ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ; ದೇವಾಲಯದಲ್ಲಿ ಪ್ರಸಾದ ವಿತರಣೆಗೆ ತಡೆ

|
Google Oneindia Kannada News

ಮಂಡ್ಯ, ಅಕ್ಟೋಬರ್ 29 : "ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಾವುದೇ ದೇವಾಲಯಗಳಲ್ಲಿ ಪ್ರಸಾದ ವಿತರಣೆಯನ್ನು ಮಾಡಬಾರದು" ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ನಿರ್ದೇಶನ ನೀಡಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳು ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಲಿಂಗಪಟ್ಟಣ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮದ ಮಾರಮ್ಮನ ದೇವಾಲಯದಲ್ಲಿ ವಿತರಣೆ ಮಾಡಿದ ಪ್ರಸಾದ ಸೇವಿಸಿ ಬುಧವಾರ 70 ಜನರು ಅಸ್ವಸ್ಥಗೊಂಡಿದ್ದರು.

 ಮಂಡ್ಯ; ಮಾರಮ್ಮ ದೇಗುಲದ ಪ್ರಸಾದ ಸೇವಿಸಿ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಮಂಡ್ಯ; ಮಾರಮ್ಮ ದೇಗುಲದ ಪ್ರಸಾದ ಸೇವಿಸಿ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮಂಗಳವಾರ ರಾತ್ರಿ ಪೂಜೆಯ ನಂತರ ಪ್ರಸಾದ ವಿತರಣೆ ಮಾಡಲಾಗಿತ್ತು. ಪ್ರಸಾದ ಸೇವಿಸಿದ 70 ಮಂದಿ ಅಸ್ವಸ್ಥರಾಗಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಲಿಂಗಪಟ್ಟಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

 ಮಂಡ್ಯ; ಚಿನ್ನ ವಂಚನೆ ಪ್ರಕರಣ ಆರೋಪಿಯಿಂದ ನಡೀತಿತ್ತು ಸೆಕ್ಸ್ ಸಿ.ಡಿ ದಂಧೆ ಮಂಡ್ಯ; ಚಿನ್ನ ವಂಚನೆ ಪ್ರಕರಣ ಆರೋಪಿಯಿಂದ ನಡೀತಿತ್ತು ಸೆಕ್ಸ್ ಸಿ.ಡಿ ದಂಧೆ

Temple Prasada Tragedy DC Visited Malavalli Lingapattana Village

"ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ದೇವಾಲಯದಲ್ಲಿ ಪ್ರಸಾದ ವಿತರಣೆಯನ್ನು ಮಾಡಬಾರದು. ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರನ್ನು ಸೇರಿಸಿ ಗ್ರಾಮದ ಎಲ್ಲಾ ಜನರಿಗೂ ಕೋವಿಡ್ ಪರೀಕ್ಷೆ ಮಾಡಿಸಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಬಾಗಿಲು ಮುಚ್ಚಿದ್ದ ಸುಳ್ವಾಡಿ ಮಾರಮ್ಮನ ದೇಗುಲದಲ್ಲೂ ಆದಾಯ ಬಾಗಿಲು ಮುಚ್ಚಿದ್ದ ಸುಳ್ವಾಡಿ ಮಾರಮ್ಮನ ದೇಗುಲದಲ್ಲೂ ಆದಾಯ

ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಜನರ ಮನೆಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಆರೋಗ್ಯ ವಿಚಾರಿಸಿದರು. ಗ್ರಾಮದಲ್ಲಿ ಆಚರಿಸುವ ಧಾರ್ಮಿಕ ಆಚರಣೆಗಳನ್ನು ತಮ್ಮ ಮನೆಯಲ್ಲಿಯೇ ಆಚರಿಸುವಂತೆ ಗ್ರಾಮದ ಜನರಿಗೆ ಸೂಚಿಸಿದರು.

ದೇವಾಲಯವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವಂತೆ ಸೂಚನೆ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಮುಂತಾದವರು ಜೊತೆಗಿದ್ದರು.

ದೇವಾಲಯದ ಪ್ರಸಾದ ತಿಂದು 17 ಜನರು ಮೃತಪಟ್ಟ ಘಟನೆ ಚಾಮರಾಜನಗರದ ಸುಳ್ವಾಡಿಯಲ್ಲಿ ನಡೆದಿತ್ತು. ಈ ಘಟನೆ ನಡೆದ ಒಂದು ವರ್ಷದ ಬಳಿಕ ದೇವಾಲಯವನ್ನು ಪುನಃ ತೆರೆಯಲಾಗಿದೆ.

English summary
Mandya deputy commissioner Dr. M. V. Venkatesh visited Malavalli taluk Lingapattana village. On October 28 more than 70 people fall ill after eating temple prasadam in village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X