ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಮುಂಬೈನಿಂದ ಬಂದಿದ್ದ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರಿಗೆ ಕೊರೊನಾ

|
Google Oneindia Kannada News

ಮಂಡ್ಯ, ಮೇ 04: ಮಂಡ್ಯ ಜಿಲ್ಲೆಯಲ್ಲಿ ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ಮುಂಬೈನ ಸಂತಾಕೃಷ್ ಈಸ್ಟ್ ನ್ಯೂ ಅಗ್ರಿಪಾಡ ಬಡಾವಣೆ ಅಪಾರ್ಟ್ ಮೆಂಟ್ ನಲ್ಲಿ 20 ವರ್ಷದ ಮಹಿಳೆ, ತನ್ನ ಪತಿ, ಬಾವ, ಬಾವನ ಹೆಂಡತಿ, ಮಕ್ಕಳೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಾರೆ. ಎಲ್ಲರೂ ಕೆ.ಆರ್. ಪೇಟೆ ತಾಲೂಕು ಜಾಗಿನಕೆರೆ ಗ್ರಾಮದವರಾಗಿದ್ದಾರೆ. ಇದರಲ್ಲಿ 20 ವರ್ಷದ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಈಕೆ ತನ್ನ ಗಂಡ, ಬಾವ, ಬಾವನ ಹೆಂಡತಿ ಮತ್ತು ಮಕ್ಕಳೊಂದಿಗೆ ಏ.23ರಂದು ಮುಂಬೈನಿಂದ ಸಂಜೆ ಹೊರಟಿದ್ದಾರೆ. ಕಾರಿನಲ್ಲಿ ಏ.24ರಂದು ಮಧ್ಯಾಹ್ನ ಜಾಗಿನಕೆರೆ ಗ್ರಾಮಕ್ಕೆ ಬಂದಿದ್ದಾರೆ. ಗರ್ಭಿಣಿಯಾಗಿರುವ ಕಾರಣ ಚೆಕ್‌ಪೋಸ್ಟ್‌ಗಳಲ್ಲಿ ತಾಯಿ ಕಾರ್ಡ್ ತೋರಿಸಿ ಸುಲಭವಾಗಿ ಬಂದಿದ್ದಾರೆ.

ಕೊರೊನಾ ಸೋಂಕಿನಿಂದ ಕಂಟೈನ್ಮೆಂಟ್ ವ್ಯಾಪ್ತಿಗೆ ಮೇಲುಕೋಟೆಕೊರೊನಾ ಸೋಂಕಿನಿಂದ ಕಂಟೈನ್ಮೆಂಟ್ ವ್ಯಾಪ್ತಿಗೆ ಮೇಲುಕೋಟೆ

ಮೇ. 1ರಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಆಂದೋಲನದ ರೀತಿಯಲ್ಲಿ ಕೊರೊನಾ ಪರೀಕ್ಷೆ ಮಾಡುತ್ತಿದ್ದು, ಇವರೂ ಪ್ರಯೋಗಾಲಯಕ್ಕೆ ಬಂದು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ಇರುವುದು ಪತ್ತೆಯಾಗಿದ್ದು, ಇದೀಗ ಅವರನ್ನು ಮಿಮ್ಸ್ ಐಸೊಲೇಷನ್ ವಾರ್ಡ್ ‌ನಲ್ಲಿ ದಾಖಲಿಸಲಾಗಿದೆ.

Two Women Including Pregnant Confirmed Coronavirus In Kr Pete

ಮುಂಬೈನ ಎಲ್.ಆರ್. ತಿವಾರಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿರುವ 19 ವರ್ಷದ ಯುವತಿಗೂ ಸೋಂಕು ದೃಢಪಟ್ಟಿದ್ದು, ಆಕೆ ಅಪಾರ್ಟ್ ‌ಮೆಂಟ್‌ನ ಬೇರೆ ಮನೆಯಲ್ಲಿ ವಾಸವಾಗಿದ್ದರು. ಗರ್ಭಿಣಿಯೊಂದಿಗೆ ಮುಂಬೈನಿಂದ ಪ್ರಯಾಣ ಮಾಡಿ ಜಾಗಿನಕೆರೆ ಗ್ರಾಮಕ್ಕೆ ಬಂದಿದ್ದಾರೆ. ಪರೀಕ್ಷೆ ನಡೆಸಿದಾಗ ಇವರಲ್ಲೂ ಕೊರೊನಾ ಸೋಂಕು ಪತ್ತೆಯಾಗಿದ್ದು, ವಿದ್ಯಾರ್ಥಿನಿಯನ್ನು ಮಿಮ್ಸ್ ‌ಗೆ ದಾಖಲಿಸಲಾಗಿದೆ. ಈಗಾಗಲೇ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕವಿದ್ದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

English summary
Two women including pregnant who came from mumbai on april 24 to kr pete tested coronavirus positive today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X