೋರಿ ಸರಕಾರ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಹ ಸೇತುವೆ ನಿರ್ಮಾಣ ಮಾಡುವಲ್ಲಿ ಬೇಜವಾಬ್ದಾರಿ ಮಾಡಿದೆ. ಮದ್ದೂರು-ತುಮಕೂರು ರಾಜ್ಯ ಹೆದ್ದಾರಿಯಲ್ಲೂ ಸಹ ದುಂಡನಹಳ್ಳಿ ಬಳಿ ಮೇಲುಸೇತುವೆ ನಿರ್ಮಾಣ ಮಾಡಬೇಕು. ಸರಕಾರಕ್ಕೆ ಸೇತುವೆ ನಿರ್ಮಾಣ ಮಾಡಲು ಒಂದು ತಿಂಗಳ ಗಡುವು ನೀಡಿದ್ದು, ಅಷ್ಟರಲ್ಲಿ ನಿರ್ಮಾಣವಾಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

9 ಕ್ಯಾಮೆರಾಗಳನ್ನೊಳಗೊಂಡ ವಿಶೇಷ ರೋಬೋಟ್

ಶ್ರೀರಂಗ ಪಟ್ಟಣದ ಖ್ಯಾತ ಜ್ಯೋತಿಷಿ ಡಾ. ಭಾನುಪ್ರಕಾಶ್‌ ಶರ್ಮಾರ ಮನೆಯಲ್ಲಿ ವಿಶಿಷ್ಟ ರೀತಿಯ ರೋಬೋಟ್ ಮನೆಯ ನೆಲ ಗುಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ.

ಇತ್ತೀಚೆಗೆ ಅಮೆರಿಕಾ ಪ್ರವಾಸ ಕೈಗೊಡ್ಡಿದ್ದ ಅವರು, ಸುಮಾರು 9 ಕ್ಯಾಮೆರಾಗಳನ್ನೊಳಗೊಂಡ ವಿಶೇಷ ರೋಬೋಟ್ ಅನ್ನು ಖರೀದಿಸಿ ತಂದಿದ್ದಾರೆ. ಈ ರೋಬೋಟ್ ಮೊಬೈಲ್‌ನಿಂದ ಸ್ವ-ಯಂ ಚಾಲನೆಗೊಳ್ಳುವುದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಮನೆಯಲ್ಲೆಲ್ಲ ಓಡಾಡಿ ಕಸವನ್ನು ಗ್ರಹಿಸಿ ಸಂಗ್ರಹಿಸಿಕೊಳ್ಳುತ್ತದೆ. ಮೊಬೈಲ್ ವೈಫೈಗೆ ಕನೆಕ್ಟ್ ಮಾಡಿಕೊಂಡು ಇದರಿಂದ ಕೆಲಸ ಮಾಡಿಸಬಹುದಾಗಿದ್ದು, ಒಂದು ವೇಳೆ ಚಾರ್ಜ್ ಕಡಿಮೆ ಇದ್ದರೆ ಅದೇ ತನ್ನ ಚಾರ್ಜರ್ ಸ್ಥಾನಕ್ಕೆ ತೆರಳಿ ಚಾರ್ಜ್ ಮಾಡಿಕೊಂಡು ತನ್ನ ಕೆಲಸ ಮುಂದುವರೆಸುತ್ತಿದೆ.

Vatal Nagaraj Protest for Demanding Flyover Bridge near School in Maddur

ಮನೆಯಲ್ಲಿನ ಸೂಕ್ಷ್ಮ ಕಸವನ್ನು ಬಿಡದೆ ಒಳಗೆ ಸೆಳೆದು ಅದನ್ನು ಚಿಕ್ಕ ಬ್ಯಾಗ್‌ನಲ್ಲಿ ಹಾಕಿ ಮನೆಯನ್ನು ಸದಾ ಸ್ವಚ್ಛವಾಗಿಡುತ್ತದೆ. ನಂತರ ಸ್ವಯಂಚಾಲಿತವಾಗಿ ತನ್ನ ಮೂಲ ಸ್ಥಾನಕ್ಕೆ ತೆರಳಿ ಸಂಗ್ರಹಿಸಿದ್ದ ಕಸವನ್ನು ಅಲ್ಲಿರಿಸಲಾಗಿರುವ ಡಬ್ಬಕ್ಕೆ ತುಂಬುವುದು ಇದರ ಮತ್ತೊಂದು ವಿಶೇಷ. ಜೊತೆಗೆ ಈ ರೋಬೋಟ್ ಸ್ವಯಂ ಚಾಲಿತವಾಗಿಯೇ ಚಾರ್ಜ್ ಆಗಲಿದ್ದು, ವಯಸ್ಸಾದ ವಯೋವೃದ್ದರಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಲಿದೆ. ಮಂಚ, ಕುರ್ಚಿ, ಬೆಂಚ್‌ಗಳ ಅಡಿಯಲ್ಲಿ ತೆರಳಿ ಸ್ವಚ್ಛಗೊಳಿಸುವ ಈ ಯಂತ್ರವು, ಅಲಾರಾಂ ರೀತಿಯಲ್ಲಿಯೂ ಟೈಮ್ ಫಿಕ್ಸ್ ಮಾಡಿದ್ದರೆ ತನ್ನಷ್ಟಕ್ಕೆ ತಾನೇ ತನ್ನ ಕೆಲಸ ಆರಂಭಿಸುತ್ತದೆ.

English summary
Mandya district news update; Vatal Nagaraj protest for demanding flyover bridge for pedestrians near School in Maddur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X