ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುವಾರ ಸಂಜೆಗೆ ಟೂರಿಂಗ್ ಟಾಕೀಸ್ ಎತ್ತಂಗಡಿ: ಶಿವರಾಮೇಗೌಡ

|
Google Oneindia Kannada News

Recommended Video

ಸುಮಲತಾ ಅಂಬರೀಶ್, ಯಶ್ ಹಾಗು ದರ್ಶನ ವಿರುದ್ಧ ವಾಗ್ದಾಳಿ ನಡೆಸಿದ ಎಲ್ ಆರ್ ಶಿವರಾಮೇಗೌಡ | Oneindia Kannada

ಮಂಡ್ಯ, ಏಪ್ರಿಲ್ 18: ಮಂಡ್ಯ ಕ್ಷೇತ್ರದ ಹಾಲಿ ಸಂಸದ ಶಿವರಾಮೇಗೌಡ ಅವರು ಇಂದು ಮತದಾನ ಮಾಡಿ, ಈ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಪರವಾಗಿ ಪ್ರಚಾರ ಮಾಡಿದ ನಟ ದರ್ಶನ್ ಹಾಗೂ ಯಶ್ ವಿರುದ್ಧ ಶಿವರಾಮೇಗೌಡ ಅವರು ಟೀಕೆ, ವ್ಯಂಗ್ಯ, ಗೇಲಿ ಮಾತುಗಳನ್ನಾಡಿದ್ದರು.

ಸುಮಲತಾ ಅವರನ್ನು ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರರನ್ನೇ ಮೀರಿಸುವ 'ಮಾಯಾಂಗನೆ' ಎಂದಿದ್ದರು. ಶಿವರಾಮೇಗೌಡ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಜಯ : ಸಮೀಕ್ಷೆ ವರದಿಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಜಯ : ಸಮೀಕ್ಷೆ ವರದಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮ್ಐತ್ರಿ ಅಭ್ಯರ್ಥಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಮಂಡ್ಯದಲ್ಲಿ ಇಂದು(ಏ.18)ಮತದಾನ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ..

ನಾಗಮಂಗಲದಲ್ಲಿ ಮತದಾನ ಮಾಡಿದ ಹಾಲಿ ಸಂಸದ

ನಾಗಮಂಗಲದಲ್ಲಿ ಮತದಾನ ಮಾಡಿದ ಹಾಲಿ ಸಂಸದ

ಇಂದು ನಾಗಮಂಗಲದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಲ್ ಆರ್ ಶಿವರಾಮೇಗೌಡ,ನಟಿ ಸುಮಲತಾ ಹಾಗೂ ನಟರಾದ ದರ್ಶನ್, ಯಶ್ ಕುರಿತು ಪರೋಕ್ಷ ದಾಳಿ ನಡೆಸಿರುವ ಅವರು, ಇಂದು ಸಂಜೆಯೇ ಟೂರಿಂಗ್ ಟಾಕೀಸ್ ಟೆಂಟ್ ಮಂಡ್ಯದಿಂದ ಖಾಲಿಯಾಗಲಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಹೀನಾಯವಾಗಿ ಸೋಲಲಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಸುಮಲತಾ ವಿರುದ್ಧ ನಿರಂತರ ವಾಗ್ದಾಳಿ

ಸುಮಲತಾ ವಿರುದ್ಧ ನಿರಂತರ ವಾಗ್ದಾಳಿ

ಸುಮಲತಾ ಅಂಬರೀಷ್ ಅವರು ಉಮೇದುವಾರಿಕೆ ಸಲ್ಲಿಸಿದ ದಿನದಿಂದ ನಿರಂತರವಾಗಿ ಅವರ ವಿರುದ್ಧ ಶಿವರಾಮೇಗೌಡ ಅವರು ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಸುಮಲತಾ ಅವರು ಗೌಡ್ತಿ ಅಲ್ಲ, ಅವರು ನಾಯ್ಡು ಎಂದು ಹೇಳಿದರು. ಚುನಾವಣೆ ಬಳಿಕ ಮಂಡ್ಯದಲ್ಲಿ ಇವರೆಲ್ಲ ಕಾಣಿಸಿಕೊಳ್ಳುವುದಿಲ್ಲ. ಟೂರಿಂಗ್ ಟಾಕೀಸ್ ರೀತಿಯಲ್ಲಿ ಜಾಗ ಖಾಲಿ ಮಾಡುತ್ತಾರೆ ಎಂದು ಹೇಳಿದರು. ಯಶ್ ಹಾಗೂ ದರ್ಶನ್ ಅವರ ವೈಯಕ್ತಿಕ ವಿಚಾರಗಳನ್ನು ಕೆದಕಿದರು.

ಮತದಾನದ ನಂತರ ಸುಮಲತಾ ಪ್ರತಿಕ್ರಿಯೆ

ಮತದಾನದ ನಂತರ ಸುಮಲತಾ ಪ್ರತಿಕ್ರಿಯೆ

"ನನಗೇ ನಾನು ಮತಹಾಕಿಕೊಳ್ಳೋಕೆ ಸಂತಸವಾಗುತ್ತೆ. ಮೊದಲ ಬಾರಿಗೆ ನನಗೆ ನಾನೇ ಮತಹಾಕಿಕೊಳ್ಳುತ್ತಿದ್ದೇನೆ. ಒಬ್ಬ ಮಹಿಳೆಯಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಹೋರಾಡಿದ್ದೇನೆ. ಈ ಹೋರಾಟ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ" ಎಂದು ಸುಮಲತಾ ಹೇಳಿದರು.

ಇವಿಎಂ ದೋಷದ ಬಗ್ಗೆ ಸುಮಲತಾ

ಇವಿಎಂ ದೋಷದ ಬಗ್ಗೆ ಸುಮಲತಾ

"ಇವಿಎಂ ದೋಷದ ಬಗ್ಗೆ ಹಲವು ದೂರುಗಳಿವೆ. ಅದನ್ನು ಚುನಾವಣಾ ಆಯೋಗ ಸರಿಪಡಿಸುತ್ತದೆ ಎಂದು ನಂಬಿದ್ದೇನೆ. ಚುನಾವಣಾ ಆಯೋಗದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.ನನಗೆ ಅನ್ಯಾಯವಾಗೋಲ್ಲ ಎಂದುಕೊಂಡಿದ್ದೇನೆ. ಮಂಡ್ಯದ ಜನರು ಬುದ್ಧಿವಂತರು, ಮತದಾರರು ಯಾರೂ ಮೂರ್ಖರಲ್ಲ. ಅವರು ನಮಗಿಂತ ಬುದ್ಧಿವಂತರಾಗಿ ಮತಚಲಾಯಿಸುತ್ತಾರೆ. ನನಗೆ ಅನ್ಯಾಯವಾಗೋಲ್ಲ ಎಂದುಕೊಂಡಿದ್ದೇನೆ' ಎಂದು ಸುಮಲತಾ ಹೇಳಿದರು

English summary
Lok Sabha Elections 2019: Mandya MP LR Shivarame Gowda takes on BJP supported independent candidate Sumalatha. Sumalatha's touring talkies will be shut down by today evening he said after casting his vote at Nagamangala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X