ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಚುನಾವಣಾ ಚಿಹ್ನೆ ಯಾವುದು?

|
Google Oneindia Kannada News

ಮಂಡ್ಯ, ಮಾರ್ಚ್ 26 : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರು ಮೂರು ಚಿಹ್ನೆಗಳಲ್ಲಿ ಒಂದನ್ನು ನೀಡುವಂತೆ ಮನವಿ ಮಾಡಿದ್ದಾರೆ. ಏಪ್ರಿಲ್ 18ರಂದು ಮಂಡ್ಯದಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುಮಲತಾ ಅಂಬರೀಶ್ ಅವರು ಈಗಾಗಲೇ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾದ ಕಾರಣ ಚುನಾವಣಾ ಚಿಹ್ನೆಯನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

ಸುಮಲತಾ, ದರ್ಶನ್‌ಗೆ ಸಿಆರ್‌ಪಿಎಫ್ ಭದ್ರತೆ ಕೊಡಿ : ಬಿಜೆಪಿ ಪತ್ರಸುಮಲತಾ, ದರ್ಶನ್‌ಗೆ ಸಿಆರ್‌ಪಿಎಫ್ ಭದ್ರತೆ ಕೊಡಿ : ಬಿಜೆಪಿ ಪತ್ರ

ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ ಇವುಗಳಲ್ಲಿ ಒಂದನ್ನು ನೀಡುವಂತೆ ಸುಮಲತಾ ಅವರು ಮನವಿ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿತ್ತು. ಇನ್ನೆರಡು ದಿನದಲ್ಲಿ ಚಿಹ್ನೆ ಹಂಚಿಕೆಯಾಗುವ ಸಾಧ್ಯತೆ ಇದೆ.

ಸುಮಲತಾ ಹಣಿಯಲು ಹೊಸ ತಂತ್ರ: ಅದೇ ಹೆಸರಿನ ಮೂವರಿಂದ ನಾಮಪತ್ರಸುಮಲತಾ ಹಣಿಯಲು ಹೊಸ ತಂತ್ರ: ಅದೇ ಹೆಸರಿನ ಮೂವರಿಂದ ನಾಮಪತ್ರ

Sumalatha request for 3 election symbols

ಹಲವು ಕಾರಣಗಳಿಗೆ ಮಂಡ್ಯ ಚುನಾವಣೆಯ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಎದುರಾಳಿಯಾಗಿದ್ದಾರೆ.

ಬಿಜೆಪಿ ಪಟ್ಟಿ ಬಿಡುಗಡೆ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆಬಿಜೆಪಿ ಪಟ್ಟಿ ಬಿಡುಗಡೆ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆ

4 ಸುಮಲತಾ ಸ್ಪರ್ಧೆ : ಮಂಡ್ಯದಲ್ಲಿ ಸುಮಲತಾ ಹೆಸರಿನ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದ್ದರಿಂದ, ಎಚ್ಚರಿಕೆಯಿಂದ ಚುನಾವಣಾ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
* ನಿಖಿಲ್ ಕುಮಾರಸ್ವಾಮಿ (ಜೆಡಿಎಸ್-ಕಾಂಗ್ರೆಸ್‌)
* ಸುಮಲತಾ ಅಂಬರೀಶ್ (ಪಕ್ಷೇತರ)
* ಎಂ.ಸುಮಲತಾ (ಪಕ್ಷೇತರ)
* ಪಿ.ಸುಮಲತಾ (ಪಕ್ಷೇತರ)
* ಸುಮಲತಾ (ಪಕ್ಷೇತರ)

English summary
Sumalatha Ambareesh independent candidate from Mandya request for 3 election symbols for Lok sabha elections 2019. BJP supported Sumalatha Ambareesh in Mandya seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X