ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದಿಂಚೂ ಅಲುಗದೇ ತಾನು ನಿಂತ ಜಾಗಕ್ಕೇ ರೈಲು ತರಿಸಿಕೊಂಡ ಸುಮಲತಾ

|
Google Oneindia Kannada News

ಮಂಡ್ಯ, ನ 1: ಬೆಂಗಳೂರು - ಮೈಸೂರು ನಡುವೆ ಸಂಚರಿಸುವ ಮೆಮು ರೈಲಿನಲ್ಲಿ, ಕೆಲಸಕ್ಕಾಗಿ ಪ್ರತೀದಿನ ಅಪ್ & ಡೌನ್ ಮಾಡುವ ಮಹಿಳೆಯರಿಗಾಗಿ ಎರಡು ವಿಶೇಷ ಬೋಗಿಗೆ ಸಂಸದೆ ಸುಮಲತಾ, ಗುರುವಾರ (ಅ 31) ಚಾಲನೆ ನೀಡಿದರು.

ಎಂಬತ್ತು ಆಸನಗಳುಳ್ಳ ವಿಶೇಷ ಬೋಗಿಗಳನ್ನು ರೈಲಿನಲ್ಲಿ ಅಳವಡಿಸಲಾಗಿದೆ. ಮೈಸೂರುನಿಂದ ಬೆಂಗಳೂರಿಗೆ ಮಹಿಳೆಯರಿಗಾಗಿಯೇ ವಿಶೇಷ ರೈಲು ಆರಂಭಿಸುವಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದರು.

ಮೈಸೂರು-ಬೆಂಗಳೂರು ಮಧ್ಯೆ ಮಹಿಳೆಯರಿಗಾಗಿ ವಿಶೇಷ ರೈಲು: ಸುಮಲತಾ ಒತ್ತಾಯಮೈಸೂರು-ಬೆಂಗಳೂರು ಮಧ್ಯೆ ಮಹಿಳೆಯರಿಗಾಗಿ ವಿಶೇಷ ರೈಲು: ಸುಮಲತಾ ಒತ್ತಾಯ

ವಿಶೇಷ ಬೋಗಿಯಿರುವ ರೈಲು ಬೆಂಗಳೂರಿನಿಂದ ಮಂಡ್ಯಕ್ಕೆ ಬಂದಿತ್ತು. ಸುಮಲತಾ ನಿಂತಿದ್ದ ಜಾಗದಿಂದ ಕೇವಲ ಹತ್ತು ಮೀಟರ್ ದೂರದಲ್ಲಿ ರೈಲು ನಿಂತಿತ್ತು. ಅಧಿಕಾರಿಗಳು ಬೋಗಿಗೆ ಚಾಲನೆ ನೀಡುವಂತೆ ಮನವಿ ಮಾಡಿದರು.

Two Special Coach For Women In Bengaluru - Mysuru Memu Train

ಆದರೆ, ತಾನು ನಿಂತ ಜಾಗದಿಂದ ಒಂದಿಂಚೂ ಕದಲಲು ನಿರಾಕರಿಸಿದ ಸುಮಲತಾ, ತಾನು ನಿಂತ ಜಾಗಕ್ಕೇ ರೈಲನ್ನು ತರಿಸಿಕೊಂಡರು. ಆ ನಂತರವಷ್ಟೇ, ಸುಮಲತಾ ವಿಶೇಷ ಬೋಗಿಯನ್ನು ಉದ್ಘಾಟಿಸಿದರು. ಟ್ರೈನ್ ನಂಬರ್ 66551ನಲ್ಲಿ ವಿಶೇಷ ಕೋಚ್ ಅಳವಡಿಸಲಾಗಿದೆ.

"ಮೈಸೂರು-ಬೆಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 4 ಸಾವಿರದಿಂದ 5 ಸಾವಿರದವರೆಗೆ ಮಹಿಳೆಯರು ಉದ್ಯೋಗಕ್ಕೆ ಓಡಾಡುತ್ತಿರುತ್ತಾರೆ. ಜನದಟ್ಟಣೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷ ರೈಲು ಬಿಡುಗಡೆ ಮಾಡಿದರೆ ಅವರಿಗೆ ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ನಾನು ಚುನಾವಣಾ ಪ್ರಚಾರ ನಡೆಸುವ ವೇಳೆ ಮಂಡ್ಯ ಜಿಲ್ಲೆಯ ಮಹಿಳೆಯರು ಈ ಬೇಡಿಕೆಯನ್ನು ನನ್ನ ಮುಂದಿಟ್ಟಿದ್ದರು" ಎಂದು ಸುಮಲತಾ ಹೇಳಿದ್ದರು.

"ವಿಶೇಷ ಬೋಗಿಗಾಗಿ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಸಹ ಪತ್ರ ಬರೆದಿದ್ದೇನೆ" ಎಂದು ಸುಮಲತಾ ಈ ಹಿಂದೆ ಹೇಳಿದ್ದರು.

English summary
Mandya MP Sumalatha inguarated Two Special Coach For Women In Bengaluru - Mysuru Memu Train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X