ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ತೀರ್ಪು: ಕೆಆರ್‌ಎಸ್‌ನಲ್ಲಿ ಬಿಗಿ ಭದ್ರತೆ

By Manjunatha
|
Google Oneindia Kannada News

Recommended Video

ಕಾವೇರಿ ತೀರ್ಪು ಇಂದು : ಮೈಸೂರಿನ ಕೆ ಆರ್ ಎಸ್ ನಲ್ಲಿ ಬಿಗಿ ಭದ್ರತೆ | Oneindia Kannada

ಮಂಡ್ಯ, ಫೆಬ್ರವರಿ 05: ಕಾವೇರಿ ನದಿ ನೀರು ಹಂಚಿಕೆ ಸಂಬಂಧಪಟ್ಟಂತೆ ಇಂದು ಸುಪ್ರಿಂಕೋರ್ಟ್ ತೀರ್ಪು ಪ್ರಕಟವಾಗುವ ಸಾಧ್ಯತೆ ಇದ್ದು ಕೆಆರ್‌ಎಸ್‌ನಲ್ಲಿ ಬಿಗಿ ಬಂದೋಬಸ್ತ್ ನೇಮಿಸಲಾಗಿದೆ.

ತೀರ್ಪು ರಾಜ್ಯಕ್ಕೆ ವ್ಯತಿರಿಕ್ತವಾಗಿ ಬಂದಲ್ಲಿ ಜಿಲ್ಲೆಯಲ್ಲಿ ಗಲಭೆ ಉಂಟಾಗುವ ಸಾಧ್ಯತೆ ಇರುವ ಕಾರಣ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಿದ್ದು, ಕೆಎಸ್‌ಆರ್‌ಪಿ ತುಕಡಿ ಮತ್ತು ಡಿಎಆರ್‌ ತುಕಡಿಗಳನ್ನು ಕೆಆರ್‌ಎಸ್‌ ಬಳಿ ನಿಯೋಜಿಸಲಾಗಿದೆ, ನಗರದ ಪ್ರಮುಖ ವೃತ್ತಗಳ ಬಳಿ ಪೊಲೀಸ್ ಪಹರೆ ಹಾಕಲಾಗಿದೆ.

ಕಾವೇರಿ ವಿವಾದ: ಸುಪ್ರೀಂ ಅಂತಿಮ ತೀರ್ಪು ಇಂದು? ಕಾವೇರಿ ವಿವಾದ: ಸುಪ್ರೀಂ ಅಂತಿಮ ತೀರ್ಪು ಇಂದು?

ಕೆಆರ್ಎಸ್ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಸಿಸಿಟಿವಿ ಕಣ್ಗಾವಲನ್ನೂ ಸಹ ಹಾಕಲಾಗಿದೆ.

Tight security in KRS due to Cauvery judgment

ಬಹುತೇಕ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಲಾಗಿದ್ದು, ಯಾವುದೇ ಸಂಘಟನೆಗಳು ಉಗ್ರ ಪ್ರತಿಭಟನೆ ಮಾಡದಂತೆ ತಿಳಿಹೇಳಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದ್ದಾರೆ. ಕಾನೂನು ಚೌಕಟ್ಟಿನ ಅಡಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ ಆದರೆ ಗಲಭೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕಾವೇರಿ ನೀರಿನ ಹಂಚಿಕೆ ವಿವಾದ ಸಂಬಂಧ ಈ ಹಿಂದೆ ಬಂದಿದ್ದ ತೀರ್ಪುಗಳು ರಾಜ್ಯಕ್ಕೆ ವಿರುದ್ಧವಾಗಿದ್ದು ಆಗೆಲ್ಲಾ ಗಲಭೆಗಳು ಆಗಿದ್ದವು ಹಾಗಾಗಿ ಈ ಬಾರಿ ಗಲಭೆ ಆಗದಂತೆ ಪೊಲೀಸರು ಶ್ರಮ ಪಡುತ್ತಿದ್ದಾರೆ.

English summary
Supreem court is going to give judgment about Cauvery water dispute so tight security imposed near KRS, Mandya and Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X