ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೆಕ್‌ಪೋಸ್ಟ್‌ನಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದ ಪೇದೆಗಳ ಅಮಾನತು

|
Google Oneindia Kannada News

ಮಂಡ್ಯ, ನವೆಂಬರ್ 28: ಚೆಕ್‌ಪೋಸ್ಟ್‌ನಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದ ಇಬ್ಬರು ಪೇದೆಯನ್ನು ಅಮಾನತು ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಗೃಹಸಚಿವರ ಕಾರು ತಪಾಸಣೆ ಮಾಡದ ಕಾರಣ ಆ ಇಬ್ಬರು ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅಮಾನತು ಮಾಡಿದ್ದಾರೆ.

ಬಿಸಿ ಪಾಟೀಲ್ ಒಳ್ಳೆ ಪೊಲೀಸ್, ಒಳ್ಳೆ ಶಾಸಕನೂ ಆಗಲಿಲ್ಲ ಬಿಸಿ ಪಾಟೀಲ್ ಒಳ್ಳೆ ಪೊಲೀಸ್, ಒಳ್ಳೆ ಶಾಸಕನೂ ಆಗಲಿಲ್ಲ

ಇಬ್ಬರು ಮದ್ದೂರು ಸಂಚಾರಿ ಠಾಣೆಯ ಪೇದೆಯನ್ನು ಅಮಾನತು ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಸಮೀಪದ ಚೆಕ್‌ಪೋಸ್ಟ್‌ ಬಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕಾರು ತೆರಳುತ್ತಿದ್ದಾಗ ಅವರನ್ನು ತಪಾಸಣೆ ಮಾಡದೆ ಕರ್ತವ್ಯಲೋಪವೆಸಗಿದ್ದರು.

Two Constables Suspended In Mandya

ನವೆಂಬರ್ 20ರಂದು ಸಚಿವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರು ಗೃಹ ಸಚಿವರ ಕಾರು ತಡೆಯಲು ಮುಂದಾದರು. ಚಾಲಕ ಕಾರು ನಿಲ್ಲಿಸದೆ ತೆರಳಿದ ಎಂದು ದೂರು ದಾಖಲಿಸಲಾಗಿದೆ.

ಕರ್ತವ್ಯ ಲೋಪದಡಿ ಪೇದೆಗಳಾದ ಶ್ರೀನಿವಾಸ್ ಮತ್ತು ಗೌರಮ್ಮ ಎಂಬುವವರನ್ನು ಅಮಾನತುಗೊಳಿಸಲಾಗಿದೆ.

ಉಪ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಡಿಸೆಂಬರ್ 5ರಂದು ಕರ್ನಾಟಕದ ಒಟ್ಟು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.

English summary
Two Constables From Maddur They Are suspended Because They are Not check the home minister's Car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X