ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ನಾಮಪತ್ರ ಸಲ್ಲಿಕೆ : ಡಿಕೆಶಿಗೆ ಕುಮಾರಸ್ವಾಮಿ ಫೋನ್ ಕರೆ!

|
Google Oneindia Kannada News

Recommended Video

ಸುಮಲತಾ ನಾಮಪತ್ರ ಸಲ್ಲಿಸುವಾಗ ಡಿ ಕೆ ಶಿವಕುಮಾರ್ ಗೆ ಕುಮಾರಸ್ವಾಮಿ ಕರೆ ಮಾಡಿದ್ಯಾಕೆ?

ಮಂಡ್ಯ, ಮಾರ್ಚ್ 20 : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ನಾಯಕರು ಜೊತೆಗಿದ್ದರು. ಆದ್ದರಿಂದ, ಎಚ್.ಡಿ.ಕುಮಾರಸ್ವಾಮಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದಾರೆ.

ಬುಧವಾರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು 11.30ಕ್ಕೆ ನಾಮಪತ್ರವನ್ನು ಸಲ್ಲಿಸಿದರು. ನಟರಾದ ದರ್ಶನ್, ಯಶ್ ಮತ್ತು ನೂರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?

ನಾಮಪತ್ರ ಸಲ್ಲಿಕೆ ಬಳಿಕ ಮಂಡ್ಯದ ಸಿಲ್ವರ್ ಜ್ಯೂಬ್ಲಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ನೂರಾರು ಜನರು ಮತ್ತು ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಈ ಬೆಳವಣಿಗೆ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದಾರೆ.

ಸುಮಲತಾ ಅಕ್ಕ ಗೆದ್ದರೆ ಡೆಲ್ಲಿವರೆಗೆ ಮಂಡ್ಯ ಹವಾ: ಅಣ್ತಮ್ಮ ಯಶ್‌ಸುಮಲತಾ ಅಕ್ಕ ಗೆದ್ದರೆ ಡೆಲ್ಲಿವರೆಗೆ ಮಂಡ್ಯ ಹವಾ: ಅಣ್ತಮ್ಮ ಯಶ್‌

ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಸಭೆಯನ್ನು ಡಿ.ಕೆ.ಶಿವಕುಮಾರ್ ಅವರು ಕರೆದಿದ್ದು, ಸುಮಲತಾಗೆ ಬೆಂಬಲ ನೀಡುವ ನಾಯಕರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಕಾಂಗ್ರೆಸ್-ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಸಕ್ಕರೆ ನಾಡಲ್ಲಿ ಅಬ್ಬರಿಸಿದ ಯಶ್, ದರ್ಶನ್: ಟೀಕೆಗಳಿಗೆ ಸುಮಲತಾ ಪ್ರತ್ಯುತ್ತರಸಕ್ಕರೆ ನಾಡಲ್ಲಿ ಅಬ್ಬರಿಸಿದ ಯಶ್, ದರ್ಶನ್: ಟೀಕೆಗಳಿಗೆ ಸುಮಲತಾ ಪ್ರತ್ಯುತ್ತರ

ಕಾಂಗ್ರೆಸ್ ನಾಯಕರು ಭಾಗಿ

ಕಾಂಗ್ರೆಸ್ ನಾಯಕರು ಭಾಗಿ

ಸುಮಲತಾ ಅಂಬರೀಶ್ ಅವರು ನಡೆಸಿದ ಸಮಾವೇಶದಲ್ಲಿ ಇಂಡವಾಳು ಸಚ್ಚಿದಾನಂದ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಇದರಿಂದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದಾರೆ.

ಬಹಿರಂಗ ಹೇಳಿಕೆ ನೀಡಿದ್ದರು

ಬಹಿರಂಗ ಹೇಳಿಕೆ ನೀಡಿದ್ದರು

ಕೆಪಿಸಿಸಿ ಸದಸ್ಯ ಇಂಡವಾಳು ಸಚ್ಚಿದಾನಂದ ಅವರು, 'ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೆಲ್ಲರೂ ಸುಮಲತಾರನ್ನು ಬೆಂಬಲಿಸುತ್ತೇವೆ. ಸಂಧಾನಕ್ಕೆ ಪಕ್ಷದ ವರಷ್ಠರು ಯಾರೂ ಜಿಲ್ಲೆಗೆ ಆಗಮಿಸುವುದು ಬೇಡ. ನಿಮ್ಮ ಪ್ರಯತ್ನ ಯಶಸ್ವಿಯಾಗುವುದಿಲ್ಲ' ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಮೈತ್ರಿ ಧರ್ಮ ಪಾಲಿಸಿ

ಮೈತ್ರಿ ಧರ್ಮ ಪಾಲಿಸಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲಿಸುವುದನ್ನು ಬಿಟ್ಟು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದೆ. ಆದ್ದರಿಂದ, ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದಾರೆ.

ಸಭೆ ಕರೆದ ಡಿ.ಕೆ.ಶಿವಕುಮಾರ್

ಸಭೆ ಕರೆದ ಡಿ.ಕೆ.ಶಿವಕುಮಾರ್

ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಲವು ಕಾಂಗ್ರೆಸ್ ನಾಯಕರು ಸುಮಲತಾ ಅವರಿಗೆ ಬೆಂಬಲ ನೀಡಿರುವುದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಫೋನ್ ಕರೆ ಬಳಿಕ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ.

ಮಾ.25ಕ್ಕೆ ನಾಮಪತ್ರ ಸಲ್ಲಿಕೆ

ಮಾ.25ಕ್ಕೆ ನಾಮಪತ್ರ ಸಲ್ಲಿಕೆ

ಪಾಂಡವಪುರದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಮಾ.25ರಂದು ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ನಾನು ಮಂಡ್ಯಕ್ಕೆ ಬರುತ್ತೇನೆ. ಅಂತಿಮ ತೀರ್ಮಾನವನ್ನು ಜನರು ಮಾಡುತ್ತಾರೆ' ಎಂದರು.

English summary
Sumalatha Ambareesh on Wednesday filed nomination from Mandya as independent candidate. Some Congress leaders supported Sumalatha. Chief Minister H.D.Kumaraswammy upset with Congress and made a phone call to DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X