ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳವಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು!

|
Google Oneindia Kannada News

ಮಂಡ್ಯ, ನವೆಂಬರ್.22: ಗ್ರಾಮ ಲೆಕ್ಕಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆ ಶೆಟ್ಟಹಳ್ಳಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮ ಲೆಕ್ಕಾಧಿಕಾರಿ ಮಹೇಶ್ ಎಂಬುವವರ ಮನೆಯು ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆ ಶೆಟ್ಟಹಳ್ಳಿ ರಸ್ತೆಯಲ್ಲಿದ್ದು, ಮಂಗಳವಾರ ರಾತ್ರಿ ಕುಟುಂಬದ ಸದಸ್ಯರು ಪೂಜೆಗೆಂದು ತೆರಳಿದ್ದರೆ, ಮಹೇಶ್ ಕರ್ತವ್ಯ ನಿಮಿತ್ತ ಕೆ.ಎಂ.ದೊಡ್ಡಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಮೈಸೂರಲ್ಲಿ ವ್ಯಾನಿಟಿ ಬ್ಯಾಗ್, ಚಿನ್ನ ಎಗರಿಸುತ್ತಿದ್ದ ಖತರ್ನಾಕ್​ ಕಳ್ಳಿಯರು ಸಿಕ್ಕಿಬಿದ್ದರುಮೈಸೂರಲ್ಲಿ ವ್ಯಾನಿಟಿ ಬ್ಯಾಗ್, ಚಿನ್ನ ಎಗರಿಸುತ್ತಿದ್ದ ಖತರ್ನಾಕ್​ ಕಳ್ಳಿಯರು ಸಿಕ್ಕಿಬಿದ್ದರು

ಇದನ್ನರಿತ ಕಳ್ಳರು ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕನ್ನ ಹಾಕಲು ಹೊಂಚುಹಾಕಿ ನಡು ರಾತ್ರಿಯಲ್ಲಿ ಮನೆಯ ಮುಂಬಾಗಿಲು ಮೀಟಿ ಒಳನುಗ್ಗಿ ಕತ್ತಿನ ಸರ, ಉಂಗುರ, ಬೆಳ್ಳಿ ಬಟ್ಟಲು ಸೇರಿದಂತೆ ಸುಮಾರು 2ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳು ಹಾಗೂ 4 ಸಾವಿರ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

Thieves steal gold worth Rs 2 lakhs at Village Collectors house

ಮೈಸೂರು ದಸರಾ ಸಮಯದಲ್ಲಿ ಕಿಲಾಡಿ ಕಳ್ಳರು ಕದ್ದಿದ್ದು ಅಷ್ಟಿಷ್ಟಲ್ಲ!ಮೈಸೂರು ದಸರಾ ಸಮಯದಲ್ಲಿ ಕಿಲಾಡಿ ಕಳ್ಳರು ಕದ್ದಿದ್ದು ಅಷ್ಟಿಷ್ಟಲ್ಲ!

ಸ್ಥಳೀಯರು ಬೆಳಗ್ಗೆ ಎದ್ದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಬಡಾವಣೆಯ ನಿವಾಸಿಗಳು ಮನೆ ಮುಂದೆ ಜಮಾಯಿಸಿ ಮನೆ ಮಾಲೀಕ ಮಹೇಶ್‌ಗೆ ವಿಷಯ ತಿಳಿಸಿದ್ದಾರೆ.

Thieves steal gold worth Rs 2 lakhs at Village Collectors house

ಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮ

ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕಾಗಮಿಸಿದ ಪುರ ಪೊಲೀಸ್ ಠಾಣೆಯ ಇನ್ಸ್ಪೆಕರ್ ಗಂಗಾಧರ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಲಾಗಿದೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

English summary
Thieves steal gold worth Rs 2 lakhs and four thousand rupees cash at Village Collector's house in Malavalli town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X