ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ; ಮನೆ ತಾರಸಿಯಲ್ಲಿ ಸೃಷ್ಟಿಯಾದ ಪುಷ್ಪಲೋಕ!

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 15; ಹೆಚ್ಚಿನವರು ತಮ್ಮ ಬಿಡುವಿನ ಸಮಯವನ್ನು ಮೊಬೈಲ್ ಹಿಡಿದು, ಹರಟೆ ಹೊಡೆದು ಕಳೆಯುತ್ತಾರೆ. ಆದರೆ ಸಿಕ್ಕ ಸಮಯವನ್ನು ಸದುಪಯೋಗಿಸಿಕೊಂಡರೆ ಮನೆಯ ಖಾಲಿ ಜಾಗದಲ್ಲಿ ಪುಷ್ಪಲೋಕವನ್ನೇ ಸೃಷ್ಟಿಸಬಹುದು ಎಂಬುದನ್ನು ಕೆ. ಆರ್. ಪೇಟೆಯ ಹೇಮಾವತಿ ಬಡಾವಣೆಯ ನಿವಾಸಿ ಕೆ. ಸವಿತಾ ತೋರಿಸಿಕೊಟ್ಟಿದ್ದಾರೆ.

ಬಿಡುವಿನ ಸಮಯವನ್ನು ಗಿಡಗಳ ಒಡನಾಟದಲ್ಲಿ ಕಳೆಯುವುದರಿಂದ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.

 ದೇಶದ 75,000 ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಸಸ್ಯಗಳ ಕೃಷಿ ದೇಶದ 75,000 ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಸಸ್ಯಗಳ ಕೃಷಿ

ಕಳೆದ ಒಂದೂವರೆ ವರ್ಷದಲ್ಲಿ ಲಾಕ್‌ಡೌನ್ ಕಾರಣದಿಂದ ಹೆಚ್ಚಿನ ಜನರು ಮನೆಯಲ್ಲೇ ನಾಲ್ಕುಗೋಡೆಗಳ ನಡುವೆ ಸಮಯವನ್ನು ಕಳೆದಿದ್ದಾರೆ. ಈ ವೇಳೆ ಹಲವರು ಹಲವು ರೀತಿಯ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನಸೆಳೆದಿದ್ದಾರೆ. ಅಂತಹವರ ಪೈಕಿ ಕೆ. ಸವಿತಾ ಕೂಡ ಒಬ್ಬರಾಗಿದ್ದಾರೆ.

 ಮೈಸೂರು: ರೈತರ ಪಾಲಿಗೆ ಜೂಜಾಟವಾದ ಶುಂಠಿ ಕೃಷಿ ಮೈಸೂರು: ರೈತರ ಪಾಲಿಗೆ ಜೂಜಾಟವಾದ ಶುಂಠಿ ಕೃಷಿ

Terrace Cultivation In Mandya You Planted Flowers, Vegerables

ಸವಿತಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದು, ಲಾಕ್‌ಡೌನ್ ಸಮಯದಲ್ಲಿ ವ್ಯರ್ಥ ಕಾಲಹರಣ ಮಾಡುವುದೇಕೆ? ಎಂದು ಆಲೋಚಿಸುತ್ತಿರುವಾಗಲೇ ಅವರ ಮನದ ಮೂಲೆಯಲ್ಲಿ ಮೂಡಿದ್ದು ಹೂ ತೋಟ ಮಾಡುವ ಕನಸು.

ದೇಶದೆಲ್ಲೆಡೆ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಳದೇಶದೆಲ್ಲೆಡೆ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಳ

ಅದನ್ನು ಸಕಾರಗೊಳಿಸಲು ಮುಂದಾದ ಅವರು ಮನೆಯ ಮೇಲಿದ್ದ ತಾರಸಿಯನ್ನೇ ತನ್ನ ಕನಸು ನನಸು ಮಾಡಲು ಬಳಸಿಕೊಂಡರು. ಈಗಾಗಲೇ ಬಹಳಷ್ಟು ಜನರು ತಾರಸಿಯಲ್ಲಿ ಹಲವು ರೀತಿಯ ಹೂ, ಗಿಡ, ತರಕಾರಿಗಳನ್ನು ನೆಟ್ಟು ಬೆಳೆಸಿರುವ ಬಗ್ಗೆ ತಿಳಿದಿದ್ದ ಅವರು ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಪಡೆದುಕೊಂಡು ಪುಷ್ಟಲೋಕ ನಿರ್ಮಾಣಕ್ಕೆ ಮುಂದಾದರು.

ಪ್ರತಿ ಕೆಲಸವನ್ನು ಇಷ್ಟಪಟ್ಟು ಮಾಡಿದರು; ಮೊದಲೇ ಗಿಡಮರ, ಹೂ, ತರಕಾರಿ ಬಗ್ಗೆ ಒಲವಿದ್ದುದರಿಂದ ಮತ್ತು ಈಗಾಗಲೇ ಅವರು ವಿಶೇಷ ದಿನಗಳಲ್ಲಿ ಶಾಲಾಕಾಲೇಜು ಆವರಣ, ಪಾರ್ಕ್ ಮತ್ತು ದೇವಾಲಯಗಳ ಆವರಣದಲ್ಲಿ ಹಲವು ಸಸಿಗಳನ್ನು ನೆಟ್ಟಿದ್ದರಿಂದ ಮನೆಯಲ್ಲಿ ಗಿಡಗಳ ನೆಟ್ಟು ಆರೈಕೆ ಮಾಡುವುದು ಅವರಿದೆ ಕಷ್ಟವಾಗಿ ಕಾಣಲಿಲ್ಲ.

ಮನೆಯವರು ನೀಡಿದ ಸಹಕಾರವೂ ಪ್ರೆರೇಪಣೆ ನೀಡಿತು ಹೀಗಾಗಿ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತಾ ಹೋಗಿದ್ದರ ಪರಿಣಾಮ ಮನೆಯ ತಾರಸಿಯಲ್ಲಿ ಪುಷ್ಪಗಿಡಗಳ ಲೋಕವೊಂದು ಸದ್ದಿಲ್ಲದೆ ಎದ್ದು ನಿಲ್ಲುವಂತಾಯಿತು.

ಇವತ್ತು ಅವರ ಮನೆಯ ತಾರಸಿಯಲ್ಲಿ ಪುಟ್ಟದಾದ ಪುಷ್ಪಲೋಕ ಕಾಣಿಸುತ್ತದೆ. ಅದರ ನಡುವೆ ಹೆಜ್ಜೆ ಹಾಕಿದರೆ ವಿವಿಧ ಜಾತಿಯ ಹೂಗಳು ಅರಳಿ ಕಂಗೊಳಿಸಿದರೆ, ತರಕಾರಿ, ದಾಳಿಂಬೆ, ಸೀಬೆ, ಸಪೋಟ ಹೀಗೆ ಹಲವು ಹಣ್ಣಿನ ಗಿಡಗಳು ಹುಲುಸಾಗಿ ಬೆಳೆದು ಅಚ್ಚರಿ ಮೂಡಿಸುತ್ತವೆ.

ಈ ಹಿಂದೆ ತಾವು ಭೇಟಿ ನೀಡುವ ಸ್ಥಳದ ನೆನಪಿಗಾಗಿ ಅಲ್ಲಿಂದ ಹೂಗಿಡ ಅಥವಾ ಇನ್ಯಾವುದೇ ಗಿಡಗಳಿರಲಿ ಅದನ್ನು ತಂದು ನೆಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದು ಕೂಡ ಮನೆಯಲ್ಲಿ ಗಿಡಗಳನ್ನು ಬೆಳೆಸಲು ಸಹಕಾರಿಯಾಯಿತು ಎಂದರೆ ತಪ್ಪಾಗಲಾರದು. ಬಗೆಬಗೆಯ ಗಿಡ, ಬಳ್ಳಿ, ಮರಗಳನ್ನು ನೆಟ್ಟು ಪೋಷಿಸಬೇಕೆಂಬ ಬಯಕೆ ಹೊಂದಿರುವ ಅವರು, ಸ್ಥಳದ ಕೊರತೆಯಿಂದ ಇರುವ ಜಾಗದಲ್ಲಿಯೇ ಗಿಡನೆಟ್ಟು ನೆಮ್ಮದಿ ಪಡುತ್ತಿದ್ದಾರೆ.

ತರಬೇತಿ; ತೋಟಗಾರಿಕೆ ಇಲಾಖೆ ಸಹ ತಾರಸಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ತಾರಸಿ ಕೃಷಿ ಮಾಡುವವರಿಗೆ ತರಬೇತಿಯನ್ನು ಇಲಾಖೆ ವತಿಯಿಂದ ನೀಡಲಾಗುತ್ತದೆ. ತಾರಸಿ ಕೃಷಿ ಕೇವಲ ಹವ್ಯಾಸವಾಗಿ ಉಳಿದಿಲ್ಲ, ಇದರಿಂದಾಗಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸಹ ಪಡೆಯಲು ಸಾಧ್ಯವಿದೆ.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಸಮತೋಲನ ಆಹಾರ ಒದಗಿಸುವ ಹಣ್ಣು, ತರಕಾರಿಗಳ ಪಾತ್ರದ ಬಗ್ಗೆ ಅರಿವು ಮೂಡಿಸುವುದು ಕೈತೋಟ ಮತ್ತು ತಾರಸಿ ತೋಟಗಳಲ್ಲಿ ತರಕಾರಿ ಬೆಳೆಗಳನ್ನು ಸ್ವತಃ ಸಾವಯವ ಪದ್ಧತಿಯಲ್ಲಿ ಉತ್ಪಾದಿಸಲು ತಾಂತ್ರಿಕ ಮಾರ್ಗದರ್ಶನವನ್ನು ಕೊಡಲಾಗುತ್ತದೆ.

Recommended Video

ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿದ ಪಾಕಿಸ್ತಾನ! | Oneindia Kannada

ತಾರಸಿ ಕೃಷಿ ಮೂಲಕ ಜನರು ಸೊಪ್ಪು, ಬಸಳೆ, ಮೂಲಂಗಿ, ಟೊಮೆಟೋವನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದಾಗಿದೆ.

English summary
K. Savitha of Mandya district K. R. Pete planting flowers at terrace cultivation. Fruit and vegetables also in houuse roof top.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X