• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ ಬೇಡ ಮಂಡ್ಯದ ಸ್ವಾಭಿಮಾನ ಕೊಡಿ: ಸುಮಲತಾ ಭಾವನಾತ್ಮಕ ಭಾಷಣ

|
   Lok Sabha Elections 2019 : ಮತ ಬೇಡ, ಮಂಡ್ಯದ ಸ್ವಾಭಿಮಾನವನ್ನು ಕೊಡಿ ಎಂದ ಅಂಬಿ ಪತ್ನಿ

   ಮಂಡ್ಯ, ಏಪ್ರಿಲ್ 16: ಬಹಿರಂಗ ಸಮಾವೇಶದ ಕೊನೆಯ ದಿನ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅಭಿಮಾನಿಗಳ, ಮಂಡ್ಯ ಜನತೆಯ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು.

   ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

   ಇಂದು ಮಂಡ್ಯದ ಕಾಳಿಕಾಂಬಾ ದೇವಾಲಯದ ಬಳಿ ಆಯೋಜಿಸಿದ್ದ 'ಸ್ವಾಭಿಮಾನಿಗಳ ಸಮ್ಮಿಲನ' ಸಮಾವೇಶದಲ್ಲಿ ಷಭಾವನಾತ್ಮಕವಾಗಿ, ಆಕ್ರೋಶಭರಿತವಾಗಿ, ವ್ಯಂಗ್ಯವಾಗಿ ಸರ್ವ ರೀತಿಯಲ್ಲಿ ಸುಮಲತಾ ಅವರು ಮಾತನಾಡಿದರು. ಅವರ ಪ್ರತಿ ಮಾತಿಗೂ ನೆರೆದಿದ್ದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

   ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಿ ಸಮಾವೇಶ: ವಿರೋಧಿಗಳಿಗೆ ನಡುಕ

   ನಿಮ್ಮಲ್ಲಿ ನಾನು ಕೇಳುತ್ತಿರುವುದು ಮತವನ್ನಲ್ಲ, ಮಂಡ್ಯದ ಸ್ವಾಭಿಮಾನವನ್ನು ಎಂದು ಭಾವೋದ್ದವೇಗದಿಂದ ಹೇಳಿದ ಸುಮಲತಾ, ಅಂಬರೀಶ್ ಅವರನ್ನು ಎದೆಯಲ್ಲಿ ಇಟ್ಟುಕೊಂಡಿರುವ ನೀವು, ನನ್ನನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದರು.

   ನನ್ನ ಎದುರಾಳಿಗಳು ರಾಕ್ಷಸ ರಾಜಕಾರಣ ಮಾಡಿದರು, ಅವರ ವಿರುದ್ಧ ನಾನು ಚುನಾವಣೆಗೆ ಸ್ಪರ್ಧಿಸಿರುವುದು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಹೆಣ್ಣೆಂಬ ಕನಿಷ್ಟ ಗೌರವವೂ ಇಲ್ಲದೆ ನಡೆದುಕೊಂಡರು ಎಂದು ದೂರಿದ ಅವರು, ಸಿಎಂ ಅವರಿಗೆ ಯೋಧರು, ಮಹಿಳೆ, ರೈತರ ಬಗ್ಗೆ ಗೌರವ ಇಲ್ಲ ಅವರಿಗೆ ತಮ್ಮ ಕುಟುಂಬ, ಮಗನ ಮೇಲೆ ಪ್ರೀತಿ ಅಷ್ಟೆ ಎಂದು ಹೇಳಿದರು.

   'ಕುಮಾರಸ್ವಾಮಿ ಸಹಾಯ ಮಾಡಿಲ್ಲ, ಕರ್ತವ್ಯ ಮಾಡಿದ್ದಾರೆ'

   'ಕುಮಾರಸ್ವಾಮಿ ಸಹಾಯ ಮಾಡಿಲ್ಲ, ಕರ್ತವ್ಯ ಮಾಡಿದ್ದಾರೆ'

   ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ನಾನು ಕರೆತಂದೆ ಎಂದು ಹೇಳುತ್ತಾರೆ, ಹಾಗಿದ್ದರೆ ಅಂಬರೀಶ್ ಅವರಿಗೆ ಅರ್ಹತೆ ಇರಲಿಲ್ಲ, ಅವರು ಕೇಂದ್ರ ಮಂತ್ರಿಗಳಾಗಿದ್ದರು, ಅವರಿಗೆ ಅರ್ಹತೆ ಇತ್ತು ಅದಕ್ಕಾಗಿ ನೀವು ಕರೆತಂದಿರಿ, ಕರೆತರದೇ ಇದ್ದಿದ್ದರೆ ಮಂಡ್ಯದ ಜನ ಬಿಡುತ್ತಿರಲಿಲ್ಲ ಎಂದು ಹೇಳಿದರು. ತಮ್ಮ ವಿರುದ್ಧ ಕುಮಾರಸ್ವಾಮಿ ಅವರು ಮಾಡಿದ ಎಲ್ಲ ಆರೋಪಗಳಿಗೂ ಸುಮಲತಾ ಅವರು ಉತ್ತರ ನೀಡಿದರು.

   'ಯಶ್-ದರ್ಶನ್ ಅನ್ನು ಅವಮಾನಿಸಿದ್ದೀರಿ'

   'ಯಶ್-ದರ್ಶನ್ ಅನ್ನು ಅವಮಾನಿಸಿದ್ದೀರಿ'

   ನನ್ನ ಪರವಾಗಿ ನಿಂತ ಎಲ್ಲರನ್ನೂ ನೀವು ಅವಮಾನಿಸಿದಿರಿ, ಯಶ್, ದರ್ಶನ್ ಅವರಿಗೆ ತೊಂದರೆ ಕೊಟ್ಟಿರಿ, ಅವರ ವೈಯಕ್ತಿಕ ವಿಷಯ ಮಾತನಾಡಿದಿರಿ, ಅವರು ಮನಸ್ಸು ಮಾಡಿದ್ದರೆ ಒಂದೇ ನಿಮಿಷದಲ್ಲಿ ನಿಮ್ಮ ವೈಯಕ್ತಿಕ ವಿಷಯ ಹೊರಗೆ ಎಳೆಯಬಹುದಿತ್ತು, ಆದರೆ ನಾವು ಹಾಗೆ ಮಾಡುವರಲ್ಲ, ನಾವು ಗೌರವಯುತ ರಾಜಕಾರಣ ಮಾಡುತ್ತೇವೆ ಎಂದು ಅವರು ಹೇಳಿದರು.

   ನಿಗಿ ನಿಗಿ ಕೆಂಡವಾದ ಮಂಡ್ಯ ರಣಾಂಗಣದಲ್ಲಿ ಗೆಲ್ಲೋರು ಯಾರು?

   ಕಣ್ಣೀರು ಹಾಕಿದ ಸುಮಲತಾ, ಇದು ಧೈರ್ಯದ ಕಣ್ಣೀರೆಂದರು

   ಕಣ್ಣೀರು ಹಾಕಿದ ಸುಮಲತಾ, ಇದು ಧೈರ್ಯದ ಕಣ್ಣೀರೆಂದರು

   ಭಾಷಣದ ಮಧ್ಯೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುಮಲತಾ ಕಣ್ಣೀರು ಹಾಕಿದರು, ಆಗ ಜನರು ಅಳದಂತೆ ಮನವಿ ಮಾಡಿದರು, ಅದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಕಣ್ಣೀರಿನ ಹಿಂದೆ ನೋವಿಲ್ಲ, ನೀವೆಲ್ಲ ಇದ್ದೀರೆಂಬ ಧೈರ್ಯವಿದೆ ಎಂದರು. ನಾನು ಮರೆಯಬೇಕೆಂದುಕೊಂಡ ವಿಷಯವನ್ನು ಪದೇ-ಪದೇ ಚುಚ್ಚಿ ನೆನಪು ಮಾಡು ಅವರು ಸಂತಸ ಪಟ್ಟರು ಎಂದು ಅಂಬರೀಶ್ ವಿಷಯವನ್ನು ಪದೇ-ಪದೇ ಪ್ರಸ್ತಾಪಿಸಿದ್ದಕ್ಕೆ ಸುಮಲತಾ ಹೇಳಿದರು.

   ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಣೆ

   ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಣೆ

   ಉಚ್ಛಾಟನೆ ಮಾಡಿದರೂ ಸಹ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ, ಅವರನ್ನು ನಾನೆಂದೂ ಕೈ ಬಿಡುವುದಿಲ್ಲ ಎಂದು ಹೇಳಿದ ಸುಮಲತಾ, ರೈತ ಸಂಘ, ಬಿಜೆಪಿ, ಮುಸ್ಲಿಂ ಸದಸ್ಯರು, ದಲಿತ ಸಂಘ, ಕನ್ನಡ ಸಂಘಗಳಿಗೆ ಧನ್ಯವಾದ ಅರ್ಪಿಸಿದರು. ನಿಮ್ಮನ್ನು ನಂಬಿ ಬಂದಿದ್ದೇನೆ ನನ್ನ ಕೈ ಬಿಡಬೇಡಿ ಎಂದು ಅವರು ಮನವಿ ಮಾಡಿದರು.

   ಸುಮಲತಾ FB ಪೇಜ್ ಬ್ಲಾಕ್! ಕುತಂತ್ರ ಹಿಂದೆ ಇರೋದು "ಇವರೇನಾ?"

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Sumalatha Ambareesh winds up the campaign by a powerful and sentimental speech. She said I not asking vote I am asking Mandya's self-respect.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more