• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಸಲ್ಮಾನರಿಲ್ಲದ ಊರಲ್ಲಿ ಮೊಹರಂ ಆಚರಣೆ

By ಮಂಡ್ಯ ಪ್ರತಿನಿಧಿ
|

ಮಂಡ್ಯ, ಅಕ್ಟೋಬರ್ 12: ತಡಗವಾಡಿ- ಈ ಊರಿನಲ್ಲಿ ಮುಸಲ್ಮಾನರಿಲ್ಲ ಅದರೂ ನಡೆಯುತ್ತದೆ ಮೊಹರಂ ಕಡೇ ದಿನ ! ಈ ಊರಿನಲ್ಲಿ ಬೆಸ್ತ ಜನಾಂಗವಿಲ್ಲ ಅದರೂ ಬ್ಯಾಟರಾಯನಿಗೆ ಕೆರೆ ಪಕ್ಕದಲ್ಲಿ ಪೂಜೆ ಸಲ್ಲುತ್ತದೆ! ಕೆಳಜಾತಿಯ ಜನಾಂಗವೇ ಈ ಊರಿನಲ್ಲಿ ಕಾಣ ಸಿಗುವುದಿಲ್ಲ.

ಒಂದು ಕಿ.ಮೀ. ಅಂತರದಲ್ಲಿ ಅರಕೆರೆ ಸೇರಿದಂತೆ ಹಲವು ಹಳ್ಳಿಗಳಿವೆ. ಅದರೂ ಭಾಷೆಯ ವಿಷಯದಲ್ಲಿ ಸುತ್ತ ಮುತ್ತಲಿನ ಎಲ್ಲಾ ಹಳ್ಳಿಗಳಿಗೆ ಹೋಲಿಕೆ ಮಾಡಿದರೆ ಭಾಷೆಯು ಸಹ ಕೊಂಚ ಭಿನ್ನ ! ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಲಿಕೆ ಮಾಡಿದರೆ ಇಲ್ಲಿಯೇ ಹೆಚ್ಚು ಧಾರ್ಮಿಕ ಆಚರಣೆಗಳು ನಡೆಯುವುದುಂಟು.

ಈ ಹಬ್ಬದಲ್ಲಿ ಫಕೀರರಿರುತ್ತಾರೆ, ಅವರನ್ನ ಕೋಡಂಗಿಗಳು ಎಂದು ಕರೆಯುವುದುಂಟು. ನೀವು ಅಂದುಕೊಂಡ ಹಾಗೇ ಇದು ನಮ್ಮ ವೇಷ ಭೂಷಣವಲ್ಲ, ಇದು ಬುಡಕಟ್ಟು ಜನಾಂಗದವರ ವೇಷಭೂಷಣ ಹಾಗೂ ಅವರ ನೃತ್ಯ ಕೌಶಲ್ಯ. ಹಿಂದೆ ಇತ್ತು, ಈಗ ನಶಿಸಿ ಹೋಗಿದೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯ.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]

ಈ ಊರಿನಲ್ಲಿ ಬಳ್ಳಾರಿ ಎಂಬ ನಾಮಧೇಯವಿರುವವರೇ ಹೆಚ್ಚು ಬಳ್ಳಾರಿಯಮ್ಮನ ದೇವಸ್ಥಾನ ಮಂಡ್ಯ ಜಿಲ್ಲೆಯಲ್ಲಿ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉಪ ಕಥೆಯೂ ಉಂಟು.[ಮುಸ್ಲಿಂ ಬಾಲಕನ ಪ್ರಾಣ ಉಳಿಸಿದ ಹಿಂದೂ ಯುವಕರು!]

ತಡಗವಾಡಿಯ ಹಿನ್ನಲೆ:

ತಡಗ ಎಂದರೆ ನಿಲ್ಲುವುದು, ತಡೆ, ನಿಲ್ಲಿಸು ಎಂದರ್ಥ. ವಾಡಿ ಎಂದರೇ ಮರಾಠಿ ಭಾಷೆಯಲ್ಲಿ ಸೈನ್ಯ ಎಂದರ್ಥ. ಚಾರಿತ್ರಿಕವಾಗಿ ಹೇಳುವುದಾದರೆ ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸೇನೆ ಸೋತು ಓಡಿ ಹೋಗುವ ಸಮಯದಲ್ಲಿ ಈ ಮಾರ್ಗವಾಗೇ ಓಡಿ ಹೋಗುವಾಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಸೈನ್ಯವನ್ನು ತಡೆದು ನಿಲ್ಲಿಸಿ ಎಂದು ಆಜ್ಞೆ ಹೊರಡಿಸಿದರಂತೆ.

ಅದರಂತೆಯೇ ಈಗಿನ ತಡಗವಾಡಿ ಎಂಬಲ್ಲಿ ಸೇನೆಯನ್ನು ತಡೆದು ನಿಲ್ಲಿಸಿದ್ದರಿಂದಾಗಿ ತಡಗವಾಡಿ ಎಂಬ ಹೆಸರು ಬಂದಿದೆ ಎಂದು ಇತಿಹಾಸಕಾರರ ಅಭಿಪ್ರಾಯ ಹಾಗೂ ಇದೇ ಜಾಗದಲ್ಲಿ ಮೈಸೂರು ಸಂಸ್ಥಾನದವರು ಮರಾಠಿಗರ ನಡುವೆ ಯುದ್ದವಾಗಿದೆ ಎನ್ನುವ ಉಲ್ಲೇಖಗಳಿವೆ.

ಅದೇ ರೀತಿ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಲಿಕೆ ಮಾಡಿ ನೋಡಿದರೆ ಕೊಂಚ ಭಿನ್ನ ಭಾಷೆ ಹಾಗೂ ಧಾರ್ಮಿಕ ಆಚಾರಣೆಯೂ ಕೊಂಚ ಭಿನ್ನವಾಗಿದೆ. ನಿಜಕ್ಕೂ ಈ ಊರಿನಲ್ಲಿ ಬಳ್ಳಾರಿ ಎಂಬ ಹೆಸರು ಹೆಚ್ಚು ಜನಪ್ರಿಯ.

ಒಂದು ಕಾಲದಲ್ಲಿ ಮಂಡ್ಯ ಸುತ್ತಮುತ್ತ ಹೆಚ್ಚು ಕಬ್ಬನ್ನು ಬೆಳೆಯಲಾಗುತ್ತಿತ್ತು. ಆ ಕಬ್ಬನ್ನು ಕಟಾವು ಮಾಡಲು ಬಳ್ಳಾರಿಯಿಂದ ಜನರು ಬರುತ್ತಿದ್ದರು. ಆಗ ಬಂದ ಜನರಿಗೆ ವರ್ಷ ಪೂರ್ತಿ ಕೆಲಸ ಸಿಕ್ಕ ಕಾರಣ ಜನರಿಲ್ಲದ ಈ ಊರಿನಲ್ಲಿ ನೆಲೆ ನಿಂತರಂತೆ ಎನ್ನುವುದು ಒಂದು ಉಪಕಥೆ. ಈ ಕಥೆಗೆ ಪುಷ್ಠಿ ನೀಡುವಂತೆ ಈಗಲೂ ಅಲ್ಲಲ್ಲಿ ಕಬ್ಬು ಕಡಿಯಲು ಬಳ್ಳಾರಿಯಿಂದ ಜನರನ್ನು ಕರೆಸಿ ಎಂದು ಹೇಳುವುದುಂಟು.

ಇವರ ಮಧ್ಯೆ ಮೂಲ ತಡಗವಾಡಿ ಕುಟುಂಬಗಳೂ ಸಹ ಇದ್ದವು ಎನ್ನುವುದು ಇತಿಹಾಸಕಾರರ ನಿಲುವು. ಹೇಳುತ್ತ ಸಾಗಿದರೆ ಈ ಸಣ್ಣ ಗ್ರಾಮದಲ್ಲಿ ದೊಡ್ಡ ನಿಗೂಢತೆಯೇ ಅಡಗಿದೆ. ಈ ಊರಿನಲ್ಲಿ ಬಾಬಯ್ಯನ (ಮೊಹರಂ ಕಡೆ ದಿನ) ಹಬ್ಬವಿರುವುದರಿಂದ ಈಗಾಗಲೇ ಮುಸ್ಲಿಮರು ಊರಿನಲ್ಲಿ ಬೀಡು ಬಿಟ್ಟಿದ್ದು, ಹಿಂದೂ ಮತ್ತು ಮುಸ್ಲಿಮರ ಐಕ್ಯತೆಗೆ ತಡಗವಾಡಿ ಗ್ರಾಮ ಸಾಕ್ಷಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tadagavadi is a small village in Mandya district where Muḥarram observed by all community. Tadagavadi is known for its communal harmony between Hindu-Muslim and other sub castes. Muḥarram is the first month of the Islamic calendar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more